Crime News: ಅಳಂದದಲ್ಲಿ ನಿಷೇಧಾಜ್ಞೆ ವಿಸ್ತರಣೆ, ಬೆಂಗಳೂರಿನಲ್ಲಿ ಕಳ್ಳರ ಬಂಧನ, ಹೊಸನಗರದ ಬಟ್ಟೆಮಲ್ಲಪ್ಪ ಬಳಿ ವ್ಯಕ್ತಿ ಮೇಲೆ ಪೊಲೀಸರ ಹಲ್ಲೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 05, 2022 | 2:32 PM

ಶಾಂತಿ, ಸುವ್ಯವಸ್ಥೆ, ಕೋಮು ಸೌಹಾರ್ದ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಲಬುರ್ಗಿ ಜಿಲ್ಲಾಧಿಕಾರಿ ಆದೇಶದಲ್ಲಿ ಹೇಳಿದ್ದಾರೆ.

Crime News: ಅಳಂದದಲ್ಲಿ ನಿಷೇಧಾಜ್ಞೆ ವಿಸ್ತರಣೆ, ಬೆಂಗಳೂರಿನಲ್ಲಿ ಕಳ್ಳರ ಬಂಧನ, ಹೊಸನಗರದ ಬಟ್ಟೆಮಲ್ಲಪ್ಪ ಬಳಿ ವ್ಯಕ್ತಿ ಮೇಲೆ ಪೊಲೀಸರ ಹಲ್ಲೆ
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ: ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಆಳಂದ ತಾಲ್ಲೂಕಿನಲ್ಲಿ 144ನೇ ವಿಧಿ ಅನ್ವಯ ವಿಧಿಸಿದ್ದ ನಿಷೇಧಾಜ್ಞೆಯನ್ನು ಮಾರ್ಚ್​ 6ರವರೆಗೆ ವಿಸ್ತರಿಸಿ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕಾರ್ ಆದೇಶ ಹೊರಡಿಸಿದ್ದಾರೆ. ನಿಷೇಧಾಜ್ಞೆ ಜತೆಗೆ ಮದ್ಯ ಮಾರಾಟವನ್ನೂ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದಾರೆ. ಶಾಂತಿ, ಸುವ್ಯವಸ್ಥೆ, ಕೋಮು ಸೌಹಾರ್ದ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆ ವಿಚಾರದಲ್ಲಿ ಗಲಾಟೆ ನಡೆದಿತ್ತು. ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರು, ಡಿಸಿ, ಎಸ್​ಪಿ ಕಾರಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಹಿನ್ನೆಲೆಯಲ್ಲಿ 165 ಜನರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.

ವ್ಯಕ್ತಿ ಮೇಲೆ ಪೊಲೀಸರ ಹಲ್ಲೆ
ಶಿವಮೊಗ್ಗ: ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಬಳಿಯ ಬಾಣಿಗ ಗ್ರಾಮದಲ್ಲಿ ಜಗಳ ಮಾಡಿಕೊಂಡ ವ್ಯಕ್ತಿಯನ್ನು ಪೊಲೀಸರು ಥಳಿಸುವ ವಿಡಿಯೊ ವೈರಲ್ ಆಗಿದೆ. ಹೊಸನಗರ ಪಿಎಸ್‌ಐ ರಾಜೇಂದ್ರ ಎ.ನಾಯ್ಕ್ ಸಮ್ಮುಖದಲ್ಲಿ ಪೊಲೀಸರಿಗೆ ಸಾರ್ವಜನಿಕವಾಗಿ ಥಳಿಸಿದ್ದಾರೆ. ಹೊಸನಗರ ಹೊಸನಗರ ಪಿಎಸ್​ಐ ರಾಜೇಂದ್ರ ಎ ನಾಯ್ಕ್ ಸಮ್ಮುಖದಲ್ಲಿ ಘಟನೆ ನಡೆದಿದೆ. ಸಾರ್ವಜನಿಕ ವಲಯದಲ್ಲಿ ಈ ವಿಡಿಯೊ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗೃಹ ಸಚಿವರ ಜಿಲ್ಲೆಯಲ್ಲಿಯೇ ಈ ರೀತಿ ಆಗಿರುವುದು ಖಂಡನೀಯ ಎಂದು ಹಲವರು ಹೇಳಿದ್ದಾರೆ.

