Amit Shah: ಕೇಂದ್ರ ಗೃಹ ಸಚಿವ ಅಮಿತ್ ಶಾ ಮನೆಯಲ್ಲಿ ಹಾವು ಪ್ರತ್ಯಕ್ಷ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದೆಹಲಿರುವ ನಿವಾಸಕ್ಕೆ ಗುರುವಾರ ಹಾವೊಂದು ಬಂದಿದೆ. ಐದು ಅಡಿ ಉದ್ದದ ಏಷ್ಯಾಟಿಕ್ ನೀರಿನಲ್ಲಿ ವಾಸಿಸುವ ಹಾವು ಶಾ ಮನೆಯಲ್ಲಿ ಪತ್ತೆಯಾಗಿದೆ.
ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (amit shah)ಅವರ ದೆಹಲಿರುವ ನಿವಾಸಕ್ಕೆ ಗುರುವಾರ ಹಾವೊಂದು ಬಂದಿದೆ. ಐದು ಅಡಿ ಉದ್ದದ ಏಷ್ಯಾಟಿಕ್ ನೀರಿನಲ್ಲಿ ವಾಸಿಸುವ ಹಾವು ಶಾ ಮನೆಯಲ್ಲಿ ಪತ್ತೆಯಾಗಿದೆ. ಇದು ದೆಹಲಿಯಲ್ಲಿ ನಿರಂತರವಾಗಿ ಸುರಿದ ಭಾರೀ ಮಳೆಗೆ ಈ ಹಾವು ಕಾಣಿಸಿಕೊಂಡಿದೆ.
ಈ ಹಾವುವನ್ನು ಭದ್ರತಾ ಸಿಬ್ಬಂದಿ ಗುರುತಿಸಿದ್ದು, ಇದರ ರಕ್ಷಣೆಗಾಗಿ ವನ್ಯಜೀವಿ SOSಗೆ ಭದ್ರತಾ ಪಡೆಗಳು ಮಾಹಿತಿ ನೀಡಿದೆ. ಈ ಹಾವು ಯಾವುದೇ ತೊಂದರೆಯನ್ನು ಮಾಡಿಲ್ಲ ಮತ್ತು ಈ ಹಾವು ವಿಷಕಾರಿಯಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: 2024ರೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ; ಪ್ರವಾಸಿ ಗುಜರಾತಿ ಪರ್ವದಲ್ಲಿ ಅಮಿತ್ ಶಾ ಭರವಸೆ
ಶಾ ಅವರ ಭದ್ರತಾ ಸಿಬ್ಬಂದಿಯ ಕೊಠಡಿಯ ಬಳಿ ಈ ಹಾವು ಕಾಣಿಸಿಕೊಂಡಿದೆ. ಎನ್‌ಜಿಒದ ಇಬ್ಬರು ಸದಸ್ಯರ ತಂಡವು ಈ ಹಾವಿನ ರಕ್ಷಣೆ ಮಾಡಿದ್ದಾರೆ. ಗುರುವಾರ ಬೆಳಗ್ಗೆ ದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಂಗಲೆಯ ಆವರಣದಲ್ಲಿ ಈ ಹಾವುವನ್ನು ಕಂಡು ಭದ್ರತಾ ಸಿಬ್ಬಂದಿ ಗಾಬರಿಗೊಂಡಿದ್ದಾರೆ. ಗಾರ್ಡ್ ರೂಮ್ ಬಳಿ ಈ ಹಾವನ್ನು ಗಮನಿಸಿದ ಅವರು ತಕ್ಷಣವೇ ವನ್ಯಜೀವಿ SOSಗೆ ಕರೆ ಮಾಡಿದ್ದಾರೆ. ಹಾವಿಗೆ ಯಾವುದೇ ನೋವನ್ನು ಮಾಡದೇ SOS ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಹಾವು ಕಾವಲು ಕೊಠಡಿಯ ಸುತ್ತಲಿನ ಮರದ ಫಲಕಗಳ ನಡುವಿನ ಅಂತರದಲ್ಲಿ ತನ್ನ ದಾರಿ ಮಾಡಿಕೊಂಡಿದೆ, ಎಂದು ಸುದ್ದಿ ಸಂಸ್ಥೆ ವನ್ಯಜೀವಿ SOSನ್ನು ಉಲ್ಲೇಖಿಸಿ ವರದಿ ಮಾಡಿದೆ.
Published On - 3:26 pm, Sat, 15 October 22