ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಸಾವು; ಲವ್ ಜಿಹಾದ್ ಎಂದು ಆರೋಪಿಸಿದ ಹಿಂದೂ ಸಂಘಟನೆಗಳು
ಲವ್ ಜಿಹಾದಿಗೆ ಯುವತಿ ಬಲಿಯಾಗಿದ್ದಾಳೆ ಎಂದು ಕುಂದಾಪುರದ ಹಿಂದೂ ಸಂಘಟನೆಗಳು ಆರೋಪಿಸಿವೆ. ಮದುವೆಯಾಗಿರುವ ಅಜೀಜ್ ಯುವತಿ ಜೊತೆ ಸಂಬಂಧ ಇರಿಸಿಕೊಂಡಿದ್ದ. ಶಿಲ್ಪಾ ಮೃತಪಡುತ್ತಿದ್ದರೆ ಅಜೀಜ್ ಕಣ್ಮರೆಯಾಗಿದ್ದಾನೆ. ಅಜೀಜ್, ಸಲ್ಮಾರನ್ನು ಕೂಡಲೇ ಬಂಧಿಸುವಂತೆ ಹಿಂದೂ ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ.
ಉಡುಪಿ: ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಇಂದು ಮಣಿಪಾಲ್ ಕೆಎಂಸಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರ ಉಪ್ಪಿನಕುದ್ರು ಗ್ರಾಮ ನಿವಾಸಿ ಶಿಲ್ಪಾ (25) ಆತ್ಮಹತ್ಯೆ ಮಾಡಿಕೊಂಡವರು. ಶಿಲ್ಪ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಅಜೀಜ್(32)ಗೆ ಈ ಮೊದಲೇ ಒಂದು ಮದುವೆಯಾಗಿತ್ತು. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಶಿಲ್ಪಾ ಜೊತೆ ಅಜೀಜ್ ಪ್ರೀತಿಯ ಹೆಸರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದ. ಆಗಾಗ ಶಿಲ್ಪಾ, ಅಜೀಜ್ ಮನೆಗೆ ಹೋಗಿ ಬರುತ್ತಿದ್ದಳು. ಪತಿಯ ಕೃತ್ಯಕ್ಕೆ ಪತ್ನಿ ಸಲ್ಮಾ ಬೆಂಬಲ ನೀಡಿದ್ದಾಳೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ಲವ್ ಜಿಹಾದಿಗೆ ಯುವತಿ ಬಲಿಯಾಗಿದ್ದಾಳೆ ಎಂದು ಕುಂದಾಪುರದ ಹಿಂದೂ ಸಂಘಟನೆಗಳು ಆರೋಪಿಸಿವೆ. ಮದುವೆಯಾಗಿರುವ ಅಜೀಜ್ ಯುವತಿ ಜೊತೆ ಸಂಬಂಧ ಇರಿಸಿಕೊಂಡಿದ್ದ. ಶಿಲ್ಪಾ ಮೃತಪಡುತ್ತಿದ್ದರೆ ಅಜೀಜ್ ಕಣ್ಮರೆಯಾಗಿದ್ದಾನೆ. ಅಜೀಜ್, ಸಲ್ಮಾರನ್ನು ಕೂಡಲೇ ಬಂಧಿಸುವಂತೆ ಹಿಂದೂ ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆರ್ಸಿಬಿ ಮ್ಯಾಚ್ ನಡೆಯುವಾಗ ಅನುಷ್ಕಾ ಶರ್ಮಾ ಏನು ಮಾಡುತ್ತಿದ್ದರು? ಇಲ್ಲಿವೆ ಫೋಟೋಗಳು
ಇನ್ನು ಈ ಘಟನೆ ಸಂಬಂಧ ಮಾತನಾಡಿರುವ ಶಿಲ್ಪಾ ಸಹೋದರ ರಾಘವೇಂದ್ರ, ನನ್ನ ತಂಗಿಯನ್ನು ಅಜೀಜ್ ದುರುಪಯೋಗಪಡಿಸಿಕೊಂಡಿದ್ದಾನೆ. ಟಾರ್ಚರ್ ಕೊಟ್ಟು ಮತಾಂತರವಾಗಲು ಒತ್ತಾಯಿಸಿರಬೇಕು. ಆಕೆ ಆಸ್ಪತ್ರೆಯಲ್ಲಿ ಕಿರುಕುಳ ಕೊಟ್ಟ ವಿಚಾರ ಹೇಳಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿ ಫೋಟೋ ವಿಡಿಯೋ ಮಾಡಿದ್ದಾಗಿ ಹೇಳಿದ್ದಾಳೆ. ಅವರಿಗೆ ಹೇಗೆ ಸಂಪರ್ಕ ವಾಗಿತ್ತು ನನಗೆ ಗೊತ್ತಿಲ್ಲ. ಆಕೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಅವನಿಗೆ ಈ ಮೊದಲೇ ಮದುವೆಯಾಗಿತ್ತು. ಮದುವೆಯಾಗಲು ಮತಾಂತರ ಆಗು ಎಂದು ಒತ್ತಾಯಿಸಿರುವ ಸಂಶಯ ಇದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಬೆಂಗಳೂರಲ್ಲಿ ನೀರಿನ ಟ್ಯಾಂಕರ್ ಹರಿದು 5 ವರ್ಷದ ಬಾಲಕ ಸಾವು ಬೆಂಗಳೂರಿನ ಸರ್ಜಾಪುರ ರಸ್ತೆಯ ಸೆರಿನಿಟಿ ಲೇಔಟ್‌ನಲ್ಲಿ ದುರಂತವೊಂದು ನಡೆದಿದೆ. ನೀರಿನ ಟ್ಯಾಂಕರ್ ಹರಿದು 5 