Bangalore Police Commissioner: ರಾಜಧಾನಿ ಬೆಂಗಳೂರಿಗೆ ನೂತನ ಪೊಲೀಸ್ ಕಮೀಶನರ್! ಅವರ ಮುಂದಿರುವ ಸವಾಲು -ಟಿವಿ 9 ಕನ್ನಡ ಡಿಜಿಟಲ್ ಲೈವ್ ಚರ್ಚೆ
CH Pratap Reddy: ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿರುವ ಸಿ.ಹೆಚ್. ಪ್ರತಾಪ್ ರೆಡ್ಡಿ ಕಾನೂನು ಸುವ್ಯವಸ್ಥೆಯಲ್ಲಿನ ಸಮಸ್ಯೆಗಳು, ಡ್ರಗ್ಸ್ ಹಾವಳಿ, ಪೂಜಾ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆ ವಿವಾದ, ನಗರದಲ್ಲಿ ಟ್ರಾಫಿಕ್ ಅವ್ಯವಸ್ಥೆ-ಸಾಲು ಸಾಲು ಸವಾಲು ಪರಿಹರಿಸಲು ಹೊಸ ಕಮಿಷನರ್ ಯಾವ ರೀತಿಯ ತಂತ್ರ ಹೆಣೆಯುತ್ತಾರೆ?
ರಾಜಧಾನಿ ಬೆಂಗಳೂರು ಪೊಲೀಸಿಂಗ್ ಬಗ್ಗೆ ಈ ಹಿಂದೆ ಗೃಹ ಸಚಿವರಾಗಿದ್ದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವಾಗಿ ಒಂದು ಖಡಕ್ ನಿರ್ಧಾರ ತೆಗೆದುಕೊಂಡಿದ್ದಾರೆ. ಖಡಕ್ ಐಎಎಸ್ ಅಧಿಕಾರಿ ಸಿ.ಹೆಚ್. ಪ್ರತಾಪ್ ರೆಡ್ಡಿ (CH Pratap Reddy) ಅವರನ್ನು ತಾವೇ ಆಯ್ಕೆ ಮಾಡಿಕೊಂಡು CoP – Bangalore ಆಗಿ ಪ್ರತಿಷ್ಠಾಪಿಸಿದ್ದಾರೆ. ಆದರೆ ಒಂದು ಹೆಜ್ಜೆ ಹಿಂದಡಿಯಿಟ್ಟು ರಾಜಧಾನಿಒಯ ಪೊಲಿಸಿಂಗ್ ಮಾಡುವಂತೆ ಹೇಳಿದ್ದಾರೆ. ADGP Rank ಅದಿಕಾರಿಯಾಗಿಯೇ ಪ್ರತಾಪ್ ರೆಡ್ಡಿ ಅವರು ನಗರವನ್ನು ನಿಭಾಯಿಸಬೇಕಿದೆ. ಬೆಂಗಳೂರು ಪೊಲೀಸ್ ಮತ್ತು ಕರ್ನಾಟಕ ಪೊಲೀಸರು ಅತ್ಯಂತ ದಕ್ಷರು, ಕಾರ್ಯತತ್ಪರು ಎಂಬುದು ಇಡೀ ದೇಶಕ್ಕೆ ತಿಳಿದ ವಿಷಯ. ಆದರೆ ಇತ್ತೀಚಿನ ದಿನಗಳಲ್ಲಿ ಈ ಗೌರವಕ್ಕೆ ಸ್ವಲ್ಪ ಚ್ಯುತಿ, ಧಕ್ಕೆಯಾಗತೊಡಗಿರುವುದು ಅಲ್ಲಗಳೆಯಲಾಗದು. ಇದಕ್ಕೆ ಪೊಲೀಸ್ ವ್ಯವಸ್ಥೆಯೊಂದನ್ನೆ ದೂಷಿಸಲಾಗದು. ಆದರೂ ಪೊಲೀಸಿಂಗ್ ಸ್ವಲ್ಪಮಟ್ಟಿಗೆ ಸಡಿಲಗೊಂಡಿದೆಯಾ? ಎಂಬ ಅನುಮಾನ ಕಾಡುತ್ತಿದೆ. ಇಂತಹ ಕಾಲಘಟ್ಟದಲ್ಲಿ ಖಡಕ್ ಅಧಿಕಾರಿ ಪ್ರತಾಪ್ ರೆಡ್ಡಿ ಇಂದು ಪದಗ್ರಹಣ ಮಾಡಿದ್ದಾರೆ. ಹಾಗಾದರೆ ಹೊಸ ಪೊಲೀಸ್ ಕಮೀಶ್ನರ್ (Bangalore Police Commissioner) ಮುಂದಿರುವ ಸವಾಲುಗಳ ಸಾಲು ಹೇಗಿದೆ?
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿರುವ ಸಿ.ಹೆಚ್. ಪ್ರತಾಪ್ ರೆಡ್ಡಿ ಕಾನೂನು ಸುವ್ಯವಸ್ಥೆಯಲ್ಲಿನ ಸಮಸ್ಯೆಗಳು, ಡ್ರಗ್ಸ್ ಹಾವಳಿ, ಪೂಜಾ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆ ವಿವಾದ, ನಗರದಲ್ಲಿ ಟ್ರಾಫಿಕ್ ಅವ್ಯವಸ್ಥೆ-ಸಾಲು ಸಾಲು ಸವಾಲು ಪರಿಹರಿಸಲು ಹೊಸ ಕಮಿಷನರ್ ಯಾವ ರೀತಿಯ ತಂತ್ರ ಹೆಣೆಯುತ್ತಾರೆ?
ಈ ವಿಷಯವನ್ನಿಟ್ಟುಕೊಂಡು ಆ್ಯಂಕರ್ ಚಂದ್ರಮೋಹನ್ ಇಂದಿನ ಟಿವಿ 9 ಕನ್ನಡ ಡಿಜಿಟಲ್ ಲೈವ್ ಚರ್ಚೆಯನ್ನು ಮಧ್ಯಾಹ್ನ 3.30 ಕ್ಕೆ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ (TV 9 Kannada Digital Live)