ಪಂಚರತ್ನ ಯಾತ್ರೆ ಸಮಾರೋಪದಲ್ಲಿ ಹೆಚ್.ಡಿ.ದೇವೇಗೌಡ ಭಾಷಣ: ಕಣ್ಣೀರು ಹಾಕಿದ ಕುಮಾರಸ್ವಾಮಿ, ರೇವಣ್ಣ
ಜೆಡಿಎಸ್ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭ ಭಾನುವಾರ ನಗರದ ಉತ್ತನಹಳ್ಳಿ ರಿಂಗ್ ರಸ್ತೆಯ ಜ್ವಾಲಾಮುಖಿ ತ್ರಿಪುರ ದೇಗುಲದ ಮೈದಾನದಲ್ಲಿ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮೈಸೂರು: ಜೆಡಿಎಸ್ ಪಂಚರತ್ನ ಯಾತ್ರೆ (Pancharatna Yatra) ಸಮಾರೋಪ ಸಮಾರಂಭ ಭಾನುವಾರ ನಗರದ ಉತ್ತನಹಳ್ಳಿ ರಿಂಗ್ ರಸ್ತೆಯ ಜ್ವಾಲಾಮುಖಿ ತ್ರಿಪುರ ದೇಗುಲದ ಮೈದಾನದಲ್ಲಿ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ರೈತಗೀತೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ದೇವರ ಶಕ್ತಿ, ಕಾರ್ಯಕರ್ತ ಶ್ರಮದಿಂದ ಈ ಬಾರಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಾನು ಒಬ್ಬ ರೈತನ ಮಗ. ನೀವು ರೈತರ ಮಕ್ಕಳು. ಬಣ್ಣದ ನಾಟಕದ ಮಾತುಗಳಿಂದ ಯಾವುದೇ ಅಧಿಕಾರಕ್ಕೆ ಬಂದವರಲ್ಲ ಎಂದು ಹೇಳಿದರು. ಹೆಚ್.ಡಿ.ದೇವೇಗೌಡರು ಲಿಖಿತ ಭಾಷಣ ಓದುತ್ತಿದ್ದರೆ, ಇತ್ತ ಕಡೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ H.D.ರೇವಣ್ಣ ಭಾವುಕರಾಗಿ ಕಣ್ಣೀರು ಹಾಕಿದರು.
ನಾನು ಜೀವನದಲ್ಲಿ ಉಳಿದಿದ್ದು ರಾಜಕೀಯದಲ್ಲಿ ಬೆಳೆದಿದ್ದು, ನಿಮ್ಮಿಂದ ಮತ್ತು ದೇವರ ಕೃಪೆಯಿಂದ. ನನ್ನ ಸುಧೀರ್ಘ ಜೀವದನದಲ್ಲಿ ಧೃತಿಗೆಡದೆ ನಡೆದಿದ್ದು ಎರಡು ಶಕ್ತಿಗಳಿಂದ. ಒಂದು ದೇವರು, ಇನ್ನೊಂದು ನಮ್ಮ ಕಾರ್ಯಕರ್ತರು. ನನಗೆ ತುಂಬಾ ಆರೋಗ್ಯ ಅದಗೆಟ್ಟಿತ್ತು. ನಿಮ್ಮನ್ನು ನೋಡುತ್ತೇನೋ, ಇಲ್ಲವೋ ಎಂದು ಕೊಂಡಿದ್ದೆ. ಸದ್ಯ ಸ್ವಲ್ಪ ಚೇತರಿಕೆ ಕಂಡಿದ್ದೇನೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯರನ್ನ ಸಿಎಂ ಮಾಡಲ್ಲ ಎಂದು ಭವಿಷ್ಯ ನುಡಿದ ಯತ್ನಾಳ್
ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೈಕಟ್ಟಿ ಹಾಕಿದ್ದರೂ ರೈತರ ಸಾಲಮನ್ನಾ ಮಾಡಿದ್ದರು. SC-ST, ಮುಸ್ಲಿಮರ ಏಳಿಗೆಗಾಗಿ ನಾನು ಶ್ರಮಿಸಿದ್ದೇನೆ. ನಮ್ಮ ಪಕ್ಷ, ನಮ್ಮ ದುಡಿಮೆಯನ್ನು ನಂಬಿ ಎಂದು ಹೆಚ್.ಡಿ.ದೇವೇಗೌಡ ಹೇಳಿದರು.
