ಗೆಳೆಯನ ಹಣಕ್ಕೆ ಸ್ನೇಹಿತರಿಂದಲೇ ಸ್ಕೆಚ್: ದೊಡ್ಡಬಳ್ಳಾಪುರ ಪೊಲೀಸರ ತನಿಖೆ ವೇಳೆ ಬಯಲಾಯ್ತು ಕಿಲಾಡಿಗಳ ಖತರ್ನಾಕ್ ಪ್ಲಾನ್
ಫೈನಾನ್ಸ್ ಮಾಡ್ತಿದ್ದ ರಂಜಿತ್ ಎಂಬುವವನನ್ನು ಆತನ ಸ್ನೇಹಿತರು ಜೂಜು ಆಡಲು ಕರೆತಂದಿದ್ದರು. ಈ ವೇಳೆ ಜೂಜು ಆಡುವಾಗ ಮತ್ತೊಂದು ಗ್ಯಾಂಗ್ ಪೊಲೀಸರ ಸೋಗಿನಲ್ಲಿ ದಾಳಿ ಮಾಡಿದೆ. ದಾಳಿ ಮಾಡಿ 2 ಲಕ್ಷಕ್ಕೂ ಅಧಿಕ ಹಣ ದೋಚಿ ಎಸ್ಕೇಪ್ ಆಗಿದ್ದಾರೆ.
ದೇವನಹಳ್ಳಿ: ಸ್ನೇಹಿತರೇ ತಮ್ಮ ಗೆಳೆಯನ ಲಕ್ಷ ಲಕ್ಷ ಹಣಕ್ಕೆ ಕನ್ನ ಹಾಕಲು ಮಾಸ್ಟರ್ ಪ್ಲ್ಯಾನ್ ರೂಪಿಸಿ ಹಣದ ಸಮೇತ ಎಸ್ಕೇಪ್ ಆಗಿದ್ದವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿದ್ಯಾಧರ್, ಹರಿಕೃಷ್ಣ, ಗಜೇಂದ್ರ, ಹರೀಶ್, ನರೇಂದ್ರ, ಮುನಿರಾಜ್, ಮಂಜು, ಚಂದ್ರು ಮತ್ತು ನವೀನ್ ಬಂಧಿತ ಆರೋಪಿಗಳು.
ಫೈನಾನ್ಸ್ ಮಾಡ್ತಿದ್ದ ರಂಜಿತ್ ಎಂಬುವವನನ್ನು ಆತನ ಸ್ನೇಹಿತರು ಜೂಜು ಆಡಲು ಕರೆತಂದಿದ್ದರು. ಈ ವೇಳೆ ಜೂಜು ಆಡುವಾಗ ಮತ್ತೊಂದು ಗ್ಯಾಂಗ್ ಪೊಲೀಸರ ಸೋಗಿನಲ್ಲಿ ದಾಳಿ ಮಾಡಿದೆ. ದಾಳಿ ಮಾಡಿ 2 ಲಕ್ಷಕ್ಕೂ ಅಧಿಕ ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಅನುಮಾನಗೊಂಡ ರಂಜಿತ್ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಅಚ್ಚರಿಯ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಸ್ನೇಹಿತರೆ ಹಣಕ್ಕಾಗಿ ಪೊಲೀಸರ ಸೋಗಿನಲ್ಲಿ ಕನ್ನ ಹಾಕಿರೋದು ಬೆಳಕಿಗೆ ಬಂದಿದೆ. ಹೀಗಾಗಿ ಹಣ ದೋಚಿದ್ದ 9 ಜನರನ್ನ ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.
ಮಾಂಗಲ್ಯ ಸರ ಅಪಹರಣ ಪ್ರಕರಣ: ಸಹಾಯಕ ಉಪನ್ಯಾಸಕನ ಬಂಧನ
ಹಿರಿಯ ನಾಗರೀಕರ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರ ಅಪಹರಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನನ್ನು ಪೊಲೀಸರು ಬಂಧಿಸಿದ್ದಾರೆ. ಹಣ ದುರುಪಯೋಗ ಮಾಡಿದ ಹಿನ್ನಲೆ ಸಹಾಯಕ ಉಪನ್ಯಾಸಕ ಕೆಲಸದಿಂದ ವಜಾಗೊಂಡ ಬಳಿಕ ಸುರೇಶ್ ಗೆ ಕೆಲಸ ಸಿಕ್ತಿರಲಿಲ್ಲ. ಹೀಗಾಗಿ ಕಳ್ಳತನ ಸುಲಿಗೆ ಕೃತ್ಯಕ್ಕೆ ಮುಂದಾಗಿದ್ದರು. ಈ ವೇಳೆ ಹಿರಿಯ ನಾಗರೀಕರ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರ ಕದ್ದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಂಜಯನಗರದಲ್ಲಿ ವೃದ್ದೆಯೊಬ್ಬರ ಸರಗಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಎರಡು ದಿನಗಳಲ್ಲಿ ಬಂಧಿಸಿದ್ದಾರೆ.
ಇದನ್ನೂ ಓದಿ: Shocking News: ತನಗೆ ಕಚ್ಚಿದ ಹಾವನ್ನು ಕಚ್ಚಿ ಕೊಂದ 8 ವರ್ಷದ ಬಾಲಕ; ಹೀಗೊಂದು ವಿಚಿತ್ರ ಘಟನೆ!
ದೇವಾಲಯಗಳ ಹುಂಡಿ ಕಳವು ಮಾಡುತ್ತಿದ್ದ ಆರೋಪಿಗಳು ಅರೆಸ್ಟ್
ತುಮಕೂರು ತಾಲೂಕಿನ ಹೆಬ್ಬೂರು ಪೊಲೀಸರು ಕಾರ್ಯಾಚರಣೆ ನಡೆಸಿ ದೇವಾಲಯಗಳ ಹುಂಡಿ ಕಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಮುಬಾರಕ್ ಪಾಷಾ, ಮಹಮ್ಮದ್ ರಿಜ್ವಾನ್, ಮಹಮ್ಮದ್ ಸದ್ದಾಂನನ್ನು ಬಂಧಿಸಿದ್ದಾರೆ. ಬಂಧಿತರು ಹಾಸನ ಹಾಗೂ ತುಮಕೂರು ಜಿಲ್ಲೆಯ ನಿವಾಸಿಗಳು. ಅನುಮಾನಸ್ಪದವಾಗಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಪೊಲೀಸರು ಹಿಡಿದು ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಚೋಳಂಬಳ್ಳಿಯಲ್ಲಿ ದೇವಾಲಯವೊಂದರಲ್ಲಿ ಹುಂಡಿ ಕಳವು ಮಾಡಿ ಹೋಗುತ್ತಿದ್ದಾಗ ಪೊಲೀಸರು ಖದೀಮರನ್ನು ಹಿಡಿದಿದ್ದಾರೆ. ಕುಣಿಗಲ್, ಕುದೂರು, ಶಿವಗಂಗೆ ಹಾಗೂ ತುಮಕೂರು ಗ್ರಾಮಾಂತರ, ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಕಡೆ ಬಂಧಿತ ಆರೋಪಿಗಳು ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಬಂಧಿತರಿಂದ 50 ಸಾವಿರ ನಗದು, ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ.
Published On - 12:30 pm, Sat, 5 November 22