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಶ್ವೇತಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ಮುಂದೆ ಪ್ರತಿಷ್ಟ್(5) ಪ್ರಾಣಬಿಟ್ಟಿದ್ದಾನೆ. ನೀರು ಟ್ಯಾಂಕ್‌ಗೆ ತುಂಬಿಸಿ ರಿವರ್ಸ್ ತೆಗೆದುಕೊಳ್ಳುವಾಗ ಘಟನೆ ನಡೆದಿದೆ. ನೀರಿನ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದಲೇ ಬಾಲಕ ಮೃತಪಟ್ಟಿರುವುದಾಗಿ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಹೆಚ್‌ಎಸ್‌ಆರ್ ಲೇಔಟ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: 8 Years of Modi Government: ಪ್ರಧಾನಿ ಮೋದಿ ಅವರ ಮಹತ್ವ ಯೋಜನೆಗಳು ಇಲ್ಲಿವೆ
ತಾಯಿ ಸಾವಿನ ನೋವು ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡ ಮಗ ವಿಜಯಪುರ: ತಾಯಿಯ ಸಾವಿನಿಂದ ಜಿಗುಪ್ಸೆಗೊಂಡು ಪುತ್ರ ಪರಶುರಾಮ ಮಲ್ಲಪ್ಪ ನಾಯ್ಕೋಡಿ(25) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೇವರಹಿಪ್ಪರಗಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಳೆದ 1 ವರ್ಷದ ಹಿಂದೆ ಪರಶುರಾಮ ತಾಯಿ ಮೃತಪಟ್ಟ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪರಶುರಾಮ ಇಂದು ಇಂಗಳಗಿ ಗ್ರಾಮದ ಸೋದರ ಮಾವನ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕ್ ವಿಫಲಗೊಂಡು ಹಿಮ್ಮುಖವಾಗಿ ಚಲಿಸಿದ ಜೆಸಿಬಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೆ.ನಿಡುಗಣೆ ಗ್ರಾಮದ ಕೂಟುಪೊಳೆ ಬಳಿ ಬ್ರೇಕ್ ವಿಫಲಗೊಂಡು ಹಿಮ್ಮುಖವಾಗಿ ಚಲಿಸಿದ ಜೆಸಿಬಿಗೆ ಕಾರ್ಮಿಕ ಬಲಿಯಾಗಿದ್ದಾನೆ. ಹಾಸನ ಮೂಲದ ಸಂತೋಷ್(28) ಮೃತ ಕಾರ್ಮಿಕ. ಅಪಘಾತದ ರಭಸಕ್ಕೆ ಕಾರ್ಮಿಕನ ದೇಹ 2 ಭಾಗವಾಗಿದೆ. ಕೇರಳದ ವ್ಯಕ್ತಿಯೊಬ್ಬನ ಎಸ್ಟೇಟ್‌ನಲ್ಲಿ ಕೆಲಸ ಮಾಡ್ತಿದ್ದ ಜೆಸಿಬಿ ಗುದ್ದಿ ಘಟನೆ ನಡೆದಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ‘ರಾಜಕೀಯದಲ್ಲಿ ಇರುವುದಕ್ಕಿಂತ ಮನೆಗೆ ಹೋಗಿ ಅಡುಗೆ ಮಾಡಿ’: ಸುಪ್ರಿಯಾ ಸುಳೆ ವಿರುದ್ಧ ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷನ ಹೇಳಿಕೆಗೆ ವ್ಯಾಪಕ ಖಂಡನೆ
ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಯುವಕ ಸಜೀವದಹನ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಯುವಕ ಸಜೀವದಹನವಾಗಿದ್ದಾನೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸ್ವಾಮಿ(28) ಎಂಬ ಯುವಕ ಮೃತಪಟ್ಟಿದ್ದಾನೆ.
ಬೈಕ್ ಸ್ಕಿಡ್ ಆಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವು ಕಲಬುರಗಿ ಜಿಲ್ಲೆ ಚಿತ್ತಾಪುರ ಹೊರವಲಯದಲ್ಲಿ ಬೈಕ್ ಸ್ಕಿಡ್ ಆಗಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಶಪ್ಪ(40) ಹಾಗೂ ಶರಣಪ್ಪ(55) ಮೃತ ಸವಾರರು. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 3:59 pm, Thu, 26 May 22