Crime News: ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ‌ನಿ ಅನುಮಾನಾಸ್ಪದವಾಗಿ ಸಾವು

| Updated By: ವಿವೇಕ ಬಿರಾದಾರ

Updated on: Nov 04, 2022 | 9:28 PM

ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದ ರಾಮಚಂದ್ರಾಪುರದ ಖಾಸಗಿ ಶಾಲೆಯಲ್ಲಿ ನಡೆದಿದೆ.

Crime News: ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ‌ನಿ ಅನುಮಾನಾಸ್ಪದವಾಗಿ ಸಾವು
ಸಾಂಧರ್ಬಿಕ ಚಿತ್ರ
Follow us on

ಬೆಂಗಳೂರು: ವಿದ್ಯಾರ್ಥಿನಿ (Student) ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದ ರಾಮಚಂದ್ರಾಪುರದ ಖಾಸಗಿ ಶಾಲೆಯಲ್ಲಿ ನಡೆದಿದೆ. ಗಂಗಮ್ಮನ ಗುಡಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿಶಿತಾ(11) ಮೃತ ಬಾಲಕಿ. ನಿಶಿತಾ ಇಂದು (ನ.4) ಮಧ್ಯಾಹ್ನ 3 ಗಂಟೆ ವೇಳೆಗೆ ಸಾವನ್ನಪ್ಪಿದ್ದು, ಇದುವರೆಗೂ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ಟ್ರಕ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ: ಐವರು ಮಹಿಳೆಯರು ಸಾವು

ಬೀದರ್: ಟ್ರಕ್‌ ಡಿಕ್ಕಿಯಾಗಿ ಆಟೋದಲ್ಲಿದ್ದ ಐವರು ಮಹಿಳೆಯರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಬಳಿ ನಡೆದಿದೆ. ಪ್ರಭಾವತಿ(36), ಯಾದಮ್ಮ(40), ಗುಂಡಮ್ಮ(52), ಜಕ್ಕಮ್ಮ(32) ಹಾಗೂ ರುಕ್ಮಿಣಿ(60) ಮೃತ ದುರ್ದೈವಿಗಳು. ಇನ್ನು ಅಪಘಾತದಲ್ಲಿ 6 ಜನರಿಗೆ ಗಾಯಗಳಾಗಿದ್ದು ಬೀದರ್‌, ಮನ್ನಾಖೇಳಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ಮತ್ತು ಗಾಯಾಳುಗಳು ಉಡಮನಳ್ಳಿ ಗ್ರಾಮಸ್ಥರು ಎನ್ನಲಾಗುತ್ತಿದೆ. ಬೆಮಳಖೇಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಟಿಪ್ಪರ್ ಪಲ್ಟಿಯಾಗಿರುವಂತಹ ಘಟನೆ ಗದಗ ಜಿಲ್ಲೆಯ ಮುಂಡರಗಿ ಹೊರವಲಯದ ಶಿಂಗಟಾಲೂರು ರಸ್ತೆಯಲ್ಲಿ ನಡೆದಿದೆ. ಘಟನೆ ಹಿನ್ನೆಲೆ ಸಾರಿಗೆ ಬಸ್ ಸೇರಿ 60 ಕ್ಕೂ ಹೆಚ್ಚು ವಾಹನಗಳು ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿ ಪರದಾಡಿವೆ. ಘಟನೆ ನಡೆದು ಮೂರು ಗಂಟೆಯಾದರು ಪೊಲೀಸರು ಸ್ಥಳಕ್ಕೆ ಬಂದಿರಲಿಲ್ಲ. ಹೀಗಾಗಿ ಮುಂಡರಗಿ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡರು.

