ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹ, ಮಳೆಗೆ ಕೊಚ್ಚಿ ಹೋದ ಸ್ಮಶಾನ!

ಅತ್ತಿಗೆರೆ ಗ್ರಾಮದಲ್ಲಿ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಇನ್ನೊಂದೆಡೆ ಮಳೆಯ ಆರ್ಭಟಕ್ಕೆ ಸ್ಮಶಾನವೇ ಕೊಚ್ಚಿ ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹ, ಮಳೆಗೆ ಕೊಚ್ಚಿ ಹೋದ ಸ್ಮಶಾನ!
ಮಳೆಗೆ ಕೊಚ್ಚಿ ಹೋದ ಸ್ಮಶಾನ
Follow us
TV9 Web
| Updated By: Rakesh Nayak Manchi

Updated on: May 17, 2022 | 3:47 PM

ದಾವಣಗೆರೆ: ಅತ್ತಿಗೆರೆ ಗ್ರಾಮದಲ್ಲಿ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ(fatal assault) ಪ್ರಕರಣ ಸಂಬಂಧ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳಿಂದ ಪ್ರತಿಭಟನೆ(Protest) ನಡೆಯಿತು. ಚನ್ನಗಿರಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ದಲಿತ ಸಂಘಟನೆಯ ಕಾರ್ಯಕರ್ತರು, ನಂತರ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ನಾಲ್ಕು ದಿನಗಳ ಹಿಂದೆ ದಾವಣಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದಲ್ಲಿ ದಲಿತ ಯುವಕ ಗಣೇಶ್ ಎಂಬಾತನ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ ನಡೆದಿತ್ತು. ಹುಡುಗಿಗೆ ಮೆಸೆಜ್ ಮಾಡಿದ ಎಂಬ ಕಾರಣಕ್ಕೆ ಯುವಕನನ್ನು ಕರೆದು ಬುದ್ಧಿ ಹೇಳುವ ಬದಲು 60ಕ್ಕೂ ಹೆಚ್ಚು ಜನರಿಂದ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಸದ್ಯ ವಿಡಿಯೋ ವೈರಲ್ ಆಗುತ್ತಿದೆ.

ಮಳೆಗೆ ಕೊಚ್ಚಿ ಹೋದ ಸ್ಮಶಾನ, ಸಮಾಧಿ ಹುಡುಕಾಟದಲ್ಲಿ ಸಂಬಂಧಿಕರು

ಚಿಕ್ಕಬಳ್ಳಾಫುರ: ಮಳೆರಾಯನ ಆರ್ಭಟಕ್ಕೆ ಸ್ಮಶಾನವೇ ಕೊಚ್ಚಿ ಹೋದ ಘಟನೆ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ನಿನ್ನೆ ಗೌರಿಬಿದನೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, ಇದರ ರಭಸಕ್ಕೆ ಗೌರಿಬಿದನೂರಿನ ವೀರಂಡಹಳ್ಳಿ ಸ್ಮಶಾನವೇ ಕೊಚ್ಚಿ ಹೋಗಿದೆ. ಈ ಸ್ಮಶಾನದಲ್ಲಿ ಸುಮಾರು 20 ಸಮಾಧಿಗಳಿದ್ದವು. ಅದರಂತೆ, ತಮ್ಮ ಹಿರಿಯರ ಸ್ಮಶಾನವನ್ನು ಹುಡುಕಾಡಲು ಕುಟುಂಬಸ್ಥರು ಪರದಾಡುತ್ತಿದ್ದಾರೆ.

ಸ್ಮಶಾನಕ್ಕೆ ಸೂಕ್ತ ತಡೆಗೋಡೆ ಇಲ್ಲ ಎಂಬ ಆರೋಪ ಇದೀಗ ಕೇಳಿಬಂದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸೂಕ್ತ ತಡೆಗೊಡೆ ನಿರ್ಮಿಸದ ಹಿನ್ನೆಲೆ ಘಟನೆ ಸಂಭವಿಸದೆ ಎಂದು ಸಾರ್ವಜನಿಕರು ಗೌರಿಬಿದನೂರು ನಗರಸಭೆ ವಿರುದ್ದ ಅಸಮಧಾನ ಹೊರಹಾಕಿದ್ದಾರೆ.

ಕರೆಂಟ್ ತಗುಲಿ ನಾಯಿ ಸಾವು

ಧಾರವಾಡ: ವಿದ್ಯುತ್ ಪೆಟ್ಟಿಗೆಯಿಂದ ಹರಿದ ವಿದ್ಯುತ್ ತಗುಲಿ ನಾಯಿಯೊಂದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿವಾಜಿ ಸರ್ಕಲ್ ಬಳಿ ನಡೆದಿದೆ. ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಗೆ ನಾಯಿಯೊಂದು ಆಶ್ರಯ ಪಡೆಯುವ ನಿಟ್ಟಿನಲ್ಲಿ ರಸ್ತೆ ಪಕ್ಕದಲ್ಲಿ ಇರುವ ಫುಟ್​ಪಾತ್ ಮೇಲಿನ ವಿದ್ಯುತ್ ಪೆಟ್ಟಿಗೆ ಬಳಿ ಹೋಗಿದೆ. ಈ ವೇಳೆ ಪೆಟ್ಟಿಗೆಯಿಂದ ವಿದ್ಯುತ್ ಪ್ರಹರಿಸಿ ನಾಯಿ ಸಾವನ್ನಪ್ಪಿದೆ. ಇದರ ಪಕ್ಕದಲ್ಲೇ ಸಾರ್ವಜನಿಕರು ಬೈಕ್​ಗಳನ್ನು ಪಾರ್ಕಿಂಗ್ ಮಾಡಿದ್ದರು. ಆದರೆ, ಪೆಟ್ಟಿಗೆಯ ಸುತ್ತ ಮಳೆ ನೀರು ನಿಂತ ಹಿನ್ನೆಲೆ ಪಾರ್ಕಿಂಗ್ ಮಾಡಿದ್ದ ಬೈಕ್​ಗಳನ್ನು ತರಲು ಬೈಕ್ ಸವಾರರು ಹೆದರುವಂತಾಗಿದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