AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಕಣ್ಣಿಗೆ ಹಾರ್ಪಿಕ್, ಝಂಡು ಬಾಮ್ ಹಚ್ಚಿ ವೃದ್ಧೆಯನ್ನು ಕುರುಡಿಯಾಗಿಸಿ ಮನೆ ದೋಚಿದ ಮಹಿಳೆ!

ಮನೆ ಕೆಲಸಕ್ಕೆಂದು ಬಂದಿದ್ದ ಮಹಿಳೆ ಹಾರ್ಪಿಕ್ ಮತ್ತು ಝಂಡು ಬಾಮ್‌ನ ವಿಷಯುಕ್ತ ಮಿಕ್ಸ್​ ಅನ್ನು ಹಚ್ಚಿ, 73 ವರ್ಷದ ಮಹಿಳೆಯನ್ನು ಕುರುಡಾಗಿಸಿ ನಂತರ ದರೋಡೆ ಮಾಡಿದ್ದಳು.

Crime News: ಕಣ್ಣಿಗೆ ಹಾರ್ಪಿಕ್, ಝಂಡು ಬಾಮ್ ಹಚ್ಚಿ ವೃದ್ಧೆಯನ್ನು ಕುರುಡಿಯಾಗಿಸಿ ಮನೆ ದೋಚಿದ ಮಹಿಳೆ!
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Mar 04, 2022 | 12:24 PM

Share

ಹೈದರಾಬಾದ್: ‘ಈಗಿನ ಕಾಲದಲ್ಲಿ ಯಾರನ್ನೂ ನಂಬಲು ಸಾಧ್ಯವಿಲ್ಲ’ ಎಂಬ ಮಾತು ಕೇವಲ ಬಾಯಿ ಮಾತಿಗೆ ಹೇಳುವಂಥದ್ದಲ್ಲ. ಎಷ್ಟೋ ಜನರು ಯಾವ್ಯಾವುದೋ ವೇಷ ಧರಿಸಿ, ಯಾವ್ಯಾವುದೋ ನೆಪದಲ್ಲಿ ನಮ್ಮ ಜೀವನದೊಳಗೆ ಬಂದು ದೊಡ್ಡ ಆಪತ್ತು ಉಂಟುಮಾಡಿದ ಉದಾಹರಣೆಗಳು ಬೇಕಾದಷ್ಟಿವೆ. ಅದೇ ರೀತಿ, ಹೈದರಾಬಾದ್​ನಲ್ಲಿ ತಾನು ಕೆಲಸ ಮಾಡುತ್ತಿದ್ದ ಮನೆ ಮಾಲೀಕಳ ಕಣ್ಣಿಗೆ ಹಾರ್ಪಿಕ್ ಮತ್ತು ಝಂಡು ಬಾಮ್ ಮಿಕ್ಸ್​ ಮಾಡಿ ಹಾಕಿ ಆಕೆಯನ್ನು ಕುರುಡಿಯಾಗಿಸಿದ್ದಾಳೆ. ನಂತರ ಆ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ದೋಚಿಕೊಂಡು ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್​ನ ಪೊಲೀಸರು ಪಿ. ಭಾರ್ಗವಿ ಎಂಬ 32 ವರ್ಷದ ಕೇರ್‌ಟೇಕರ್ ಅವರನ್ನು ಮಾರ್ಚ್ 2ರಂದು ಬಂಧಿಸಿದ್ದಾರೆ. ಮನೆ ಕೆಲಸಕ್ಕೆಂದು ಬಂದಿದ್ದ ಮಹಿಳೆ ಹಾರ್ಪಿಕ್ ಮತ್ತು ಝಂಡು ಬಾಮ್‌ನ ವಿಷಯುಕ್ತ ಮಿಕ್ಸ್​ ಅನ್ನು ಹಚ್ಚಿ, 73 ವರ್ಷದ ಮಹಿಳೆಯನ್ನು ಕುರುಡಾಗಿಸಿ ನಂತರ ದರೋಡೆ ಮಾಡಿದ್ದಳು. ಹೇಮಾವತಿ ಎಂಬ 73 ವರ್ಷದ ಸಿಕಂದರಾಬಾದ್‌ನ ನಾಚರಮ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಲಂಡನ್‌ನಲ್ಲಿ ನೆಲೆಸಿರುವ ಆಕೆಯ ಮಗ ಶಶಿಧರ್ 2021ರ ಆಗಸ್ಟ್‌ನಲ್ಲಿ ಭಾರ್ಗವಿಯನ್ನು ಲಿವ್‌-ಇನ್‌ ಹೌಸ್‌ಕೀಪರ್‌ ಆಗಿ ನೇಮಿಸಿದ್ದರು. ಆಕೆಯೇ ಮನೆಯನ್ನು ಮತ್ತು ಶಶಿಧರ್ ಅವರ 73 ವರ್ಷದ ತಾಯಿಯನ್ನು ನೋಡಿಕೊಳ್ಳುತ್ತಿದ್ದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಭಾರ್ಗವಿ ತನ್ನ ಏಳು ವರ್ಷದ ಮಗಳೊಂದಿಗೆ ಹೇಮಾವತಿಯ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಳು. ಆ ಮನೆಯನ್ನು ದೋಚಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಳು. ಕಳೆದ ಅಕ್ಟೋಬರ್‌ನಲ್ಲಿ ಹೇಮಾವತಿಯವರು ತನ್ನ ಕಣ್ಣುಗಳನ್ನು ಉಜ್ಜುವುದನ್ನು ನೋಡಿದ ಭಾರ್ಗವಿ ಒಂದು ಪ್ಲಾನ್ ಮಾಡಿದಳು. ಹೇಮಾವತಿಯ ಕಣ್ಣಲ್ಲಿ ಐ ಡ್ರಾಪ್ಟ್​ ಹಾಕುತ್ತೇನೆ ಎಂದು ಹೇಳಿ ಹಾರ್ಪಿಕ್, ಬಾತ್ರೂಮ್ ಕ್ಲೀನಿಂಗ್ ಲಿಕ್ವಿಡ್ ಮತ್ತು ಝಂಡು ಬಾಮ್ ಅನ್ನು ನೀರಿನಲ್ಲಿ ಬೆರೆಸಿ ಆ ವೃದ್ಧೆಯ ಕಣ್ಣಿಗೆ ಹಚ್ಚಿದಳು.

