ಮೈಸೂರು: ಜೆಡಿಎಸ್​ ಪಂಚರತ್ನ ಸಮಾರೋಪ ಸಮಾರಂಭದಲ್ಲಿ ಹೆಚ್​ಡಿ ಕುಮಾರಸ್ವಾಮಿ ಭರಸವಸೆಗಳ ಸುರಿಮಳೆ

ಪ್ರತಿಯೊಬ್ಬರ ಆರೋಗ್ಯದ ವೆಚ್ಚ ಭರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇನೆ. 6,600 ಪಂಚಾಯಿತಿ ಕೇಂದ್ರಗಳಲ್ಲಿ ಉತ್ತಮ ವ್ಯವಸ್ಥೆಯುಳ್ಳ ಆಸ್ಪತ್ರೆಗಳು, ಕಿಡ್ನಿ ಡಯಾಲಿಸಿಸ್‌ ಕೇಂದ್ರವನ್ನು ಸ್ಥಾಪಿಸಲು ತೀರ್ಮಾನ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

Follow us
|

Updated on:Mar 26, 2023 | 9:06 PM

ಮೈಸೂರು: ಪ್ರತಿಯೊಬ್ಬರ ಆರೋಗ್ಯದ ವೆಚ್ಚ ಭರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇನೆ. 6,600 ಪಂಚಾಯಿತಿ ಕೇಂದ್ರಗಳಲ್ಲಿ ಉತ್ತಮ ವ್ಯವಸ್ಥೆಯುಳ್ಳ ಆಸ್ಪತ್ರೆಗಳು, ಕಿಡ್ನಿ ಡಯಾಲಿಸಿಸ್‌ (Kidney dialysis) ಕೇಂದ್ರವನ್ನು ಸ್ಥಾಪಿಸಲು ತೀರ್ಮಾನ ಮಾಡಿದ್ದೇನೆ. ಶ್ರೀಮಂತರ ಮಕ್ಕಳಿಗೆ ಸರಿಸಮಾನವಾಗಿ ಬಡ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ (HD Kumarswamy) ಹೇಳಿದ್ದಾರೆ. ನಾನು 2 ಸಲ ಮುಖ್ಯಮಂತ್ರಿಯಾದರೂ ಜನರ ಹಣ ಲೂಟಿ ಮಾಡಲಿಲ್ಲ. ರಾಜ್ಯ ಸರ್ಕಾರ ಹೊಸದಾಗಿ ಮೀಸಲಾತಿ ನೀಡಿದೆ. ಮೀಸಲಾತಿಯಿಂದ ಯಾರಿಗೆ ಅನುಕೂಲವಾಗುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಜೆಡಿಎಸ್‌ ಪಕ್ಷಕ್ಕೆ 50 ಸ್ಥಾನ ಬರುವುದರಲ್ಲಿ ಯಾವುದೇ ಸಂಶಯವಿಲ್ಲ

ಮೈಸೂರು (Myosore) ತಾಲೂಕಿನ ಉತ್ತನಹಳ್ಳಿ ಬಳಿ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಜೆಡಿಎಸ್​ ನಾಯಕ ಹೆಚ್​ ಡಿ ಕುಮಾರಸ್ವಾಮಿ ಜೆಡಿಎಸ್‌ (JDS) ಪಕ್ಷಕ್ಕೆ 50 ಸ್ಥಾನ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನಮಗೆ 50 ಸೀಟ್‌ ಸರ್ಕಾರ ಬೇಡ, 5 ವರ್ಷದ ಸರ್ಕಾರ ಬೇಕು. ಸಮ್ಮಿಶ್ರ ಸರ್ಕಾರದ ವೇಳೆ ನಾನು 2ನೇ ಬಾರಿ ಮುಖ್ಯಮಂತ್ರಿ ಆಗಿದ್ದೆ. ಆಗ ಕಾಂಗ್ರೆಸ್​ ನಾಯಕರು ನಮ್ಮ ಯೋಜನೆ ನಿಲ್ಲಿಸಬಾರದು ಎಂದಿದ್ದರು. ಆದರೂ ನಾನು ರೈತರ ಸಾಲಮನ್ನಾ ಮಾಡಿದ್ದೆ. ಬಿಜೆಪಿ ಸರ್ಕಾರದಲ್ಲಿ ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ರಾಜ್ಯದ ರೈತರು ಸಂಕಷ್ಟದಲ್ಲಿದ್ದಾಗ ನೀವು ಏಕೆ ಸಹಾಯಕ್ಕೆ ಬಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶ್ನಿಸಿದರು.

