AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mosquito Bites: ಯಾರಿಗೆ ಸೊಳ್ಳೆ ಹೆಚ್ಚಾಗಿ ಕಚ್ಚುತ್ತೆ ಗೊತ್ತಾ?

ಅಯ್ಯೋ ನನಗೆ ಮಾತ್ರ ಇಷ್ಟೊಂದು ಸೊಳ್ಳೆ (Mosquito)ಕಚ್ದಿದೆ, ಆದರೆ ಪಕ್ಕದಲ್ಲೇ ಕೂತಿದ್ರೂ ಅವರಿಗೆ ಏಕೆ ಕಚ್ಚೋಲ್ಲಾ ಎಂದು ಎಷ್ಟೋ ಬಾರಿ ನೀವು ಅಂದುಕೊಂಡಿರುತ್ತೀರಿ. ಹಾಗೆಯೇ ನನ್ನದು ಮಾತ್ರ ರಕ್ತ ಸಿಹಿಯಾಗಿದೆ ಅನ್ನಿಸುತ್ತೆ ಎಂದು ತಮಾಷೆಯನ್ನೂ ನೀವು ಮಾಡಿರುತ್ತೀರಿ.

Mosquito Bites: ಯಾರಿಗೆ ಸೊಳ್ಳೆ ಹೆಚ್ಚಾಗಿ ಕಚ್ಚುತ್ತೆ ಗೊತ್ತಾ?
Mosquito
TV9 Web
| Updated By: ನಯನಾ ರಾಜೀವ್|

Updated on: Sep 20, 2022 | 8:00 AM

Share

ಅಯ್ಯೋ ನನಗೆ ಮಾತ್ರ ಇಷ್ಟೊಂದು ಸೊಳ್ಳೆ (Mosquito)ಕಚ್ದಿದೆ, ಆದರೆ ಪಕ್ಕದಲ್ಲೇ ಕೂತಿದ್ರೂ ಅವರಿಗೆ ಏಕೆ ಕಚ್ಚೋಲ್ಲಾ ಎಂದು ಎಷ್ಟೋ ಬಾರಿ ನೀವು ಅಂದುಕೊಂಡಿರುತ್ತೀರಿ. ಹಾಗೆಯೇ ನನ್ನದು ಮಾತ್ರ ರಕ್ತ ಸಿಹಿಯಾಗಿದೆ ಅನ್ನಿಸುತ್ತೆ ಎಂದು ತಮಾಷೆಯನ್ನೂ ನೀವು ಮಾಡಿರುತ್ತೀರಿ. ಆದರೆ ಹೆಚ್ಚಾದ ಸೊಳ್ಳೆ ಕಡಿತಕ್ಕೆ ಕಾರಣ ಏನೆಂಬುದನ್ನು ಅರಿಯುವ ಪ್ರಯತ್ನ ಮಾಡಿದ್ದೀರಾ. ಆದರೆ ಕೆಲವು ವೈಜ್ಞಾನಿಕ ಕಾರಣಗಳಿಂದಾಗಿ ನೀವು ಸೊಳ್ಳೆ ಕಡಿತಕ್ಕೆ ಹೆಚ್ಚು ಒಳಗಾಗುತ್ತೀರಿ. ಯಾರಿಗೆ ಜನರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಮತ್ತು ಅದರ ಹಿಂದಿನ ಕಾರಣ ಏನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಸೊಳ್ಳೆಗಳು ಕೂಡ ಅವರಿಗಿಷ್ಟವಾದ ರಕ್ತವನ್ನು ಆರಿಸಿಕೊಳ್ಳುತ್ತಂತೆ ನಾವು ನಮ್ಮ ಆಯ್ಕೆಯ ಪ್ರಕಾರ ನಮ್ಮ ಆಹಾರವನ್ನು ಆರಿಸಿಕೊಳ್ಳುವಂತೆ, ಸೊಳ್ಳೆಗಳು ಸಹ ತಮ್ಮ ಬೇಟೆಯನ್ನು ಇಷ್ಟಪಡುತ್ತವೆ ಮತ್ತು ಆ ಜನರನ್ನು ಹೆಚ್ಚು ಕಚ್ಚುತ್ತವೆ. ನಮ್ಮ ದೇಹದಲ್ಲಿ ಸೊಳ್ಳೆಗಳನ್ನು ಆಕರ್ಷಿಸುವ ಕೆಲವು ವಸ್ತುಗಳು ಇವೆ. ಸೊಳ್ಳೆಗಳು ಕೆಲವು ರೀತಿಯ ವಸ್ತುಗಳ ದೇಹವನ್ನು ಕಚ್ಚಲು ಇಷ್ಟಪಡುತ್ತವೆ.

