AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯರನ್ನ ಸಿಎಂ ಮಾಡಲ್ಲ ಎಂದು ಭವಿಷ್ಯ ನುಡಿದ ಯತ್ನಾಳ್​

5 ವರ್ಷಗಳ ಕಾಲ ಸಿಎಂ ಆಗಿದ್ದವರಿಗೆ ಈ ಪರಿಸ್ಥಿತಿ ಬರಬಾರದಿತ್ತು. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯರನ್ನು ಸಿಎಂ ಮಾಡಲ್ಲ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಕಿಡಿಕಾರಿದ್ದಾರೆ.

ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯರನ್ನ ಸಿಎಂ ಮಾಡಲ್ಲ ಎಂದು ಭವಿಷ್ಯ ನುಡಿದ ಯತ್ನಾಳ್​
ಬಸನಗೌಡ ಪಾಟೀಲ್​ ಯತ್ನಾಳ್, ಸಿದ್ದರಾಮಯ್ಯ
Follow us
ಗಂಗಾಧರ​ ಬ. ಸಾಬೋಜಿ
|

Updated on: Mar 26, 2023 | 5:38 PM

ವಿಜಯಪುರ: ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯರನ್ನು (siddaramaiah) ಬಲಿಪಶು ಮಾಡಲಿದ್ದಾರೆ. 5 ವರ್ಷಗಳ ಕಾಲ ಸಿಎಂ ಆಗಿದ್ದವರಿಗೆ ಈ ಪರಿಸ್ಥಿತಿ ಬರಬಾರದಿತ್ತು. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯರನ್ನು ಸಿಎಂ ಮಾಡಲ್ಲ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಮುದಾಯದವರು ಕಾಂಗ್ರೆಸ್ ಬೆಂಬಲಿಸಬಾರದು. ನಾಳೆ ಗೂಂಡಾನನ್ನು ಸಿಎಂ ಮಾಡಿದ್ರೆ ನಾವು, ನೀವು ಸಾಯುತ್ತೇವೆ. ಅತಿಯಾದ ಮುಸ್ಲಿಂ ತುಷ್ಟೀಕರಣ ಸಿದ್ದರಾಮಯ್ಯರ ಈ ಸ್ಥಿತಿಗೆ ಕಾರಣ. ವರುಣಾ ಕ್ಷೇತ್ರದಲ್ಲೂ ಸಿದ್ದರಾಮಯ್ಯಗೆ ಗೆಲುವು ಸುಲಭವಲ್ಲ. ಈ ಹಿಂದೆ ರಾಜ್ಯದ ಜನರು ಮುಗ್ಧರಾಗಿದ್ದರು, ವೋಟು ಹಾಕುತ್ತಿದ್ದರು. ಈಗ ಯಾರು ಏನು ಮಾಡಿದ್ದಾರೆ ಅನ್ನೋ ಪಟ್ಟಿ ಜನರ ಬಳಿ ಇದೆ ಎಂದು ಹರಿಹಾಯ್ದರು.

ಮೀಸಲಾತಿ ಇವರಪ್ಪನ ಮನೆಯದ್ದಾ: ಯತ್ನಾಳ್ ಗರಂ

ಮುಸ್ಲಿಮರ ಮೀಸಲಾತಿ ಒಕ್ಕಲಿಗ, ಲಿಂಗಾಯತರಿಗೆ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಮುಸ್ಲಿಮರು ಮೂರು ಕಡೆಗಳಲ್ಲಿ ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. ಮೀಸಲಾತಿ ಇವರಪ್ಪನ ಮನೆಯದ್ದಾ ಎಂದು  ಯತ್ನಾಳ್ ಗರಂ ಆದರು. ಮುಸ್ಲಿಮರಿಗೆ ಒಂದೇ ಕಡೆ ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ. ದಲಿತ ಸಮುದಾಯಕ್ಕೆ ಇನ್ನೂ 2% ಮೀಸಲಾತಿ ಹೆಚ್ಚು ಮಾಡುತ್ತೇವೆ ಎಂದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಯಾರೂ ಗುಂಡಾ ನಾಯಕರಿಲ್ಲ: ಡಿ.ಕೆ.ಶಿವಕುಮಾರ್ ಆರೋಪಕ್ಕೆ ಯತ್ನಾಳ್ ತಿರುಗೇಟು