ಬಟ್ಟೆ ಕಳ್ಳನ ಬಂಧನ
ಬೆಂಗಳೂರು: ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಜಿಗಣಿ ಮೂಲದ ಆನಂದ್ ಅವರನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹ 5.8 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕಳೆದ ಜನವರಿ 31ರಂದು ಸಂಪಿಗೆ ರಸ್ತೆಯ ಪ್ರಶಾಂತಿ ಸ್ಯಾರಿ ಸೆಂಟರ್​ನಲ್ಲಿ ಆರೋಪಿಯು ಕಳ್ಳತನ ಮಾಡಿದ್ದ. 5ನೇ ಮಹಡಿಯ ಗ್ರಿಲ್ ಮುರಿದು ಡ್ರಾಯರ್​ನಲ್ಲಿದ್ದ ₹ 6.50 ಲಕ್ಷದಷ್ಟು ಹಣವನ್ನು ಹೊತ್ತೊಯ್ದಿದ್ದ. ಕಳ್ಳತನದ ಬಳಿಕ ಎಸಿ ಡಕ್ ಇರೋ ಜಾಗದಿಂದ ಎಸ್ಕೇಪ್ ಆಗಿದ್ದ. ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಆನಂದನ ಮೇಲೆ ಭಾರತೀನಗರ, ಜೆಬಿ ನಗರ, ಮೈಕೊ ಲೇಔಟ್ ಸೇರಿದಂತೆ ಮಂಡ್ಯ, ಶಿವಮೊಗ್ಗದ ಠಾಣೆಯಲ್ಲೂ ಪ್ರಕರಣಗಳಿವೆ. ಸದ್ಯ ಆರೋಪಿಯಿಂದ ₹ 5.8 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

ಮಹಿಳೆ ಕೊಲೆ
ಕಲಬುರಗಿ:
ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಶ್ಯಾಮಲಾಬಾಯಿ (36) ಎಂಬಾಕೆಯನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಷಿ ಕೆಲಸಕ್ಕೆಂದು ಮಹಿಳೆಯು ಜಮೀನಿಗೆ ಹೋಗಿದ್ದಾಗ ಅಲ್ಲಿಯೇ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತಾಂಡಾ ನಾಯಕನ ಕೊಲೆ
ಗದಗ: ಮುಂಡರಗಿ ತಾಲ್ಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿಕೊಟ್ಟಿಲ್ಲವೆಂದು ತಾಂಡಾದ ನಾಯಕ ಸೋಮಲಪ್ಪ ನಾಯಕ್ (55) ಎಂಬಾತನನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡಿದ್ದಾನೆ. ತನ್ನ ಪತ್ನಿ ತನ್ನನ್ನು ತೊರೆದು ಹೋಗಿದ್ದ ಹಿನ್ನೆಲೆಯಲ್ಲಿ ರಾಜಿ ಮಾಡಿಸಂಧಾನ ಮಾಡಿಕೊಡುವಂತೆ ವಿಷ್ಣು ಪವಾರ್ ಕೋರಿದ್ದ. ಹಲವು ಬಾರಿ ನ್ಯಾಯ ಪಂಚಾಯಿತಿ ಮಾಡಲಾಗಿತ್ತು. ಈ ಪ್ರಕರಣ ಯಾವುದೇ ರೀತಿಯಲ್ಲಿ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಸೋಮಲಪ್ಪ ನಾಯಕ್‌ಗೆ ವಿಷ್ಣು ಪವಾರ್ ಚಾಕುವಿನಿಂದ ಇರಿದು ಹತ್ಯೆಗೈದು ತಪ್ಪಿಸಿಕೊಂಡಿದ್ದಾನೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಡಿಬಾರ್ ಮಾಡಿದ್ದಕ್ಕೆ ಆತ್ಮಹತ್ಯೆ ಆರೋಪ
ಬೆಂಗಳೂರು: ಕಾಲೇಜಿನಿಂದ ಡಿಬಾರ್ ಮಾಡಿದ್ದಕ್ಕೆ ಮನನೊಂದು ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೆ.ಬಿ.ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆಯರ ಪಿಜಿ ಕಟ್ಟಡದಲ್ಲಿದ್ದ ಭವ್ಯಾ (21) ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜ್ಯೋತಿನಿವಾಸ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದರು. ಡಿಬಾರ್ ಮಾಡಿದ್ದಾರೆ, ಹೀಗಾಗಿ ಬದುಕುವುದಿಲ್ಲ ಎಂದು ತನ್ನ ಸಹೋದರಿ ದಿವ್ಯಾಗೆ ಕರೆ ಮಾಡಿ ವಿವರಿಸಿದ್ದರು. ಘಟನೆ ಸಂಬಂಧ ಜೀವನ ಬಿಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Crime News: ಕಣ್ಣಿಗೆ ಹಾರ್ಪಿಕ್, ಝಂಡು ಬಾಮ್ ಹಚ್ಚಿ ವೃದ್ಧೆಯನ್ನು ಕುರುಡಿಯಾಗಿಸಿ ಮನೆ ದೋಚಿದ ಮಹಿಳೆ!

ಇದನ್ನೂ ಓದಿ: Crime News: ಮಹಿಳೆಯ ಖಾಸಗಿ ಫೋಟೋ ವೈರಲ್ ಮಾಡುವುದಾಗಿ ಹೆದರಿಸಿ ಹಣಕ್ಕೆ ಬೇಡಿಕೆ; ಆರೋಪಿ ಬಂಧನ

Published On - 9:57 am, Sat, 5 March 22