ರಕ್ತ ರಕ್ತ ಸಿಹಿಯಾಗಿರುವವರಿಗೆ ಮಾತ್ರ ಹೆಚ್ಚು ಸೊಳ್ಳೆಗಳು ಕಚ್ಚುತ್ತವೆ ಎಂದು ನೀವು ಅನೇಕ ಬಾರಿ ಕೇಳಿರಬಹುದು, ಇದು ಸ್ವಲ್ಪ ಮಟ್ಟಿಗೆ ನಿಜವೂ ಆಗಿದೆ. ಸೊಳ್ಳೆಗಳು ಕೆಲವು ರಕ್ತದ ಪ್ರಕಾರದ ಜನರನ್ನು ಕಚ್ಚಲು ಇಷ್ಟಪಡುತ್ತವೆ. ಸೊಳ್ಳೆಗಳು O ರಕ್ತದ ಗುಂಪಿನ ಜನರನ್ನು ಹೆಚ್ಚು ಕಚ್ಚುತ್ತವೆ ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ.

ವಾಸನೆ ಸೊಳ್ಳೆಗಳು ದೇಹದ ವಾಸನೆಯಿಂದ ಆಕರ್ಷಿತವಾಗುತ್ತವೆ. ಇದರರ್ಥ ಸುಗಂಧ ದ್ರವ್ಯವನ್ನು ಹಚ್ಚುವವರಿಗೆ ಸೊಳ್ಳೆಗಳು ಕಚ್ಚುತ್ತವೆ ಎಂದಲ್ಲ, ಆದರೆ ಕೆಲವು ರೀತಿಯ ದೇಹದ ವಾಸನೆಯು ಸೊಳ್ಳೆಗಳನ್ನು ಆಕರ್ಷಿಸುತ್ತದೆ. ದೇಹದ ಬೆವರು ಅಮೋನಿಯಾ ಮತ್ತು ಲ್ಯಾಕ್ಟಿಕ್ ಆಮ್ಲದಂತಹ ವಿವಿಧ ಸಂಯುಕ್ತಗಳನ್ನು ಹೊಂದಿರುತ್ತದೆ, ಅದರ ವಾಸನೆಯು ಸೊಳ್ಳೆಗಳನ್ನು ಆಕರ್ಷಿಸುತ್ತದೆ.

ಮೆಟಾಬಾಲಿಕ್ ರೇಟ್ ಹೆಚ್ಚಿನ ಮಎಟಾಬಾಲಿಕ್ ರೇಟ್ ಹೊಂದಿರುವ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ. ಗರ್ಭಿಣಿಯರು ಹೆಚ್ಚಿನ ಚಯಾಪಚಯ ದರವನ್ನು ಹೊಂದಿರುತ್ತಾರೆ, ಆದ್ದರಿಂದ ಅವರು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತಾರೆ. ಹೆಚ್ಚು ಬ್ಯಾಕ್ಟೀರಿಯಾ ಇರುವ ಕಡೆ ಸೊಳ್ಳೆಗಳು ಹೆಚ್ಚಾಗಿರುತ್ತವೆ. ಕೊಳಕು ಇರುವ ಸ್ಥಳಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಲು ಇದೇ ಕಾರಣ. ಒಂದು ಸಂಶೋಧನೆಯ ಪ್ರಕಾರ, ಸೊಳ್ಳೆಗಳು ನಮ್ಮ ಪಾದಗಳ ಮೇಲೆ ಹೆಚ್ಚು ಕಚ್ಚುತ್ತವೆ ಏಕೆಂದರೆ ಪಾದಗಳಲ್ಲಿ ಬ್ಯಾಕ್ಟೀರಿಯಾಗಳು ಬರುವ ಸಾಧ್ಯತೆ ಹೆಚ್ಚು.

ಇಂಗಾಲದ ಡೈಆಕ್ಸೈಡ್ (CO2) ಕಾರ್ಬನ್ ಡೈಆಕ್ಸೈಡ್ ಅನಿಲದಿಂದ ಸೊಳ್ಳೆಗಳು ಆಕರ್ಷಿತವಾಗುತ್ತವೆ. ಹೆಚ್ಚು ಹೊತ್ತು ಉಸಿರು ಬಿಟ್ಟಷ್ಟೂ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಅಂತಹವರನ್ನು ಸೊಳ್ಳೆಗಳು ಹೆಚ್ಚು ಕಚ್ಚಲು ಇಷ್ಟಪಡುತ್ತವೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