AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನಿಟ್ರ್ಯಾಪ್​ ಬಲೆಗೆ ಬಿದ್ದ ಹೈಕೋರ್ಟ್ ಉದ್ಯೋಗಿ: ಹತ್ತು ಮಂದಿ ಅರೆಸ್ಟ್

ಖಾಸಗಿ ವಿಡಿಯೋ ಚಿತ್ರೀಕರಿಸಿ 2 ಲಕ್ಷಕ್ಕೆ ಬೇಡಿಕೆ​ ಇಟ್ಟಿದ್ದ ಗ್ಯಾಂಗ್ ಅನ್ನು ಬೆಂಗಳೂರಿನ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಹನಿಟ್ರ್ಯಾಪ್​ ಬಲೆಗೆ ಬಿದ್ದ ಹೈಕೋರ್ಟ್ ಉದ್ಯೋಗಿ: ಹತ್ತು ಮಂದಿ ಅರೆಸ್ಟ್
ಹನಿಟ್ರ್ಯಾಪ್ ನಡೆಸುತ್ತಿದ್ದ ಗ್ಯಾಂಗ್ ಅರೆಸ್ಟ್
TV9 Web
| Updated By: Rakesh Nayak Manchi|

Updated on:Nov 05, 2022 | 10:36 AM

Share

ಬೆಂಗಳೂರು: ನಗರದಲ್ಲಿ ಹೈಕೋರ್ಟ್​​ ಉದ್ಯೋಗಿ ಜೈರಾಮ್ ಅವರನ್ನು ಹನಿಟ್ರ್ಯಾಪ್​ಗೆ ಸಿಲುಕಿಸಿ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್​ ಅನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 2 ವರ್ಷದಿಂದ ಜೈರಾಮ್​ಗೆ ಪರಿಚಯವಾಗಿದ್ದ ಆರೋಪಿ ಅನುರಾಧ, ಕಾವ್ಯಾ, ಸಿದ್ದರಾಜು ಸೇರಿದಂತೆ ಒಟ್ಟು ಹತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಹಾಗಾದ್ರೆ ಈ ಗ್ಯಾಂಗ್ ಜೈರಾಮ್ ಅನ್ನು ಖೆಡ್ಡಗೆ ಕೆಡವಿದ್ದು ಹೇಗೆ? ಜೈರಾಮ್‌ ಕೊಟ್ಟಿರುವ ದೂರಿನಲ್ಲಿ ಏನಿದೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಎರಡು ವರ್ಷದ ಹಿಂದೆ ಪ್ರಕರಣ ಒಂದಕ್ಕೆ ಬಂದಾಗ ಜೈರಾಮ್​ಗೆ ಅನುರಾಧಾಳ ಪರಿಚಯವಾಗಿದೆ. ಆರು ತಿಂಗಳ ಹಿಂದೆ ಶಾರ್ಟ್ ಸೆರ್ಕ್ಯೂಟ್​ನಿಂದ ಟಿವಿ, ಫ್ರಿಡ್ಜ್ ಎಲ್ಲಾ ಸುಟ್ಟು ಹೋಗಿದೆ ಎನ್ನುತ್ತ ಜೈರಾಮ್ ಎದುರಿಗೆ ಬಂದಿದ್ದಾಳೆ. ಹೀಗೆ ಬಂದಾಕೆ ಜೈರಾಮ್​ನಿಂದ 10 ಸಾವಿರ ಸಾಲು ಪಡೆದು ಹೋಗಿದ್ದಳು. ಈ ಹಣವನ್ನು ಅಕ್ಟೋಬರ್ 10 ರಂದು ಜೈರಾಮ್​ಗೆ ಹಿಂದಿರುಗಿಸಿದ್ದಾಳೆ. ನಂತರ ಅಕ್ಟೋಬರ್ 25 ರಂದು 5 ಸಾವಿರ ಸಾಲ ಕೇಳಿದ್ದಳು, ಅದರಂತೆ ಅಕ್ಟೋಬರ್ 30 ರಂದು ಜೈರಾಮ್​ ಆಕೆಯ ಮನೆಗೆ 5 ಸಾವಿರದೊಂದಿಗೆ ಬಂದಿದ್ದಾನೆ. ಇಲ್ಲೇ ನೋಡಿ ಜೈ ರಾಮ್ ಸಿಕ್ಕಿಬಿದ್ದಿದ್ದು.

