ಆಸ್ತಿ ವಿವಾದ: ಬಾಮೈದನನ್ನು ಕೊಂದು ತಾನೂ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಭಾವ

| Updated By: ಗಂಗಾಧರ​ ಬ. ಸಾಬೋಜಿ

Updated on: May 26, 2022 | 8:02 AM

ಅನ್ಯ ಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ‌ ಕಾರಣಕ್ಕೆ ಮಾರಕಾಸ್ತ್ರದಿಂದ ಇರಿದು ಯುವಕನ ಬರ್ಬರ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಘಟನೆ ನಡೆದಿದೆ.

ಆಸ್ತಿ ವಿವಾದ: ಬಾಮೈದನನ್ನು ಕೊಂದು ತಾನೂ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಭಾವ
ರಮೇಶ್ ಅಂಗಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
Follow us on

ಬಾಗಲಕೋಟೆ: ಆಸ್ತಿ ವಿವಾದ ಹಿನ್ನೆಲೆ ಬಾಮೈದನನ್ನು ಕೊಂದಿದ್ದ ಭಾವ ವಿಷಸೇವಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ತಾಲೂಕಿನ ಶಿರೂರು ಗ್ರಾಮದ ಬಳಿ ನಡೆದಿದೆ. 42 ವರ್ಷದ ರಮೇಶ್ ಅಂಗಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೇ 23ರಂದು ಬಾಮೈದ ಸಂಗಪ್ಪ ಕೋಟಿಯನ್ನು ಕೊಂದಿದ್ದ. ಸಂಬಂಧಿ ಸುನಿಲ್ ಜತೆ ಸೇರಿ ಕಲ್ಲಿನಿಂದ ಜಜ್ಜಿ ರಮೇಶ್ ಕೊಲೆ ಮಾಡಿದ್ದ.​ ಪತ್ನಿಗೆ ಕರೆ ಮಾಡಿ ನಿನ್ನ ತಮ್ಮನನ್ನು ಕೊಂದಿದ್ದೇನೆ ಎಂದು ಹೇಳಿ, ಜತೆಗೆ ನಾನೂ ಸಾಯುತ್ತೇನೆ ಎಂದು ಪತ್ನಿಗೆ ಹೇಳಿ ನಾಪತ್ತೆಯಾಗಿದ್ದ. ಕ್ರಿಮಿನಾಷಕ ಸೇವಿಸಿ ಮೃತಪಟ್ಟ ಸ್ಥಿತಿಯಲ್ಲಿ ರಮೇಶ್ ಶವ ಪತ್ತೆಯಾಗಿದೆ. ಬಾಮೈದನನ್ನು ಕೊಂದ ಸ್ಥಳದಿಂದ ಸ್ವಲ್ಪ​ ದೂರದಲ್ಲಿ ಶವ ಪತ್ತೆಯಾಗಿದ್ದು, ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಮೇಲೆ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿ

ಹಾವೇರಿ: ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದಲ್ಲಿ ರಾತ್ರಿ ವೇಳೆಯಲ್ಲಿ ಗುಂಡಿನ ಸದ್ದು ಮೊಳಗಿದ್ದು, ಗ್ರಾಮಸ್ಥರು ಬೆಚ್ಚಿಬಿದಿದ್ದಾರೆ. ಮನೆ ಮುಂದಿನ ಕಟ್ಟೆ ಮೇಲೆ ಕುಳಿತಿದ್ದ ಮಹಿಳೆಯ ಮೇಲೆ ಬೈಕ್​ನಲ್ಲಿ ಬಂದಿದ್ದ ಮುಸುಕುಧಾರಿ ವ್ಯಕ್ತಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಅದೃಷ್ಟವಷಾತ್​ ಗುಂಡಿನ ದಾಳಿಯಲ್ಲಿ ಸಲ್ಮಾ ಪಾರಾಗಿದ್ದಾರೆ. ಕತ್ತಲೆ ವೇಳೆ ಗುಂಡುಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸಲ್ಮಾ ಅವರ ಮನೆಯ ಗೋಡೆಗೆ ಗುಂಡು ತಾಗಿದೆ. ಬಂದೂಕಿನಿಂದ ಗುಂಡುಹಾರಿಸಿ ಪರಾರಿಯಾದವರಿಗಾಗಿ ಶೋಧ ನಡೆಯುತ್ತಿದ್ದು, ಸ್ಥಳಕ್ಕೆ SP ಹನುಮಂತರಾಯ, ASP ವಿಜಯಕುಮಾರ್​ ಭೇಟಿ ನೀಡಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದು: ಚೆನ್ನೈಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ, ವಿವಿಧ ಯೋಜನೆಗಳಿಗೆ ಶಿಲಾನ್ಯಾಸ: ಪೊಲೀಸರಿಂದ ಬಿಗಿ ಭದ್ರತೆ