ಕುಖ್ಯಾತ 6 ಮನೆ ಹಾಗೂ ಬೈಕ್ ಕಳ್ಳರ ಬಂಧನ

ಬೆಂಗಳೂರು: ಕುಖ್ಯಾತ 6 ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಸುಮಾರು 43 ಲಕ್ಷ ಮೌಲ್ಯದ 800 ಗ್ರಾಂ ಚಿನ್ನಭಾರಣ, 12 ಬೈಕ್​ಗಳು, 1 ಮೊಬೈಲ್ ಜಪ್ತಿ ಮಾಡಿದ್ದಾರೆ. ಎಸ್ಕೇಪ್ ಕಾರ್ತಿಕ್, ಮನೋಜ್ ಕುಮಾರ್, ಆಫ್ರೋಜ್, ಮೊಹ್ಮದ್ ಅಲಿಯಾಸ್ ಮಂಜುನಾಥ, ಸೈಯದ್ ನದೀಂ, ಅಜಂಖಾನ್ ಅಲಿಯಾಸ್ ಬ್ರೂಸ್ಲಿ ಬಂಧಿತ ಆರೋಪಿಗಳು. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿತ್ತು. ಮತ್ತೊಂದು ಪ್ರಕರಣದಲ್ಲಿ ಹೊಸಕೋಟೆ ತಾಲೂಕಿನ ಬಾಣಮಾಕನಹಳ್ಳಿ ಗೇಟ್ ಬಳಿ ಪಂಕ್ಚರ್​ ಅಂಗಡಿಯಲ್ಲಿ ಏರ್​ ಟೆಂಪರೇಚರ್​ ಸ್ಫೋಟಗೊಂಡು ಕೋಲಾರ ಜಿಲ್ಲೆ ಕ್ಯಾಲನೂರು ಮೂಲದ ಅಲ್ಲಾಭಕ್ಷ್(66) ಸಾವನ್ನಪ್ಪಿದ್ದಾರೆ. ಏರ್ ಟೆಂಪರೇಚರ್ ಓವರ್​ಲೋಡ್ ಆಗಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕ್ರೇನ್ ಹರಿದು ವಿದ್ಯಾರ್ಥಿನಿ ಸಾವು: ರಸ್ತೆ ತಡೆದು ಪ್ರತಿಭಟನೆ

ಬೆಂಗಳೂರು: ಕ್ರೇನ್ ಹರಿದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಪೂರ್ವ ತಾಲೂಕಿನ ಕನ್ನಮಂಗಲ ಗೇಟ್ ಬಳಿ ನಡೆದಿದೆ. ನೂರ್ ಫಿಜ ಮೃತ ವಿದ್ಯಾರ್ಥಿನಿ. (ನ. 2) ರಂದು ವಿದ್ಯಾರ್ಥಿನಿ ನೂರ್ ಫಿಜ ಕಾಲೇಜಿನಿಂದ ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದಳು. ಈ ವೇಳೆ ಹಿಂಬದಿಯಿಂದ ಬಂದ ಕ್ರೇನ್ ವಿದ್ಯಾರ್ಥಿನಿ ಮೇಲೆ ಹರಿದಿದೆ. ಇದರಿಂದ ತೀರ್ವ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ವೈಟ್ ಫೀಲ್ಡ್ ಖಾಸಗಿ ಅಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ನಿನ್ನೆ (ನ. 3) ರಂದು ಸಾವನ್ನಪ್ಪಿದ್ದಾಳೆ.

ಈ ಸಂಬಂಧ ವೈಟ್ ಫೀಲ್ಡ್ ಹೊಸಕೋಟೆ ರಸ್ತೆಯ ಕನ್ನಮಂಗಲ ಬಳಿ ಸ್ಥಳಿಯರು ಪ್ರತಿಭಟನೆ ಮಾಡುತ್ತಿದ್ದಾರೆ. ಕನ್ನಮಂಗಲ ರಸ್ತೆಯಲ್ಲಿದ್ದ ಸ್ಪೀಡ್ ಬ್ರೇಕರ್​ನ್ನು ಅಧಿಕಾರಿಗಳು ಈ ಹಿಂದೆ ತೆರವುಗೊಳಿಸಿದ್ದರು. ಇದರಿಂದಲೇ ಅಪಘಾತ ಸಂಭವಿಸಿದೆ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ. ಈಗ ರಸ್ತೆಯ ಪುಟ್ ಪಾತ್ ಒತ್ತುವರಿ ತೆರವುಗೊಳಿಸಿ ಸ್ಪೀಡ್ ಬ್ರೇಕರ್ ಹಾಕುವಂತೆ ಸ್ಥಳಿಯರು ಆಗ್ರಹಿಸುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.