ಸರಗಳ್ಳನನ್ನ ಹಿಡಿಯಲು ಹೋದ ಪೊಲೀಸ್ ಅಧಿಕಾರಿಗೆ ಕಚ್ಚಿದ ನಾಗರಹಾವು!
ಸರಗಳ್ಳನನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಯೊಬ್ಬರಿಗೆ ಹಾವು ಕಚ್ಚಿರುವ ಘಟನೆ ನಡೆದಿದೆ.
ಕಣ್ಣೂರು(ಕೇರಳ): ಸರಗಳ್ಳನನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಯೊಬ್ಬರಿಗೆ ಹಾವು ಕಚ್ಚಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಮಟ್ಟನೂರು ಪಟ್ಟಣದಲ್ಲಿ ನಡೆದಿದೆ. ಅರೇ ಇದೇನಿದು ಸರಗಳ್ಳನನ್ನು ಹಿಡಿಯಲು ಹೋದಾಗ ಅದು ಹೇಗೆ ಪೊಲೀಸ್ಗೆ ಹಾವು ಕಡಿಯಿತು ಎನ್ನುವ ಪ್ರಶ್ನೆ ಉದ್ಭವಿಸತ್ತೆ. ಅದು ಸಹಜ ಕೂಡ. ಇದು ಅಚ್ಚರಿ ಅನ್ನಿಸಿದರೂ ಸತ್ಯ.
ಹೌದು….ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಮಟ್ಟನೂರು ಠಾಣೆಯ ಪೊಲೀಸ್ ಅಧಿಕಾರಿ ಅಶ್ವಿನ್, ಸರಗಳ್ಳನನ್ನು ಬೆನ್ನಟ್ಟಿ ಹಿಡಿಯಲು ಹೋದಾಗ ಅವರ ಕಾಲಿಗೆ ಹಾವು ಕಚ್ಚಿದೆ. ತಕ್ಷಣ ಅವರು ಆಸ್ಪತ್ರೆಗೆ ದಾಖಲಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಪ್ಪಾದ ಇಂಜೆಕ್ಷನ್ ನೀಡಿದ್ದರಿಂದ ಮಹಿಳೆ ಸಾವು, ತನಿಖೆಗೆ ಆದೇಶ ನೀಡಿದ ಆರೋಗ್ಯ ಸಚಿವೆ
ಆಗಿದ್ದೇನು?
ಬೈಕ್ನಲ್ಲಿ ಬಂದ ಇಬ್ಬರು ಸರಗಳ್ಳರು ನಾಯತ್ತುಪಾರ ಸಮೀಪದ ಕರಡಿ ಎಂಬ ಪ್ರದೇಶದ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೆ ರಾಧಾ ಎನ್ನುವರ ಕೊರಳಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದರು. ತಕ್ಷಣ ರಾಧಾ ಅವರು ಸ್ಥಳೀಯ ಮಟ್ಟನೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಕೂಡಲೇ ಕಾರ್ಯೋನ್ಮುಖರಾದ ಪೊಲೀಸ್ರು,ಕೀಜಲ್ಲೂರಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಳ್ಳರನ್ನು ಬಂಧಿಸಿದ್ದಾರೆ. ಆದ್ರೆ, ಇಬ್ಬರಲ್ಲಿ ಓರ್ವ ಕಳ್ಳ ತಪ್ಪಿಸಿಕೊಂಡು ಕಾಡಿನೊಳಗೆ ಓಡಿ ಹೋಗಿದ್ದಾನೆ. ಆ ವೇಳೆ ಆತನನ್ನು ಹುಡುಕಿಕೊಂಡು ಪೊಲೀಸ್ ಅಧಿಕಾರಿ ಅಶ್ವಿನ್ ಬೆನ್ನಟ್ಟಿದ್ದಾರೆ. ಆಗ ಅಲ್ಲಿಯೇ ಅಲ್ಲಿಯೇ ಇದ್ದ ನಾಗರ ಹಾವೊಂದು ಅಶ್ವಿನ್ ಅವರ ಕಾಲಿಗೆ ಕಚ್ಚಿದೆ. ತಕ್ಷಣ ಅಶ್ವಿನ್ ಅವರು ಕಣ್ಣೂರಿನ ಎಕೆಜಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಯಾದಿಂದ ಪಾರಾಗಿದ್ದಾರೆ.
Published On - 3:09 pm, Fri, 28 October 22