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಕಲಬುರಗಿ: ಅನ್ಯ ಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ‌ ಕಾರಣಕ್ಕೆ ಮಾರಕಾಸ್ತ್ರದಿಂದ ಇರಿದು ಯುವಕನ ಬರ್ಬರ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಘಟನೆ ನಡೆದಿದೆ. ಕಳೆದ ರಾತ್ರಿ ದುಷ್ಕರ್ಮಿಗಳು ಬರ್ಬರ ಕೊಲೆ ಮಾಡಿದ್ದು, ವಿಜಯ್ ಕಾಂಬಳೆ (25) ಕೊಲೆಯಾದ ಯುವಕ. ವಿಜಯ್, ವಾಡಿ ಪಟ್ಟಣದ ಭೀಮ ನಗರ ನಿವಾಸಿಯಾಗಿದ್ದು, ವಾಡಿಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಅನ್ಯ ಕೋಮಿನ ಯುವತಿಯೊಬ್ಬಳನ್ನು ವಿಜಯ್ ಪ್ರೀತಿಸುತ್ತಿದ್ದು, ಇದೇ ಕಾರಣಕ್ಕೆ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದೆ. ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದು, ಸದ್ಯ
ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕಾರ್ ಗ್ಲಾಸ್ ಹೊಡೆದು ಸ್ಟಿರಿಯೊ ಕದಿಯುತ್ತಿದ್ದವರ ಬಂಧನ

ನೆಲಮಂಗಲ: ಮನೆ ಬಳಿ ನಿಂತಿರುವ ಕಾರ್ ಗ್ಲಾಸ್ ಹೊಡೆದು ಸ್ಟಿರಿಯೊಗಳನ್ನ ಕದಿಯುತ್ತಿದ್ದ, ಇಬ್ಬರು ಕಳ್ಳರನ್ನ ಬಾಗಲಗುಂಟೆ ಪೊಲೀರು ಬಂಧಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಜುಬೇರ(32) ಜಗನ್ನಾಥ(48)ಬಂಧಿತ ಅರೋಪಿಗಳು. ಸದಾಶಿವನಗರ, ಬಾಗಲಗುಂಟೆ, ಸೋಲದೇವನಹಳ್ಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. 20ಸ್ಟಿರಿಯೋ ಸಿಸ್ಟಮ್ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಾರ್, ಟೂಲ್ಸ್ ವಶಕ್ಕೆ ಪಡೆಯಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ

ಕೋಲಾರ: ನಗರದಲ್ಲಿ ಮದ್ಯರಾತ್ರಿ ಕಾಂಗ್ರೆಸ್ ಕಾರ್ಯಕರ್ತ ಚರಣ್ ಕೊಲೆ ಪ್ರಕರಣ ಹಿನ್ನೆಲೆ, ಯೂತ್ ಕಾಂಗ್ರೆಸ್​ನಲ್ಲಿ‌ ಚರಣ್ ಗುರುತಿಸಿಕೊಂಡಿದ್ದ. ಕಳೆದ ರಾತ್ರಿ ಟೇಕಲ್ ರಸ್ತೆಯಲ್ಲಿನ ನಂದಿನಿ ಬಾರ್ ಬಳಿ ಮೂರರಿಂದ ನಾಲ್ಕು ಜನರ ತಂಡ ಚಾಕುವಿನಿಂದ ಇರಿದು ಕೊಲೆ ಇನ್ನೋವಾ ಕಾರ್​​ನಲ್ಲಿ ಎಸ್ಕೇಪ್ ಆಗಿದ್ದರು. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಲೆಗೂ ಮುನ್ನ ನಂದಿನಿ‌ ಬಾರ್​ನಲ್ಲಿ ಹೋಗಿ ಕುಡಿದು, ಅಲ್ಲೇ ಪೋನ್​ನಲ್ಲಿ ಮಾತನಾಡುತ್ತಾ ಓಡಾಡಿಕೊಂಡಿದ್ದ ಚರಣ್ ಮೇಲೆ ಏಕಾಏಕಿ ಒಂದು ಗುಂಪಿನಿಂದ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡದರು. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:42 am, Thu, 26 May 22