AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ತನಗೆ ಕಚ್ಚಿದ ಹಾವನ್ನು ಕಚ್ಚಿ ಕೊಂದ 8 ವರ್ಷದ ಬಾಲಕ; ಅಚ್ಚರಿಯಾದರೂ ಸತ್ಯ!

ನಾಗರಹಾವು ಕಚ್ಚಿದ್ದರೂ ಅಚ್ಚರಿಯ ರೀತಿಯಲ್ಲಿ ಆ ಬಾಲಕ ಬದುಕುಳಿದಿದ್ದಾನೆ. ಆದರೆ, ಆತನಿಂದ ಕಚ್ಚಿಸಿಕೊಂಡ ನಾಗರಹಾವು ಮೃತಪಟ್ಟಿದೆ.

Shocking News: ತನಗೆ ಕಚ್ಚಿದ ಹಾವನ್ನು ಕಚ್ಚಿ ಕೊಂದ 8 ವರ್ಷದ ಬಾಲಕ; ಅಚ್ಚರಿಯಾದರೂ ಸತ್ಯ!
ಬಾಲಕ ದೀಪಕ್
TV9 Web
| Updated By: ಸುಷ್ಮಾ ಚಕ್ರೆ|

Updated on:Nov 05, 2022 | 12:21 PM

Share

ಛತ್ತೀಸ್​ಗಢ: ಮಕ್ಕಳಿಗೆ ಹಾವು ಕಚ್ಚಿದರೆ ಅವರಿಗೆ ಮಾತ್ರವಲ್ಲ ಅವರ ಪೋಷಕರಿಗೂ ಕೈ-ಕಾಲು ಆಡುವುದಿಲ್ಲ. ಆದರೆ, ಛತ್ತೀಸ್​ಗಢದ (Chhattisgarh) ಜಶ್‌ಪುರ ಜಿಲ್ಲೆಯ 8 ವರ್ಷದ ಬಾಲಕ ದೀಪಕ್ ತನ್ನ ಮನೆಯ ಹಿತ್ತಲಿನಲ್ಲಿ ಖುಷಿಯಿಂದ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ನಾಗರಹಾವು (Cobra) ಆತನ ಕಾಲಿಗೆ ಸುತ್ತಿಕೊಂಡಿತು. ಆತ ತಪ್ಪಿಸಿಕೊಳ್ಳಲು ಕೊಸರಾಡಿದಾಗ ಆ ಹಾವು ಆತನಿಗೆ ಕಚ್ಚಿತು. ಆಗ ನೋವಿನಿಂದ ಕಿರುಚಾಡಿದ ಆ ಬಾಲಕ ತನ್ನ ಕಾಲಿನತ್ತ ಬಗ್ಗಿ ಆ ಹಾವನ್ನು ಎಳೆಯಲು ಹೋಗಿದ್ದಾನೆ. ಆಗ ಆ ಹಾವು ಆತನ ಕೈಗೆ ಸುತ್ತಿಕೊಂಡಿದೆ. ಇದರಿಂದ ಆತ ಹಾವಿಗೆ ವಾಪಾಸ್ ಕಚ್ಚಿದ್ದಾನೆ. ಆತ ಸಿಟ್ಟಿನಿಂದ ಜೋರಾಗಿ ಕಚ್ಚಿದ್ದರಿಂದ ಆ ನಾಗರಹಾವಿಗೆ ಗಾಯವಾಗಿ ಆ ಹಾವು ಸಾವನ್ನಪ್ಪಿದೆ!

ನಾಗರಹಾವು ಕಚ್ಚಿದ್ದರೂ ಅಚ್ಚರಿಯ ರೀತಿಯಲ್ಲಿ ಆ ಬಾಲಕ ಬದುಕುಳಿದಿದ್ದಾನೆ. ಆದರೆ, ಆತನಿಂದ ಕಚ್ಚಿಸಿಕೊಂಡ ನಾಗರಹಾವು ಮೃತಪಟ್ಟಿದೆ. ಹಾವಿಗೆ 2 ಬಾರಿ ಕಚ್ಚಿದ ಆ ಬಾಲಕನ ಕಿರುಚಾಟ ಕೇಳಿ ಮನೆಯವರು ಹೊರಗೆ ಓಡಿಬರುವಷ್ಟರಲ್ಲಿ ಆ ಹಾವು ನೆಲದ ಮೇಲೆ ಬಿದ್ದಿತ್ತು. ಹಾವು ನನ್ನ ಕೈಗೆ ಸುತ್ತಿಕೊಂಡು ಕಚ್ಚಿತು. ಇದರಿಂದ ನನಗೆ ಬಹಳ ನೋವಾಯಿತು. ಹಾವಿನಿಂದ ಬಿಡಿಸಿಕೊಳ್ಳು ನಾನು ಸಾಕಷ್ಟು ಪ್ರಯತ್ನಿಸಿದೆ. ಆದರೆ ಅದು ನನ್ನನ್ನು ಬಿಡಲೇ ಇಲ್ಲ. ಕೊನೆಗೆ ಹಾವಿಗೆ 2 ಬಾರಿ ಕಚ್ಚಿದೆ ಎಂದು ಬಾಲಕ ದೀಪಕ್ ತಿಳಿಸಿದ್ದಾನೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಮನೆಯ ಮೀಟರ್​​ ಬೋರ್ಡ್​​ನಲ್ಲಿ ಅಡಗಿ ಕುಳಿತಿತ್ತು ನಾಗರ ಹಾವು

ತನಗೆ ಹಾವು ಕಚ್ಚಿದ ವಿಷಯವನ್ನು ತನ್ನ ಪೋಷಕರಿಗೆ ತಿಳಿಸಿದಾಗ ಆ ಬಾಲಕನ ಕುಟುಂಬಸ್ಥರು ಆತನನ್ನು ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಬಾಲಕನಿಗೆ ಆತನಿಗೆ ಔಷಧಿ ನೀಡಲಾಯಿತು. ಆ ಹಾವು ಆ ಬಾಲಕನ ದೇಹದಲ್ಲಿ ವಿಷವನ್ನು ಬಿಟ್ಟಿರಲಿಲ್ಲ. ಅದು ಹಾಗೇ ಕಚ್ಚಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಒಂದು ದಿನ ಆತನನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಈಗ ಆತ ಸಂಪೂರ್ಣವಾಗಿ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Sat, 5 November 22

ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಆರ್​ಟಿಒ ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ
ಆರ್​ಟಿಒ ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