ಇದರಿಂದಾಗಿ ಆ ವೃದ್ಧೆಯ ಕಣ್ಣು ನೋವು ಹೆಚ್ಚಾಯಿತು. ಕೆಲವು ದಿನಗಳ ನಂತರ ಹೇಮಾವತಿ ತನ್ನ ಮಗನಿಗೆ ಫೋನ್ ಮಾಡಿ, ತನಗೆ ಕಣ್ಣಿನ ಸೋಂಕು ತಗುಲಿದೆ ಎಂದು ಹೇಳಿದಾಗ ಆತ ಅವಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕಳುಹಿಸಿದನು. ಆದರೆ, ಆಕೆಯ ದೃಷ್ಟಿ ಸರಿಯಾಗದಿದ್ದಾಗ ಅವರ ಮಗಳು ಊರ್ವಶಿ ತನ್ನ ತಾಯಿಯನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ದಳು. ಆದರೆ ಆಗಲೂ ಏನೂ ಪತ್ತೆಯಾಗಲಿಲ್ಲ.

73 ವರ್ಷದ ವೃದ್ಧೆ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ ನಂತರ ಶಶಿಧರ್ ಹೈದರಾಬಾದ್‌ಗೆ ಭೇಟಿ ನೀಡಿ ತನ್ನ ತಾಯಿಯನ್ನು ಎಲ್‌ವಿ ಪ್ರಸಾದ್ ನೇತ್ರಾಲಯಕ್ಕೆ ಕರೆದೊಯ್ದರು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಆಕೆಯ ಕಣ್ಣುಗಳಲ್ಲಿ ವಿಷಪೂರಿತ ದ್ರವವನ್ನು ಹಾಕಿದ್ದರಿಂದ ಕುರುಡಾಗಿದೆ ಎಂದು ತಿಳಿಸಿದರು. ಈ ವಿಷಯ ತಿಳಿದ ನಂತರ ಶಶಿಧರ್ ತನ್ನ ಮನೆಯಲ್ಲಿ ಕೆಲಸಕ್ಕಿದ್ದ ಭಾರ್ಗವಿಯ ಮೇಲೆ ಅನುಮಾನ ಪಟ್ಟರು.

ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆಕೆಯನ್ನು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಭಾರ್ಗವಿ ತಾನು ವೃದ್ಧೆಯ ಕಣ್ಣು ಕಾಣದಂತೆ ಮಾಡಿ ಆ ಮನೆಯಲ್ಲಿದ್ದ 40 ಸಾವಿರ ನಗದು, ಎರಡು ಚಿನ್ನದ ಬಳೆಗಳು, ಚಿನ್ನದ ಸರ ಹಾಗೂ ಇತರ ಕೆಲವು ಆಭರಣಗಳನ್ನು ಕದ್ದೊಯ್ದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಪೊಲೀಸರು ಬುಧವಾರ ಆಕೆಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Shocking News: ಮನೆ ಬಿಟ್ಟು ಹೋದ ಹೆಂಡತಿಯನ್ನು ತಬ್ಬಿಕೊಂಡು ಜಿಲೆಟಿನ್ ಸ್ಫೋಟಿಸಿದ ಗಂಡ; ಇಬ್ಬರ ದೇಹವೂ ಛಿದ್ರ ಛಿದ್ರ!

Crime News: ನೀನು ಜಗತ್ತಿನ ಬೆಸ್ಟ್​ ಅಮ್ಮ, ನನ್ನ ದೇವತೆ; ಸೂಸೈಡ್ ನೋಟ್ ಬರೆದಿಟ್ಟು 15ನೇ ಮಹಡಿಯಿಂದ ಹಾರಿದ ಬಾಲಕ

Published On - 12:24 pm, Fri, 4 March 22