ಅಮೆರಿಕದ ವಿಮಾನದಲ್ಲಿ ಪ್ರತ್ಯಕ್ಷವಾದ ಹಾವು; ಬಿಸಿನೆಸ್​ ಕ್ಲಾಸ್​ನಲ್ಲಿ ಕುಳಿತಿದ್ದ ಪ್ರಯಾಣಿಕರು ಕಂಗಾಲು

ಈ ವಿಮಾನದಲ್ಲಿ ಬಿಸಿನೆಸ್ ಕ್ಲಾಸ್‌ನಲ್ಲಿ ಹಾರುತ್ತಿದ್ದ ಪ್ರಯಾಣಿಕರು ವಿಮಾನವು ಲ್ಯಾಂಡಿಂಗ್ ಆದ ನಂತರ ಆ ಹಾವನ್ನು ನೋಡಿದ್ದಾರೆ. ಆಗ ಆ ಪ್ರಯಾಣಿಕರು ಕಿರುಚುತ್ತಾ, ತಮ್ಮ ಕಾಲುಗಳನ್ನು ಮೇಲೆತ್ತಿಕೊಂಡು ಕುಳಿತಿದ್ದರು.

ಅಮೆರಿಕದ ವಿಮಾನದಲ್ಲಿ ಪ್ರತ್ಯಕ್ಷವಾದ ಹಾವು; ಬಿಸಿನೆಸ್​ ಕ್ಲಾಸ್​ನಲ್ಲಿ ಕುಳಿತಿದ್ದ ಪ್ರಯಾಣಿಕರು ಕಂಗಾಲು
ಯುನೈಟೆಡ್ ವಿಮಾನ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 19, 2022 | 2:43 PM

ನ್ಯೂಜೆರ್ಸಿ: ಫ್ಲೋರಿಡಾದ (Florida) ಟ್ಯಾಂಪಾ ನಗರದಿಂದ ನ್ಯೂಜೆರ್ಸಿಗೆ ತೆರಳುವ ವಿಮಾನದಲ್ಲಿ ಸೋಮವಾರ ಹಾವು ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರು ಕೆಲವು ಸಮಯ ಭಯಭೀತರಾದ ಘಟನೆ ನಡೆದಿದೆ. ಆ ಹಾವನ್ನು ಹಿಡಿಯಲು ನೆವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Newark Liberty International Airport) ಸಿಬ್ಬಂದಿಯನ್ನು ಕರೆತರಲಾಯಿತು. ವಿಮಾನ ನಿಲ್ದಾಣದ ವನ್ಯಜೀವಿ ಕಾರ್ಯಾಚರಣೆ ಸಿಬ್ಬಂದಿ ಮತ್ತು ಬಂದರು ಪ್ರಾಧಿಕಾರದ ಪೊಲೀಸ್ ಇಲಾಖೆ ಅಧಿಕಾರಿಗಳು ಯುನೈಟೆಡ್ ಫ್ಲೈಟ್ 2038 ಅನ್ನು ಏರಿ ಹಾವನ್ನು ಹಿಡಿದು, ನಂತರ ಅದನ್ನು ಕಾಡಿಗೆ ಬಿಟ್ಟಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ವಾಷಿಂಗ್ಟನ್ ಪೋಸ್ಟ್, ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಹಾವನ್ನು ಹಿಡಿಯುವ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ. ಅಮೆರಿಕಾದ ವಿಮಾನದ ಪ್ರಯಾಣಿಕರು ಆ ವಿಮಾನದಲ್ಲಿದ್ದ ಹಾವಿನ ಬಗ್ಗೆ ಸಿಬ್ಬಂದಿಗೆ ತಿಳಿಸಿದರು. ತಕ್ಷಣ ಎಚ್ಚೆತ್ತುಕೊಂಡ ವಿಮಾನದ ಸಿಬ್ಬಂದಿ ಅಧಿಕಾರಿಗಳನ್ನು ಸಂಪರ್ಕಿಸಿ, ಆ ಹಾವನ್ನು ಹಿಡಿಸಲು ಮನವಿ ಮಾಡಿದರು.

ಇದನ್ನೂ ಓದಿ: Amit Shah: ಕೇಂದ್ರ ಗೃಹ ಸಚಿವ ಅಮಿತ್ ಶಾ ಮನೆಯಲ್ಲಿ ಹಾವು ಪ್ರತ್ಯಕ್ಷ

ಈ ವಿಮಾನದಲ್ಲಿ ಬಿಸಿನೆಸ್ ಕ್ಲಾಸ್‌ನಲ್ಲಿ ಹಾರುತ್ತಿದ್ದ ಪ್ರಯಾಣಿಕರು ವಿಮಾನವು ಲ್ಯಾಂಡಿಂಗ್ ಆದ ನಂತರ ಆ ಹಾವನ್ನು ನೋಡಿದ್ದಾರೆ. ಆಗ ಆ ಪ್ರಯಾಣಿಕರು ಕಿರುಚುತ್ತಾ, ತಮ್ಮ ಕಾಲುಗಳನ್ನು ಮೇಲೆತ್ತಿಕೊಂಡು ಕುಳಿತಿದ್ದರು. ಇದರಿಂದ ವಿಮಾನದಲ್ಲಿ ಸ್ವಲ್ಪ ಸಮಯ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆ ಹಾವನ್ನು ಹಿಡಿದುಕೊಂಡು ಹೋದ ನಂತರ ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮುಗಳೊಂದಿಗೆ ವಿಮಾನದಿಂದ ಕೆಳಗಿಳಿದಿದ್ದಾರೆ.

ಗಾರ್ಟರ್ ಹಾವು ಪ್ರತಿ ಫ್ಲೋರಿಡಾ ಕೌಂಟಿಯಲ್ಲಿ ಕಂಡುಬರುತ್ತದೆ. ಇದು ವಿಷಕಾರಿ ಅಥವಾ ಆಕ್ರಮಣಕಾರಿ ಹಾವಲ್ಲ ಎಂದು ದಿ ವಾಷಿಂಗ್ಟನ್ ಟೈಮ್ಸ್ ಹೇಳಿದೆ. ಸಾಮಾನ್ಯವಾಗಿ 18ರಿಂದ 26 ಇಂಚುಗಳಷ್ಟು ಉದ್ದವಿರುವ ಈ ಹಾವುಗಳು ಅವುಗಳಿಗೆ ಯಾರಾದರೂ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿದರೆ ಮಾತ್ರ ಕಚ್ಚುತ್ತವೆ.

ಇದಕ್ಕೂ ಮೊದಲು, ಫೆಬ್ರವರಿಯಲ್ಲಿ ಮಲೇಷ್ಯಾದಲ್ಲಿ ಏರ್ ಏಷ್ಯಾ ವಿಮಾನದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ವಿಮಾನವು ಆಕಾಶದಲ್ಲಿ ಹಾರುತ್ತಿದ್ದಾಗ ಆ ವಿಮಾನದಲ್ಲಿ ಪ್ರಯಾಣಿಕರಿಗೆ ಹಾವು ಕಾಣಿಸಿತ್ತು. ಬಳಿಕ ವಿಮಾನವನ್ನು ಲ್ಯಾಂಡ್ ಮಾಡಿ ಆ ಹಾವನ್ನು ಹೊರತೆಗೆಯಲಾಗಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Wed, 19 October 22