Breaking News ಯುಕೆಯ ಗೃಹ ಕಾರ್ಯದರ್ಶಿ ಹುದ್ದೆ ತೊರೆದ ಸುಯೆಲ್ಲಾ ಬ್ರಾವರ್‌ಮನ್
ಗೃಹ ಕಾರ್ಯದರ್ಶಿ ಹುದ್ದೆ ತೊರೆದಿರುವುದು ನಿಜವೇ ಆಗಿದ್ದರೆ ಶುಕ್ರವಾರ ತಮ್ಮ ಹಣಕಾಸು ಸಚಿವ ಕ್ವಾಸಿ ಕ್ವಾರ್ಟೆಂಗ್ ಅವರನ್ನು ವಜಾಗೊಳಿಸಿದ ನಂತರ ಒಂದು ವಾರದಲ್ಲಿ ಟ್ರಸ್ ಸಚಿವ ಸಂಪುಟದಿಂದ...
ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ (Liz Truss) ಅವರ ಸರ್ಕಾರಕ್ಕೆ ಮತ್ತೊಂದು ಹೊಡೆತ ಎಂಬಂತೆ ಸುಯೆಲ್ಲಾ ಬ್ರಾವರ್‌ಮನ್ (Suella Braverman) ಗೃಹ ಕಾರ್ಯದರ್ಶಿ ಹುದ್ದೆಯನ್ನು ತೊರೆದಿದ್ದಾರೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಟ್ರಸ್‌ನ ಮಿನಿ-ಬಜೆಟ್‌ನ ನಂತರ ಸರ್ಕಾರದ ಆರ್ಥಿಕ ಪ್ರತಿಕ್ರಿಯೆಯ ಮೇಲೆ ಹಿಡಿತ ಸಾಧಿಸಿದ ಹೊಸ ಚಾನ್ಸಲರ್ ಜೆರೆಮಿ ಹಂಟ್ ಅವರ ಆದೇಶ ಮೇರೆಗೆ ಸುಯೆಲ್ಲಾ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. ಶುಕ್ರವಾರ ತಮ್ಮ ಹಣಕಾಸು ಸಚಿವ ಕ್ವಾಸಿ ಕ್ವಾರ್ಟೆಂಗ್ ಅವರನ್ನು ವಜಾಗೊಳಿಸಿದ ನಂತರ ಒಂದು ವಾರದಲ್ಲಿ ಟ್ರಸ್ ಸಚಿವ ಸಂಪುಟದಿಂದ ಹೊರ ನಡೆದ ಉನ್ನತ ಸಚಿವರಲ್ಲಿ ಒಬ್ಬರಾಗಿದ್ದಾರೆ ಸುಯೆಲ್ಲಾ.
My letter to the Prime Minister. pic.twitter.com/TaWO1PMOF2
— Suella Braverman MP (@SuellaBraverman) October 19, 2022
ರಾಜೀನಾಮೆ ಪತ್ರವನ್ನು ಟ್ವೀಟ್ ಮಾಡಿರುವ ಸುಯೆಲ್ಲಾ ಅವರು “ವಿಶ್ವಾಸಾರ್ಹ ಸಂಸದೀಯ ಸಹೋದ್ಯೋಗಿ” ಗೆ ಕಳುಹಿಸಿದ ಇಮೇಲ್‌ಗೆ ಸಂಬಂಧಿಸಿದ “ನಿಯಮಗಳ ತಾಂತ್ರಿಕ ಉಲ್ಲಂಘನೆ” ಯನ್ನು ಉಲ್ಲೇಖಿಸಿದ್ದಾರೆ. ವಲಸೆಯ ಕುರಿತು ಕರಡು ಲಿಖಿತ ಸಚಿವರ ಹೇಳಿಕೆಯನ್ನು ಕಳುಹಿಸಿದ್ದೇನೆ, ಅದು ಪ್ರಕಟಣೆಗೆ ಬಾಕಿಯಿದೆ. ಅದರಲ್ಲಿ ಹೆಚ್ಚಿನದನ್ನು ಸಂಸದರಿಗೆ ವಿವರಿಸಲಾಗಿದೆ. ಅದೇನೇ ಇದ್ದರೂ, ನಾನು ಹೋಗುವುದು ಸರಿಯಾಗಿದೆ” ಎಂದು ಬ್ರಾವರ್‌ಮನ್ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ತನ್ನ ತಪ್ಪಿನ ಅರಿವಾದ ತಕ್ಷಣ ಅಧಿಕೃತ ರೀತಿಯಲ್ಲಿ ವಿಷಯವನ್ನು ತಿಳಿಸಿದ್ದೇನೆ. ನಾನು ತಪ್ಪು ಮಾಡಿದ್ದೇನೆ, ನಾನು ಜವಾಬ್ದಾರಿಯನ್ನು ಸ್ವೀಕರಿಸುತ್ತೇನೆೆ. ನಾನು ರಾಜೀನಾಮೆ ನೀಡುತ್ತೇನೆ ಎಂದು ಅವರು ಬರೆದಿದ್ದಾರೆ.
Published On - 9:43 pm, Wed, 19 October 22