ಸೊಳ್ಳೆಗಳನ್ನು ಕೊಂದು ಬಾಟಲಿಯಲ್ಲಿ ಹಾಕಿ ಕೋರ್ಟ್​ಗೆ ತಂದ ಗ್ಯಾಂಗ್​ಸ್ಟರ್; ಕಾರಣ ಕೇಳಿ ನ್ಯಾಯಾಧೀಶರೇ ಸುಸ್ತು!

ದಾವೂದ್ ಇಬ್ರಾಹಿಂನ ಸಹಚರನಾಗಿದ್ದ ಗ್ಯಾಂಗ್​ಸ್ಟರ್ ಎಜಾಜ್ ಲಕ್ಡಾವಾಲಾ ಜೈಲಿನಲ್ಲಿ ಎದುರಿಸುತ್ತಿರುವ ಸೊಳ್ಳೆ ಕಾಟವನ್ನು ನ್ಯಾಯಮೂರ್ತಿಗಳಿಗೆ ಅರ್ಥ ಮಾಡಿಸಲು ಸತ್ತ ಸೊಳ್ಳೆಗಳು ತುಂಬಿದ ಬಾಟಲಿಯನ್ನು ನ್ಯಾಯಾಲಯಕ್ಕೆ ತಂದಿದ್ದ.

ಸೊಳ್ಳೆಗಳನ್ನು ಕೊಂದು ಬಾಟಲಿಯಲ್ಲಿ ಹಾಕಿ ಕೋರ್ಟ್​ಗೆ ತಂದ ಗ್ಯಾಂಗ್​ಸ್ಟರ್; ಕಾರಣ ಕೇಳಿ ನ್ಯಾಯಾಧೀಶರೇ ಸುಸ್ತು!
ಎಜಾಜ್ ಲಕ್ಡಾವಾಲಾ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 05, 2022 | 10:35 AM

ಮುಂಬೈ: ಅದೆಷ್ಟೋ ಜನರ ಪ್ರಾಣದ ಜೊತೆ ಆಟವಾಡಿದ್ದ ಭೂಗತ ಪಾತಕಿ ದಾವೂದ್​​ ಇಬ್ರಾಹಿಂನ ( Dawood Ibrahim) ಸಹಚರ ಗ್ಯಾಂಗ್​ಸ್ಟರ್ (Gangster Ejaz Lakdawala)​ ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ವಿಚಾರಣೆಗಾಗಿ ಮುಂಬೈನ ಕೋರ್ಟ್​ಗೆ ಬಂದಿದ್ದ ಆತ ತನ್ನ ಜೊತೆಗೆ ಒಂದು ಬಾಟಲಿಯಲ್ಲಿ ತಾನೇ ಕೊಂದ ಸೊಳ್ಳೆಗಳನ್ನು ತುಂಬಿಸಿಕೊಂಡು ಬಂದಿದ್ದ. ಇದನ್ನು ನೋಡಿದ ನ್ಯಾಯಮೂರ್ತಿಗಳು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ, ಆತ ಅದಕ್ಕೆ ನೀಡಿದ ಕಾರಣ ಕೇಳಿದ ನಂತರ ನ್ಯಾಯಮೂರ್ತಿಗಳೇ ಸುಸ್ತಾಗಿದ್ದಾರೆ.

ದಾವೂದ್ ಇಬ್ರಾಹಿಂನ ಸಹಚರನಾಗಿದ್ದ ಗ್ಯಾಂಗ್​ಸ್ಟರ್ ಎಜಾಜ್ ಲಕ್ಡಾವಾಲಾ ಬಂಧಿತನಾಗಿರುವ ಜೈಲಿನಲ್ಲಿ ಎದುರಿಸುತ್ತಿರುವ ಸೊಳ್ಳೆ ಕಾಟವನ್ನು ನ್ಯಾಯಮೂರ್ತಿಗಳಿಗೆ ಅರ್ಥ ಮಾಡಿಸಲು ಸತ್ತ ಸೊಳ್ಳೆಗಳು ತುಂಬಿದ ಪ್ಲಾಸ್ಟಿಕ್ ಬಾಟಲಿಯನ್ನು ನ್ಯಾಯಾಲಯಕ್ಕೆ ತಂದಿದ್ದ. ಲಕ್ಡಾವಾಲಾ ಸೊಳ್ಳೆ ಪರದೆಯನ್ನು ಬಳಸಲು ಅನುಮತಿ ನೀಡುವಂತೆ ಕೋರಿ ಇತ್ತೀಚೆಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಹೀಗಾಗಿ, ತನ್ನ ಸಮಸ್ಯೆಯನ್ನು ಅರ್ಥ ಮಾಡಿಸಲು ಸತ್ತ ಸೊಳ್ಳೆಗಳನ್ನು ಬಾಟಲಿಯಲ್ಲಿ ತುಂಬಿಕೊಂಡು ಬಂದಿದ್ದ. ಆದರೆ, ಲಕ್ಡಾವಾಲಾ ಅವರ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.