ಸಿದ್ದರಾಮಯ್ಯ, ಬೊಮ್ಮಾಯಿ ಸೇರಿ ಹಲವರು ಜೆಡಿಎಸ್‌ನಲ್ಲೇ ಬೆಳೆದವ್ರು: ಜಿ.ಟಿ.ದೇವೇಗೌಡ
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಹೆಚ್‌ಡಿಡಿರವರು ನಮಗೆ ಆದರ್ಶ ನಾಯಕರೆಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳುತ್ತಾರೆ. ಯಡಿಯೂರಪ್ಪರವರೇ ಹೇಳಿದ್ದ ಮೇಲೆ ಕಾಂಗ್ರೆಸ್‌ನವರು ಯಾವ ಲೆಕ್ಕ. ಸಿದ್ದರಾಮಯ್ಯ, ಬೊಮ್ಮಾಯಿ ಸೇರಿ ಹಲವರು ಜೆಡಿಎಸ್‌ನಲ್ಲೇ ಬೆಳೆದವ್ರು. ಕುಮಾರಸ್ವಾಮಿ ವಾಸ್ತವ್ಯ ಮಾಡುತ್ತಾರೆ. ರೈತರ ಸಾಲ ಮನ್ನ ಮಾಡುತ್ತಾರೆ. ಇದ್ರಿಂದ ಕಾಂಗ್ರೆಸ್ ಉಳಿಯಲ್ಲ ಅಂತಾ ಕುಮಾರಸ್ವಾಮಿ ಅವರನ್ನು ತೆಗೆದರು ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಯಾರೂ ಗುಂಡಾ ನಾಯಕರಿಲ್ಲ: ಡಿ.ಕೆ.ಶಿವಕುಮಾರ್ ಆರೋಪಕ್ಕೆ ಯತ್ನಾಳ್ ತಿರುಗೇಟು
90 ದಿನಗಳ ಕಾಲ ಈ ಪಂಚರತ್ನ ರಥಯಾತ್ರೆ ಮಾಡಿದ್ದೇವೆ: ಹೆಚ್.ಡಿ.ಕುಮಾರಸ್ವಾಮಿ
ಪಂಚರತ್ನ ಯಾತ್ರೆ ಸಮಾರೋಪದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕೋಲಾರ ಜಿಲ್ಲೆ ಮುಳಬಾಗಿಲಿನಿಂದ ಪಂಚರತ್ನ ರಥಯಾತ್ರೆ ಆರಂಭಿಸಿದ್ದೆ. 90 ದಿನಗಳ ಕಾಲ ಈ ಪಂಚರತ್ನ ರಥಯಾತ್ರೆ ಮಾಡಿದ್ದೇವೆ. ಕನ್ನಡನಾಡಿನ ಜನತೆ ಆಶೀರ್ವಾದದಿಂದ JDS ಅಧಿಕಾರಕ್ಕೆ ಬರುತ್ತದೆ. ನನಗೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದು ರಾಮನಗರ ಜಿಲ್ಲೆಯ ಜನರು. ನನ್ನ ರಾಜಕೀಯ ಬೆಳವಣಿಗೆಗೆ ಕಾರಣವಾಗಿದ್ದು ಮಂಡ್ಯ, ಮೈಸೂರು ಜನ. ರೈತರ ಮಕ್ಕಳು ಕೂಡ ನನ್ನ ಹೋರಾಟಕ್ಕೆ ದೇಣಿಗೆ ನೀಡಿದ್ದಾರೆ.
ಮದುವೆಗೆ ಹೆಣ್ಣು ಸಿಗ್ತಿಲ್ಲ: ಹೆಚ್ಡಿಕೆಗೆ ಪತ್ರ ಬರೆದ ಕೋಲಾರದ ರೈತನ ಮಗ
ಮದುವೆಗೆ ಹೆಣ್ಣು ಸಿಗ್ತಿಲ್ಲ ಅಂತಾ ಕೋಲಾರದ ರೈತನ ಮಗ ಪತ್ರ ಕೊಟ್ಟಿದ್ದ. ಮುಂದಿನ ದಿನಗಳಲ್ಲಿ ರೈತರ ಮಕ್ಕಳಿಗೆ ಅನುಕೂಲ ಆಗಲು ಕಾರ್ಯಕ್ರಮ ಮಾಡಲಾಗುವುದು. ಕೋಲಾರದ ‘ಕೈ’ ನಾಯಕರು ವೋಟ್ ಪಡೆಯಲು ಸಾಲ ಕೊಟ್ಟಿದ್ದರು. ಹಾಗಾಗಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾ ಮಾಡಲು ನಿರ್ಧಾರ ಮಾಡಲಾಗಿದೆ. ಸಮ್ಮಿಶ್ರ ಸರ್ಕಾರದ ವೇಳೆ ನಾನು 2ನೇ ಬಾರಿ ಮುಖ್ಯಮಂತ್ರಿ ಆಗಿದ್ದೆ. ಆಗ ಕಾಂಗ್ರೆಸ್ ನಾಯಕರು ನಮ್ಮ ಯೋಜನೆ ನಿಲ್ಲಿಸಬಾರದು ಎಂದಿದ್ದರು. ಆದರೂ ನಾನು ರೈತರ ಸಾಲಮನ್ನಾ ಮಾಡಿದ್ದೆ. ಬಿಜೆಪಿ ಸರ್ಕಾರದಲ್ಲಿ ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಶತ ಆಯುಷ್ಯಗಳಾಗಿ ಇರಬೇಕು. ಈ ಕಾರ್ಯಕ್ರಮ ಇಡೀ ರಾಜ್ಯಕ್ಕೆ ತಲುಪಬೇಕು, ಇದರಲ್ಲಿ ಸ್ವಾರ್ಥವಿಲ್ಲ. ನಿಮ್ಮ ಹಾರೈಕೆಯಿಂದ ಈ ಬಾರಿ 120 ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು. ಈ ಪಂಚರತ್ನ ಯಾತ್ರೆ ಕಾರ್ಯಕ್ರಮ ನಿಮ್ಮ ಕಾರ್ಯಕ್ರಮ ಎಂದು ಹೆಚ್.ಡಿ.ಕುಮಾರಸ್ವಾಮಿ ಅಬ್ಬರಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:52 pm, Sun, 26 March 23