ಐದು ಸಾವಿರ ಸಾಲು ನೀಡಲು ಮನೆಗೆ ಬಂದಿದ್ದ ಜೈರಾಮ್, ಹಣ ನೀಡಿ ಹೊರಬರುತ್ತಿದ್ದಂತೆ ನಾಲ್ವರು ಎಂಟ್ರಿ ಕೊಟ್ಟು ವಾಪಸ್ ಮನೆಯೊಳಗೆ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ಜೈರಾಮ್​​ನನ್ನ ಥಳಿಸಿ 2 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಅಲ್ಲದೇ ಜೈರಾಮ್ ಪತ್ನಿ ಮತ್ತು ಮಕ್ಕಳಿಗೆ ಕರೆ ಮಾಡಿ ನನ್ನ ಪತ್ನಿಯನ್ನು ಅತ್ಯಾಚಾರ ಮಾಡಲು ಬಂದಿದ್ದಾಗಿ ಆರೋಪಿಯೊಬ್ಬ ಹೇಳಿದ್ದಾನೆ. ಘಟನೆ ಬಳಿಕ ಜೈರಾಮ್ ಪೊಲೀಸ್ ಠಾಣೆಗೆ ತೆರಳಿ ತನ್ನ ಬಳಿ ಇದ್ದ ಐದು ಸಾವಿರ ರೂಪಾಯಿಯನ್ನು ರಾಬರಿ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಅಷ್ಟಕ್ಕೂ ಹನಿಟ್ರ್ಯಾಪ್ ಬಲೆಗೆ ಜೈರಾಮ್ ಸಿಲುಕಿದ್ದು ಹೇಗೆ? ಪೊಲೀಸರು ನಡೆಸಿದ ತನಿಖೆಯಿಂದ ಗೊತ್ತಾದ ಸತ್ಯನೇ ಬೇರೆ.

ಸಿದ್ದ, ಅನುರಾಧ ಮತ್ತು ಟೀಂ ಹಣ ಮಾಡಲು ಒಂದು ಬಲೆಯನ್ನ ಹೆಣೆದಿದ್ದರು. ಅದಕ್ಕಾಗಿ ಅನು ಎಂಬಾಕೆಯನ್ನ ಛೂ ಬಿಟ್ಟಿದ್ದರು. ಜೈರಾಮ್ ಪರಿಚಯದ ಬಳಿಕ ಆತ್ಮೀಯವಾಗಿದ್ದ ಅನು, ಮನೆಗೆ ಬಾ ಎಂದು ಜೈರಾಮ್​ನನ್ನು ಕರೆಸಿಕೊಂಡಿದ್ದಾಳೆ. ಐದು ಸಾವಿರ ಹಣದೊಂದಿಗೆ ಅನು ಸೇರಲು ಬಂದಿದ್ದ ಜೈರಾಮ್, ಅನು ಕೈಗೆ ಐದು ಸಾವಿರ ಹಣವನ್ನು ನೀಡಿದ್ದಾನೆ. ಈ ವೇಳೆ ಎಂಟ್ರಿ ಕೊಟ್ಟ ನಾಲ್ವರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.

ನಾಲ್ವರ ಪೈಕಿ ಓರ್ವ, ನನ್ನ ಹೆಂಡತಿ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಿಯಾ ಎಂದು ಬೆದರಿಕೆ ಹಾಕಿದ್ದಾನೆ. ಈ ವಿಡಿಯೋ ಮುಂದಿಟ್ಟುಕೊಂಡ ಗ್ಯಾಂಗ್ ಜೈರಾಮ್​ ಬಳಿ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲ್ಲ ಎಂದಿದ್ದಕ್ಕೆ ಆರೋಪಿಯೊಬ್ಬ ಜೈರಾಮ್ ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಘಟನೆ ನಂತರ ಜೈರಾಮ್​ ಕಾಮಾಕ್ಷಿಪಾಳ್ಯ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿದ ಪೊಲೀಸರು, ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸಿದ್ದ ಮೂಲತಃ ದಾವಣಗೆರೆಯವನಾಗಿದ್ದು, ಬೆಂಗಳೂರಲ್ಲಿ ಬಂದು ರೌಡಿ ಆ್ಯಕ್ಟಿವಿಟಿಯಲ್ಲಿ ತೊಡಗಿದ್ದನು. ಈತನ ಮೇಲೆ ಎರಡು ರಾಬರಿ ಸೇರಿದಂತೆ ಹಲವು ಪ್ರಕರಣಗಳಿವೆ. ಸದ್ಯ ಬಂಧಿತರನ್ನು ವಿಚಾರಣೆ ಮುಂದುವರಿದಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:36 am, Sat, 5 November 22