ಪರಾರಿಯಾಗಿರುವ ದರೋಡೆಕೋರ ದಾವೂದ್ ಇಬ್ರಾಹಿಂನ ಸಹಚರನಾಗಿದ್ದ ಲಕ್ಡಾವಾಲಾ ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ಸೇರಿದಂತೆ ಅನೇಕ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆತನನ್ನು ಜನವರಿ 2020ರಲ್ಲಿ ಬಂಧಿಸಲಾಯಿತು. ಅಂದಿನಿಂದ ಆತನನ್ನು ನೆರೆಯ ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: Mosquito Bites: ಯಾರಿಗೆ ಸೊಳ್ಳೆ ಹೆಚ್ಚಾಗಿ ಕಚ್ಚುತ್ತೆ ಗೊತ್ತಾ?

ತಾನೇ ಕೊಂದ ಸೊಳ್ಳೆಗಳಿರುವ ತಲೋಜಾ ಜೈಲಿನ ಕೈದಿಗಳು ಪ್ರತಿದಿನ ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ, ಹೀಗಾಗಿ ಸೊಳ್ಳೆ ಪರದೆ ಬಳಸಲು ಅನುಮತಿ ನೀಡಿ ಎಂದು ಆ ಗ್ಯಾಂಗ್​ಸ್ಟರ್​ ನ್ಯಾಯಮೂರ್ತಿಗಳ ಮುಂದೆ ಹೇಳಿದ್ದಾನೆ. ಆದರೆ ಭದ್ರತಾ ಕಾರಣಗಳಿಂದ ಜೈಲು ಅಧಿಕಾರಿಗಳು ಮನವಿಯನ್ನು ವಿರೋಧಿಸಿದ್ದಾರೆ. ಆತನ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯವು ಆರೋಪಿ ಅರ್ಜಿದಾರ (ಲಕ್ಡಾವಾಲಾ) ಓಡೋಮೋಸ್ ಮತ್ತು ಇತರ ಸೊಳ್ಳೆ ನಿವಾರಕಗಳನ್ನು ಬಳಸಬಹುದು. ಆದರೆ ಸೊಳ್ಳೆ ಪರದೆಯನ್ನು ಜೈಲಿನೊಳಗೆ ಬಳಸುವಂತಿಲ್ಲ ಎಂದು ಹೇಳಿದೆ.

ಈ ಹಿಂದೆ 2020ರಲ್ಲಿ ಬಂಧನವಾದಾಗ ಲಕ್ಡಾವಾಲಾ ಸೊಳ್ಳೆ ನೆಟ್‌ ಬಳಸಲು ಜೈಲಿನ ಅಧಿಕಾರಿಗಳು ಅನುಮತಿ ಕೊಟ್ಟಿದ್ದರು. ಆದರೆ ಈ ವರ್ಷದ ಮೇ ತಿಂಗಳಲ್ಲಿ ಸುರಕ್ಷತಾ ಕ್ರಮದ ಹಿನ್ನೆಲೆಯಲ್ಲಿ ಸೊಳ್ಳೆ ಪರದೆಯನ್ನು ಬಳಸುವುದನ್ನು ನಿಷೇಧಿಸಲಾಗಿತ್ತು. ಲಕ್ಡಾವಾಲಾ ಅವರಲ್ಲದೆ ತಲೋಜಾ ಜೈಲಿನ ಹಲವಾರು ವಿಚಾರಣಾಧೀನ ಕೈದಿಗಳು ಸಹ ಇದೇ ರೀತಿಯ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