ಪಂಜಾಬ್: ಮನೆಯ ಛಾವಣಿ ಮೇಲೆ ಹತ್ತಿ ವ್ಯಕ್ತಿಯಿಂದ ಮನಬಂದಂತೆ ಗುಂಡಿನ ದಾಳಿ, ಇಬ್ಬರು ಸಾವು, ತಾನೂ ಆತ್ಮಹತ್ಯೆಗೆ ಶರಣು

ಮನೆಯ ಛಾವಣಿ ಮೇಲೆ ಹತ್ತಿ ವ್ಯಕ್ತಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಆತ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಚಿಕ್ಕಪ್ಪ, ಚಿಕ್ಕಮ್ಮ ಕುಟುಂಬದ ಜಮೀನು ವಿಷಯವಾಗಿ ವಿವಾದ ನಡೆದಿತ್ತು.

ಪಂಜಾಬ್: ಮನೆಯ ಛಾವಣಿ ಮೇಲೆ ಹತ್ತಿ ವ್ಯಕ್ತಿಯಿಂದ ಮನಬಂದಂತೆ ಗುಂಡಿನ ದಾಳಿ, ಇಬ್ಬರು ಸಾವು, ತಾನೂ ಆತ್ಮಹತ್ಯೆಗೆ ಶರಣು
ಪೊಲೀಸ್-ಸಾಂದರ್ಭಿಕ ಚಿತ್ರ
Image Credit source: The Economic Times

Updated on: Nov 10, 2023 | 2:12 PM

ಮನೆಯ ಛಾವಣಿ ಮೇಲೆ ಹತ್ತಿ ವ್ಯಕ್ತಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಆತ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಚಿಕ್ಕಪ್ಪ, ಚಿಕ್ಕಮ್ಮ ಕುಟುಂಬದ ಜಮೀನು ವಿಷಯವಾಗಿ ವಿವಾದ ನಡೆದಿತ್ತು.

ಆರೋಪಿ ಲಾಲಾ ಸಿಂಗ್ ಪುತ್ರ ಗುರು ಶರಣ್​ ಸಿಂಗ್ ಶುಕ್ರವಾರ ಬೆಳಗ್ಗೆ 12 ಬೋರ್​ ಗನ್ ಹಿಡಿದು ಮನೆಯ ಛಾವಣಿಯ ಮೇಲೆ ಹೋಗಿ ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದ್ದ. ಯಾರ್ಯಾರು ಅವನ ಕಣ್ಣೆದುರಿಗೆ ಕಾಣಿಸುತ್ತಾರೋ ಅವರೆಲ್ಲರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಕಾಕಾ ಸಿಂಗ್ ಅವರ ಮಗ ಗುರುಶಾಂತ್ ಸಿಂಗ್ ಮತ್ತು ನಾರಾಯಣ ಸಿಂಗ್ ಅವರ ಮಗ ಭೋಲಾ ಸಿಂಗ್ ಗುಂಡು ತಗುಲಿ ಸಾವನ್ನಪ್ಪಿದ್ದಾರೆ.

ಜೈಲ್ ಸಿಂಗ್ ಅವರ ಪುತ್ರ ಕುಲದೀಪ್ ಸಿಂಗ್ ಗಾಯಗೊಂಡಿದ್ದಾರೆ. ಇದಾದ ಬಳಿಕ ಆರೋಪಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜನರ ಪ್ರಕಾರ, ಗ್ರಾಮದಲ್ಲಿ 35 ಸುತ್ತಿನ ಗುಂಡಿನ ದಾಳಿ ನಡೆದಿದೆ . ಆರೋಪಿಯ ಕುಟುಂಬದಲ್ಲಿ ಜಮೀನು ವಿವಾದ ನಡೆಯುತ್ತಿದೆ.

ಮತ್ತಷ್ಟು ಓದಿ: ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದ ಗ್ಯಾಂಗ್​ಸ್ಟರ್​ನನ್ನು ಹೊಡೆದು ಕೊಂದ ವೈದ್ಯರು

ಗುಂಡಿನ ದಾಳಿಯಿಂದ ಗ್ರಾಮದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ಜನರು ತಮ್ಮ ಮನೆಗಳಲ್ಲಿ ಅಡಗಿಕೊಂಡರು. ಯಾರೂ ಮನೆಯಿಂದ ಹೊರಗೆ ಬರಲಿಲ್ಲ. ತಡೆಯಲು ಮುಂದಾದವರ ಮೇಲೆ ಆರೋಪಿ ಗುಂಡು ಹಾರಿಸಿದ್ದಾನೆ. ಇದರಿಂದಾಗಿ ಇತರ ಜನರು ಓಡಿ ಹೋಗಿದ್ದಾರೆ, ಸಿಐಎ ಪೊಲೀಸ್ ತಂಡಗಳು ಸ್ಥಳಕ್ಕೆ ತಲುಪಿವೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