ಇದನ್ನೂ ಓದಿ: ಶ್ರೀನಿವಾಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಬೆನ್ನಲ್ಲೇ ಪಕ್ಷ ತೊರೆಯುತ್ತಿರುವ ಸಾಲು-ಸಾಲು ಜೆಡಿಎಸ್ ಮುಖಂಡರು

ಕೋಲಾರದ ಒಬ್ಬ ಯುವಕ ನನಗೆ ಒಂದು ಪತ್ರ ಕೊಟ್ಟಿದ್ದ. ರೈತರ ಮಕ್ಕಳಿಗೆ ಹೆಣ್ಣು ಕೊಡೊದಕ್ಕೆ ಹಿಂಜರಿಯುತ್ತಿದ್ದಾರೆ ಏನಾದರೂ ಮಾಡಿ ಅಣ್ಣ ಎಂದಿದ್ದ. ಈ ವಿಚಾರಕ್ಕೆ ಮಲೆ ಮಹದೇಶ್ವರ ಬೆಟ್ಟಕ್ಕೂ ಪಾದಯಾತ್ರೆ ಹೊರಟ್ಟಿದ್ದರು. ಇದಕ್ಕಾಗಿ ರೈತನ ಕುಟುಂಬಕ್ಕೆ ಗೌರವ ತಂದುಕೊಡಬೇಕು ಎಂಬುದಕ್ಕೆ ನಾನು ತಿರ್ಮಾನ ಮಾಡಿದ್ದೇನೆ. ಒರ್ವ ಹೆಣ್ಣು ಮಗಳು ತಲೆಗೆ ಬಟ್ಟೆ ಹಾಕಿಕೊಂಡು ಕುಳಿತಿದ್ದಳು. ಯಾಕಮ್ಮ ಅಂತಾ ಕೇಳಿದೆ, ಡಿಫಾರ್ಮಗೆ ಮೊದಲು ಸ್ತ್ರೀ ಸಹಾಯ ಸಂಘದಿಂದ ಹಣ ಕಟ್ಟಿದ್ದೇವೆ. ಈ ಬಾರಿ ಹಣ ಕಟ್ಟಲು ಸಹಾಯ ಮಾಡಿ ಎಂದು ಕೇಳಿದ್ದಳು. ಈ ವೇಳೆ ಕೂಡ ಆ ಹೆಣ್ಣು ಮಗಳು ನನ್ನ ಕಣ್ಣು ತೆರೆಸಿದ್ದಳು. ನಾಡಿನ ಹೆಣ್ಣು ಮಕ್ಕಳು ಸ್ತೀ ಶಕ್ತಿ ಸಹಾಯ ಸಂಘದಿಂದ ಪಡೆದ ಸಾಲಮನ್ನಾ ಮಾಡಿ ಎಂದು ಬೇಡಿಕೆ ಇಟ್ಟಿದ್ದರು. ಈ ಬಗ್ಗೆಯೂ ನಾನು ತೀರ್ಮಾನ ಮಾಡಿದ್ದೇನೆ. ಕೆ.ಆರ್. ಪೇಟೆಯ ಒರ್ವ ಲಿವರ್ ಸಮಸ್ಯೆ ಬಗೆಹರಿಸಿಕೊಳ್ಳಲು ಜಮೀನು ಮಾರಿ 60 ಲಕ್ಷ ಕಳೆದುಕೊಂಡಿದ್ದ. ಇದಕ್ಕೆ ನಾನು ತಿರ್ಮಾನ ಮಾಡಿದ್ದೇನೆ‌ ಪ್ರತಿಯೊಬ್ಬರೂ ಆರೋಗ್ಯದ ವೆಚ್ಚ ಬರಿಸುವ ನಿಟ್ಟಿನಲ್ಲಿ ಯೋಚನೆ ಮಾಡಿದ್ದೇನೆ‌ ಎಂದರು.

