ಗಂಡು ಮಗು ಆಗಿಲ್ಲ ಎಂದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ಪತಿ ಅರೆಸ್ಟ್, ತಲೆ ಮರೆಸಿಕೊಂಡಿರುವ ಅತ್ತೆ-ಮಾವ
ಚಂದ್ರು ಎಂಬಾತ ತನ್ನ ಪತ್ನಿ ಶಿವಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೆ ಮಾವ ರಾಮೇಗೌಡ ಹಾಗೂ ಅತ್ತೆ ಕೆಂಪಮ್ಮ ಸಹಕಾರ ನೀಡಿರುವ ಆರೋಪ ಕೇಳಿ ಬಂದಿದೆ.

ಮೈಸೂರು: ಗಂಡು ಮಗು ಆಗಿಲ್ಲ ಎಂಬ ಕಾರಣಕ್ಕೆ ಪತ್ನಿ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆ ಹೆಚ್ಡಿ ಕೋಟೆ ತಾಲೂಕಿನ ಸೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಂದ್ರು ಎಂಬಾತ ತನ್ನ ಪತ್ನಿ ಶಿವಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೆ ಮಾವ ರಾಮೇಗೌಡ ಹಾಗೂ ಅತ್ತೆ ಕೆಂಪಮ್ಮ ಸಹಕಾರ ನೀಡಿರುವ ಆರೋಪ ಕೇಳಿ ಬಂದಿದೆ. ಶಿವಮ್ಮಗೆ ಎರಡು ಹೆಣ್ಣು ಮಕ್ಕಳಿದ್ದು ಗಂಡು ಮಗು ಬೇಕು ಎಂದು ಕಿರುಕುಳ ನೀಡಲಾಗುತ್ತಿತ್ತು.
ಇದೇ ಕಾರಣಕ್ಕಾಗಿ ಪ್ರತಿ ನಿತ್ಯ ಪತಿ ಮತ್ತು ಕುಟುಂಬಸ್ಥರು ಮಾನಸಿಕ ಹಿಂಸೆ ನೀಡುತ್ತಿದ್ದರು. ಈ ಬಗ್ಗೆ ಹಲವು ಭಾರಿ ನ್ಯಾಯ ಪಂಚಾಯತಿ ಕೂಡ ಆಗಿದೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಕಿರುಕುಳ ತಾಳಲಾರದೆ ಕಳೆದ ವರ್ಷ ಎಚ್.ಡಿ.ಕೋಟೆ ಪೊಲೀಸರಿಗೆ ಶಿವಮ್ಮ ದೂರು ನೀಡಿದ್ದರು. ಸದ್ಯ ಪತಿ ಚಂದ್ರು ಬಂಧನವಾಗಿದ್ದು ಮಾವ ರಾಮೇಗೌಡ, ಅತ್ತೆ ಕೆಂಪಮ್ಮ ತಲೆ ಮರೆಸಿಕೊಂಡಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಂಗಿನ ಮರದಿಂದ ಬಿದ್ದು ರೈತ ಸಾವು
ಹುಣಸೂರು ತಾಲೂಕಿನ ಹೊನ್ನಿಕುಪ್ಪೆ ಗ್ರಾಮದಲ್ಲಿ ತೆಂಗಿನ ಮರದಿಂದ ಬಿದ್ದು ಯುವ ರೈತ ಮೃತಪಟ್ಟ ಘಟನೆ ನಡೆದಿದೆ. ನವೀನ್‌ಕುಮಾರ್ (28) ಮೃತ ರೈತ. ತೆಂಗಿನ ಮರದಿಂದ ಕಾಯಿ ಕೀಳುವ ವೇಳೆ ತೆಂಗಿನ ಗರಿ ಸಮೇತ ನವೀನ್ ಕೆಳಗೆ ಬಿದ್ದಿದ್ದಾರೆ. ತಕ್ಷಣ ನವೀನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ತಾಯಿಯ ಜೊತೆ ಅನೈತಿಕ ಸಂಬಂಧ ಹೊಂದಿದವನನ್ನು ಬರ್ಬರವಾಗಿ ಕೊಂದ ಮಗ
ಶಾರ್ಟ್ಸರ್ಕ್ಯೂಟ್ನಿಂದ ಮನೆಗೆ ಬೆಂಕಿ, ದಂಪತಿ ಸಜೀವ ದಹನ
ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಶಾರ್ಟ್ಸರ್ಕ್ಯೂಟ್ನಿಂದ ಮನೆಗೆ ಬೆಂಕಿ ಹಚ್ಚಿಕೊಂಡಿದ್ದು ದಂಪತಿ ಸಜೀವ ದಹನವಾಗಿರುವ ಘಟನೆ ನಡೆದಿದೆ. ಪತಿ ರಾಗಯ್ಯ(39), ಪತ್ನಿ ಶಿಲ್ಪಾ(35) ಮೃತ ದುರ್ದೈವಿಗಳು. ವಿದ್ಯುತ್ ಶಾರ್ಟ್ಸರ್ಕ್ಯೂಟ್ನಿಂದ ಮನೆಯಲ್ಲಿ ಬೆಂಕಿ ಹರಡಿ ದುರಂತ ಸಂಭವಿಸಿದೆ. ಅಶೋಕಯ್ಯ ಕಾಳಬೆಳಗುಂದಿ ಎಂಬುವರಿಗೆ ಸೇರಿದ ಮನೆಯಲ್ಲಿ ಘಟನೆ ಸಂಭವಿಸಿದೆ. ಅಗ್ನಿಶಾಮಕದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:23 am, Mon, 27 March 23