ಆದಿತ್ಯ ಸಹೋದರಿ ಪ್ರಿಯಾಂಕಾ ಆಳ್ವಾಗೆ CCB ಬುಲಾವ್
ಬೆಂಗಳೂರು: ಆದಿತ್ಯ ಆಳ್ವಾ ಸಹೋದರಿ ಪ್ರಿಯಾಂಕಾ ಆಳ್ವಾ ಒಬೆರಾಯ್ಗೆ CCB ನೋಟಿಸ್ ಜಾರಿಮಾಡಿದೆ. ಬೆಳಗ್ಗೆ ತಮ್ಮ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದು ಇಂದು ಪ್ರಿಯಾಂಕಾ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ನಿನ್ನೆ ಮುಂಬೈನ ಜುಹೂನಲ್ಲಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್ ನಿವಾಸಕ್ಕೆ ತೆರಳಿದ್ದ ಸಿಸಿಬಿ ಅಧಿಕಾರಿಗಳಿಗೆ ನಟ ಹಾಗೂ ಅವರ ಪತ್ನಿ ಪ್ರಿಯಾಂಕಾ ಆಳ್ವಾ ತನಿಖೆಗೆ ಸಮರ್ಪಕವಾಗಿ ಸಹಕರಿಸಿರಲಿಲ್ಲವಂತೆ. ಮೊದಲು ಮನೆಗೆ ಹೋದಾಗ ಸಿಸಿಬಿ ಪೊಲೀಸರನ್ನು ಒಳಗೆ ಬಿಡಲ್ಲಾ ಎಂದು ದಂಪತಿ ಹೇಳಿದ್ದರು. ನಂತರ ಸಿಸಿಬಿ ಅಧಿಕಾರಿಗಳು […]
ಬೆಂಗಳೂರು: ಆದಿತ್ಯ ಆಳ್ವಾ ಸಹೋದರಿ ಪ್ರಿಯಾಂಕಾ ಆಳ್ವಾ ಒಬೆರಾಯ್ಗೆ CCB ನೋಟಿಸ್ ಜಾರಿಮಾಡಿದೆ. ಬೆಳಗ್ಗೆ ತಮ್ಮ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದು ಇಂದು ಪ್ರಿಯಾಂಕಾ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.
ನಿನ್ನೆ ಮುಂಬೈನ ಜುಹೂನಲ್ಲಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್ ನಿವಾಸಕ್ಕೆ ತೆರಳಿದ್ದ ಸಿಸಿಬಿ ಅಧಿಕಾರಿಗಳಿಗೆ ನಟ ಹಾಗೂ ಅವರ ಪತ್ನಿ ಪ್ರಿಯಾಂಕಾ ಆಳ್ವಾ ತನಿಖೆಗೆ ಸಮರ್ಪಕವಾಗಿ ಸಹಕರಿಸಿರಲಿಲ್ಲವಂತೆ. ಮೊದಲು ಮನೆಗೆ ಹೋದಾಗ ಸಿಸಿಬಿ ಪೊಲೀಸರನ್ನು ಒಳಗೆ ಬಿಡಲ್ಲಾ ಎಂದು ದಂಪತಿ ಹೇಳಿದ್ದರು. ನಂತರ ಸಿಸಿಬಿ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಯ ನೆರವು ಪಡೆಯಲು ಮುಂದಾಗಿದ್ದರು.
ಜುಹೂ ಪೊಲೀಸರನ್ನು ಕರೆದುಕೊಂಡು ಬಂದು ಸರ್ಚ್ ಮಾಡಲು ಮುಂದಾಗಿದ್ದರು. ಮೊದಲು ವಿವೇಕ್ ತಂದೆ ನಟ ಸುರೇಶ್ ಒಬೆರಾಯ್ ನಿವಾಸಕ್ಕೆ ತೆರಳಿದ್ದ ಸಿಸಿಬಿ ಅಧಿಕಾರಿಗಳಿಗೆ ಅಲ್ಲಿ ಸಂಪೂರ್ಣ ಸಹಕಾರ ಸಿಗದೆ ಹಿನ್ನೆಲೆಯಲ್ಲಿ ಬಳಿಕ ವಿವೇಕ್ ಒಬೆರಾಯ್ ನಿವಾಸಕ್ಕೆ ಹೋಗಿದ್ದರು. ಅದರೆ, ವಿವೇಕ್ ಒಬೆರಾಯ್ ಮನೆಯಲ್ಲಿ ಸಿಸಿಬಿ ಪೊಲೀಸರ ತನಿಖೆಗೆ ಸಹಕಾರ ದೊರೆತಿಲ್ಲ.
ಜೊತೆಗೆ, ವಿವೇಕ್ ಒಬೆರಾಯ್ ನಿವಾಸದಲ್ಲಿ ಪೊಲೀಸರಿಗೆ ಸರಿಯಾಗಿ ಸರ್ಚ್ ಮಾಡಲು ಸಹ ದಂಪತಿ ಬಿಡಲಿಲ್ಲವಂತೆ. ಮನೆಯ ವಸ್ತುಗಳ ಪರಿಶೀಲನೆ ಮಾಡಲು ಮುಂದಾದರೆ ಒಬೆರಾಯ್ ಕುಟುಂಬ ಕಿರಿಕ್ ಮಾಡುತಿದ್ದ ರಂತೆ. ಕೊನೆಗೆ ಮನೆಯನ್ನೆಲ್ಲ ಸರ್ಚ್ ಮಾಡಿ ಬರಿಗೈಯಲ್ಲಿ ಬಂದ ಸಿಸಿಬಿ ಅಧಿಕಾರಿಗಳು ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕಾ ಆಳ್ವಾ ಒಬೆರಾಯ್ಗೆ ಇದೀಗ ನೋಟಿಸ್ ಜಾರಿಮಾಡಿದ್ದಾರೆ.
WhatsApp ಮೂಲಕ ನೋಟಿಸ್ ನೀಡಿ ಬಳಿಕ ಫೋನ್ ಮಾಡಿ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತನಿಖಾಧಿಕಾರಿಯಾದ ಇನ್ಸ್ಪೆಕ್ಟರ್ ಪುನೀತ್ ಮತ್ತು ಇನ್ಸ್ಪೆಕ್ಟರ್ ಅಂಜುಮಾಲಾ ನಾಯಕ್ರಿಂದ ಇಂದು ಪ್ರಿಯಾಂಕಾ ವಿಚಾರಣೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.
Published On - 11:18 am, Fri, 16 October 20