ಕೋಲಾರ ಜಿಲ್ಲೆ ಮುಳಬಾಗಿಲಿನಿಂದ ಪಂಚರತ್ನ ರಥಯಾತ್ರೆ ಆರಂಭಿಸಿದ್ದೆ. 90 ದಿನಗಳ ಕಾಲ ಈ ಪಂಚರತ್ನ ರಥಯಾತ್ರೆ ಮಾಡಿದ್ದೇವೆ. ಕನ್ನಡನಾಡಿನ ಜನತೆ ಆಶೀರ್ವಾದದಿಂದ JDS ಅಧಿಕಾರಕ್ಕೆ ಬರುತ್ತದೆ. ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ಶತ ಆಯುಷ್ಯಗಳಾಗಿ ಇರಬೇಕು. ಈ ಕಾರ್ಯಕ್ರಮ ಇಡೀ ರಾಜ್ಯಕ್ಕೆ ತಲುಪಬೇಕು, ಇದರಲ್ಲಿ ಸ್ವಾರ್ಥವಿಲ್ಲ. ನಿಮ್ಮ ಹಾರೈಕೆಯಿಂದ ಈ ಬಾರಿ 120 ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು. ಈ ಪಂಚರತ್ನ ಯಾತ್ರೆ ಕಾರ್ಯಕ್ರಮ ನಿಮ್ಮ ಕಾರ್ಯಕ್ರಮ ಎಂದು ಮಾತನಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:04 pm, Sun, 26 March 23

ಛಾತ್ ಪೂಜೆ ವೇಳೆ ಯಮುನಾ ನದಿಯ ವಿಷಕಾರಿ ನೊರೆಯಲ್ಲೇ ಕೂದಲು ತೊಳೆದ ಮಹಿಳೆ
ಛಾತ್ ಪೂಜೆ ವೇಳೆ ಯಮುನಾ ನದಿಯ ವಿಷಕಾರಿ ನೊರೆಯಲ್ಲೇ ಕೂದಲು ತೊಳೆದ ಮಹಿಳೆ
ಬೆಂಗಳೂರಿನ ಕೆಆರ್ ಪುರಂನ ಮುರುಗನ್ ದೇವಸ್ಥಾನದಲ್ಲಿ ದರೋಡೆ; ವಿಡಿಯೋ ಇಲ್ಲಿದೆ
ಬೆಂಗಳೂರಿನ ಕೆಆರ್ ಪುರಂನ ಮುರುಗನ್ ದೇವಸ್ಥಾನದಲ್ಲಿ ದರೋಡೆ; ವಿಡಿಯೋ ಇಲ್ಲಿದೆ
ಲೈವ್‌ ಕಾಮೆಂಟರಿಯಲ್ಲಿ ಪಾಕ್ ಆಟಗಾರರ ಮಾನ ಕಳೆದ ವಾಸೀಂ ಅಕ್ರಮ್
ಲೈವ್‌ ಕಾಮೆಂಟರಿಯಲ್ಲಿ ಪಾಕ್ ಆಟಗಾರರ ಮಾನ ಕಳೆದ ವಾಸೀಂ ಅಕ್ರಮ್
‘ಯಾವಾಗಲೂ ದರ್ಶನ್ ನನ್ನ ಮಗ, ಅದು ಬದಲಾಗಲ್ಲ’: ಸುಮಲತಾ ಅಂಬರೀಷ್
‘ಯಾವಾಗಲೂ ದರ್ಶನ್ ನನ್ನ ಮಗ, ಅದು ಬದಲಾಗಲ್ಲ’: ಸುಮಲತಾ ಅಂಬರೀಷ್
ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್
ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ
ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ
ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್
ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್