ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಶಿವಗಂಗೆ ಪ್ರವಾಸಿ ಮಂದಿರದಲ್ಲಿ ಪಿಡಬ್ಲ್ಯೂಡಿ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೂಲತಃ ತುಮಕೂರು ಜಿಲ್ಲೆ ಮಧುಗಿರಿಯ ಲಕ್ಷ್ಮೀನರಸಿಂಹಯ್ಯ(56) ಕಚೇರಿಗೆ ಸಂಬಂಧಪಟ್ಟ ಫೈಲ್ ಮಿಸ್ಸಿಂಗ್ ಆದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ದಾಬಸ್‌ಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಧುಗಿರಿಯಲ್ಲಿ ಎಫ್ ಡಿ ಎ ಆಗಿ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮೀನರಸಿಂಹಯ್ಯ. ಕಚೇರಿಗೆ ಸಂಬಂಧಪಟ್ಟ ಫೈಲ್ ಮಿಸ್ಸಿಂಗ್ ಆಗಿರುವ ಒತ್ತಡದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಸೂಕ್ತ ತನಿಖೆಯ ನಂತರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬರಲಿದೆ.
ಬೆಂಗಳೂರು: ಆರ್.ಆರ್.ನಗರ ಬಿಎಂಟಿಸಿ ಘಟಕ-12ರಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಂಗನಾಥ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೇಲಧಿಕಾರಿಗಳು ಡ್ಯೂಟಿ ನೀಡದೆ ವಾಪಸ್ ಕಳಿಸುತ್ತಿದ್ದ ಆರೋಪ ಹಾಗೂ ಅಧಿಕಾರಿಗಳ ಕಿರುಕುಳದಿಂದಾಗಿ ಬೇಸತ್ತು ಹೋಗಿದ್ದೇನೆ ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಎಂಟಿಸಿ ಮೇಲಧಿಕಾರಿಗಳಿಂದ ಕಿರುಕುಳ ಇಂತಹ ಆರೋಪಗಳು ಇದು ಮೊದಲೇನಲ್ಲಾ, ಇಂತಹ ಆರೋಪ ಪ್ರಕರಣಗಳು ಈಗೀಗಾ ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಲಂಚ ಪಡೆದುಕೊಂಡಿರುವ ಆರೋಪದಡಿ ಮನ ನೊಂದ ಹೊಳೆಬಸಪ್ಪ, ವಿಭಾಗದಲ್ಲಿನ ಲಂಚಾವತಾರದ ಬಗ್ಗೆ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.
ಹಾಸನ: ವ್ಯಕ್ತಿಯೊಬ್ಬನಿಗೆ ಮನಬಂದಂತೆ ಥಳಿಸಿರುವ ಘಟನೆ ಬೇಲೂರು ತಾಲ್ಲೂಕಿನ ಅರೇಹಳ್ಳಿ ಸಮೀಪದ ಬೆಳ್ಳಾವರ ಗ್ರಾಮದಲ್ಲಿ ನಡೆದಿದೆ. ಕಾಫಿ ಕದಿಯಲು ಬಂದಿದ್ದ, ಈ ಹಿಂದೆಯೂ ಇದೇ ರೀತಿ ಬಂದಿದ್ದ, ಈ ಸಲ ಸಿಕ್ಕಿ ಬಿದ್ದಿದ್ದಾನೆ ಎಂದು ಆರೋಪಿಸಲಾಗಿದೆ.
ಎಷ್ಟೇ ಗೋಳಾಡಿ ಗೋಗರೆದರೂ ಬಿಡದೆ ಮನಬಂದಂತೆ ಥಳಿಸಿದ್ದಾರೆ. ಐವರು ಮರಕ್ಕೆ ಕಟ್ಟಿಹಾಕಿ ತಲೆಯಲ್ಲಿ ರಕ್ತ ಸುರಿಯುವಂತೆ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆಗಿದೆ. ಕಾಫಿ ಕದಿಯಲು ಬಂದಿದ್ದ ಎಂದು ಆರೋಪಿಸುತ್ತಿದ್ದರೂ ಕೂಡ ಪೊಲೀಸರಿಗೆ ದೂರು ನೀಡದೆ ಮನ ಬಂದಂತೆ ಥಳಿಸಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದಲ್ಲದೆ ಇನ್ನೊಮ್ಮೆ ತಪ್ಪು ಮಾಡೊಲ್ಲ ಎಂದು ಕ್ಷಮೆ ಕೇಳಿದರೂ ಬಿಡದೆ ಮನಬಂದಂತೆ ಥಳಿಸಿದ್ದಾರೆ ಆರೋಪಿಸಲಾಗಿದೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:02 pm, Fri, 27 January 23