ಕಾಂಗ್ರೆಸ್ ಪಕ್ಷ ಥರಥರ ಅಲುಗಾಡಿ ಹೋಗಿದೆ

ಈಗ 17% ಮಾಡಿದ್ದೇವೆ, ಮುಂದೆ ಮೋದಿ 21% ಮಾಡಲಿದ್ದಾರೆ. ‘ಕೈ’ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಸಿದ್ದು, ಬಿಜೆಪಿ ಐತಿಹಾಸಿಕ ನಿರ್ಣಯದಿಂದ ಕಾಂಗ್ರೆಸ್ ಅಲುಗಾಡಿ ಹೋಗಿದೆ. ಕಾಂಗ್ರೆಸ್ ಪಕ್ಷ ಥರಥರ ಎಂದು ಅಲುಗಾಡಿ ಹೋಗಿದೆ. ಡಿ.ಕೆ.ಶಿವಕುಮಾರ್​ ತಾಕತ್ತಿದ್ದರೆ ರದ್ದು ಮಾಡುತ್ತೇವೆಂದು ಚುನಾವಣೆಯಲ್ಲಿ ಹೇಳಲಿ ಎಂದು ಸವಾಲು ಹಾಕಿದರು.

ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ ಯತ್ನಾಳ್  

ಮೀಸಲಾತಿ ವಿಚಾರವಾಗಿ ಶ್ರೀಗಳಿಗೆ ಒತ್ತಡ ಹಾಕಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ್ದು, ಬಿಜೆಪಿ ಸರ್ಕಾರ ಎಸ್‌ಸಿ, ಎಸ್​​​ಟಿ ಸಮುದಾಯದ ಮೀಸಲಾತಿ ಹೆಚ್ಚಿಸಿದೆ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವ ಸರ್ಕಾರದ ದೊಡ್ಡ ಸಾಧನೆ. ಎಲ್ಲ ಸಮುದಾಯದವರಿಗೆ ನ್ಯಾಯ ಕೊಡಲು ಮೀಸಲಾತಿ ನೀಡಲಾಗಿದೆ. ಯಾರಾದರೂ ಸ್ವಾಮೀಜಿಗಳಿಗೆ ಬೆದರಿಸಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು. ಯಾರಿಗೂ ಧಮ್ಕಿ ಹಾಕಿಲ್ಲ, ಧಮ್ಕಿ ಹಾಕಲು ಸಂಸ್ಕೃತಿ ಬಿಜೆಪಿಯದ್ದಲ್ಲ. ಸೋಲಿನ ಭೀತಿಯಿಂದ ಕಾಂಗ್ರೆಸ್​ ನಾಯಕರು ಹತಾಶರಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆದಿದೆ, ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ: ಅಮಿತ್ ಶಾ ವಾಗ್ದಾಳಿ

ಎಲ್ಲರಿಗೂ ಮೀಸಲಾತಿ‌ ನೀಡಲಾಗಿದೆ 

2Aದಲ್ಲಿ 102 ಜಾತಿಗಳಿವೆ ಅವರಿಗೆ ಅನ್ಯಾಯವಾಗಬಾರದು. ಅವರ ಮೀಸಲಾತಿ‌ ಕಸಿದುಕೊಂಡಂತೆ ಆಗಬಾರದು ಎಂಬ ಕಾರಣದಿಂದ ಪ್ರತ್ಯೇಕ ಮೀಸಲಾತಿ ‌ನೀಡಲಾಗಿದೆ. 3B ಯಲ್ಲಿದ್ದವರಿಗೆ 2D ನೀಡಿ 7 ಪರ್ಸೆಂಟ್ ಮೀಸಲಾತಿ ಕೊಟ್ಟಿದ್ದಾರೆ. 15 ಪ್ಲಸ್ 7 ಒಟ್ಟು 22 ಪರ್ಸೆಂಟ್ ನಮ್ಮ‌ ಹಿಂದುಳಿದ ಜನಾಂಗಕ್ಕೆ ಸಿಕ್ಕಿದೆ. ಪ‌ರಿಶಿಷ್ಟ ಜಾತಿಗೆ 2 ಪರ್ಸೆಂಟ್ ಏರಿಸಲಾಗಿದೆ. ಎಸ್ಟಿ ಜಾತಿಗೆ 3 ರಿಂದ 7 ಪರ್ಸೆಂಟ್ ಮಾಡಲಾಗಿದೆ. ಇದರಿಂದ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.