ಮೈಸೂರಿನಲ್ಲಿ ಮನೆಯ ಮೀಟರ್ ಬೋರ್ಡ್ನಲ್ಲಿ ಅಡಗಿ ಕುಳಿತಿತ್ತು ನಾಗರ ಹಾವು
ಮೀಟರ್ ಬೋರ್ಡ್ ಒಳಗೆ ಸೇರಿಕೊಂಡಿದ್ದ ಸುಮಾರು 6 ಅಡಿ ಉದ್ದದ ನಾಗರ ಹಾವನ್ನು ಸುರಕ್ಷಿತವಾಗಿ ಹೊರಗೆ ತೆಗೆದು ರಕ್ಷಣೆ ಮಾಡಲಾಗಿದೆ.
ಮೈಸೂರಿನ (Mysuru) ವಿವೇಕಾನಂದ ನಗರದ ಮನೆಯೊಂದರಲ್ಲಿದ್ದ ಕರೆಂಟ್ ಮೀಟರ್ ಬೋರ್ಡ್ನಲ್ಲಿ ಹಾವು ಅವಿತುಕೊಂಡಿತ್ತು. ಮೀಟರ್ ಬೋರ್ಡ್ ಒಳಗೆ ಸೇರಿಕೊಂಡಿದ್ದ ಉದ್ದನೆಯ ಹಾವನ್ನು ಸುರಕ್ಷಿತವಾಗಿ ಹೊರಗೆ ತೆಗೆದು ರಕ್ಷಣೆ ಮಾಡಲಾಗಿದೆ. ಸುಮಾರು 6 ಅಡಿ ಉದ್ದದ ನಾಗರಹಾವನ್ನು (Cobra) ಹೊರಗೆ ತೆಗೆಯಲಾಗಿದೆ. ಮಧ್ಯಾಹ್ನ ಮನೆಯ ಹೊರಗೆ ಓಡಾಡುತ್ತಿದ್ದ ಮಾಲೀಕರಿಗೆ ಮೀಟರ್ ಬೋರ್ಡ್ನೊಳಗೆ ಏನೋ ಸದ್ದಾಗಿದ್ದರಿಂದ ಒಳಗೆ ಇಣುಕಿ ನೋಡಿದಾಗ ನಾಗರಹಾವು ಸೇರಿಕೊಂಡಿರುವುದು ಕಂಡಿದೆ. ತಕ್ಷಣ ಹಾವು ಹಿಡಿಯುವವರಿಗೆ ಫೋನ್ ಮಾಡಿ ಆ ಹಾವನ್ನು ಹಿಡಿಸಲಾಗಿದೆ.
Published on: Oct 31, 2022 04:36 PM
Latest Videos