ಕೆಎಂಎಫ್ನಲ್ಲಿ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸುವುದಾಗಿ ಹೇಳಿ ನಕಲಿ ಆದೇಶ ಪತ್ರ ನೀಡಿ ವಂಚನೆ; ಚಿತ್ರ ನಿರ್ಮಾಪಕ ಅರೆಸ್ಟ್
ಕೆಎಂಎಫ್ನಲ್ಲಿ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸುವುದಾಗಿ ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯಿಂದ ಆರೋಪಿ ಪ್ರಕಾಶ್ 10 ಲಕ್ಷ ಹಣ ಪಡೆದು ವಂಚನೆ ಮಾಡಿದ್ದರು.

ಬೆಂಗಳೂರು: ಕೆಎಂಎಫ್ನಲ್ಲಿ ಉದ್ಯೋಗ(KMF Job Fraud) ಕೊಡಿಸುವುದಾಗಿ ವಂಚನೆ ಆರೋಪಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಚಿತ್ರ ನಿರ್ಮಾಪಕ ಪ್ರಕಾಶ್ ಅವರನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಕೆಎಂಎಫ್ನಲ್ಲಿ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸುವುದಾಗಿ ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯಿಂದ ಆರೋಪಿ ಪ್ರಕಾಶ್ 10 ಲಕ್ಷ ಹಣ ಪಡೆದು ವಂಚನೆ ಮಾಡಿದ್ದರು.
ಚಿತ್ರ ನಿರ್ಮಾಪಕ ಆರೋಪಿ ಪ್ರಕಾಶ್, ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯೊಬ್ಬರಿಗೆ ಕೆಎಂಎಫ್ನಲ್ಲಿ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸುವುದಾಗಿ ಹೇಳಿ 10 ಲಕ್ಷ ಹಣ ಪಡೆದಿದ್ದಾರೆ. ಬಳಿಕ ಆ ವ್ಯಕ್ತಿಗೆ ಸರ್ಕಾರದ ನಕಲಿ ನೇಮಕಾತಿ ಆದೇಶ ಪತ್ರ ನೀಡಿದ್ದಾರೆ. ಕೆಎಂಎಫ್ ನಿರ್ದೇಶಕರ ಸಹಿ, ಸರ್ಕಾರಿ ಲಾಂಛನಗಳ ನಕಲಿ ಮಾಡಿ ಆದೇಶ ಪ್ರತಿ ನೀಡಿದ್ದಾರೆ. ಆದೇಶ ಪ್ರತಿ ಹಿಡಿದು ಕೆಎಂಎಫ್ ಗೆ ಹೋದಾಗ ಅದು ನಕಲಿ ಆದೇಶ ಪ್ರತಿ ಎಂಬುವುದು ಪತ್ತೆಯಾಗಿದೆ. ಬಳಿಕ ಕೆಎಂಎಫ್ ಅಧಿಕಾರಿಗಳು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಆರೋಪಿ ಪ್ರಕಾಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Cheetah: ಸೌತ್ ಆಫ್ರಿಕಾದಿಂದ 100 ಚೀತಾಗಳು ಭಾರತಕ್ಕೆ
ನಿಪ್ಪಾಣಿ ಗ್ರಾಮೀಣ ಠಾಣೆ ಪಿಎಸ್ಐ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ
ಪಿಎಸ್ಐ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು 50 ಯುವತಿಯರಿಗೆ ವಂಚಿಸಿದ್ದ ನಕಲಿ ಪಿಎಸ್ಐ ಆರೋಪಿ ವಿಜಯಕುಮಾರ್ ಬರಲಿ(28)ನನ್ನು ಬೆಳಗಾವಿನಗರದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ಗ್ರಾಮೀಣ ಠಾಣೆ ಪಿಎಸ್ಐ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ತೆರೆಯಲಾಗಿದೆ. PSI ಅನಿಲ್ ಕುಮಾರ್ ಹೆಸರಲ್ಲಿ ಇನ್ಸ್ಸ್ಟಾಗ್ರಾಂ ಖಾತೆ ತೆರೆದು ವಂಚಿಸಲಾಗಿದೆ. ಯುವತಿಯರಿಂದ 4 ಲಕ್ಷ ಹಣ ಪಡೆದು ವಿಜಯಕುಮಾರ್ ವಂಚಿಸಿದ್ದಾನೆ. ಮದುವೆ ಆಗುವುದಾಗಿ ನಂಬಿಸಿ ಯುವತಿಯರಿಂದ ಹಣ ಪಡೆದಿದ್ದಾನೆ ಎಂಬ ಆರೋಪವೂ ಕೇಳಿ ಬಂದಿದೆ. ವಿಡಿಯೋ ಕಾಲ್ ಮಾಡುವಂತೆ ಓರ್ವ ಯುವತಿ ಈತನಿಗೆ ಗಂಟು ಬಿದ್ದಿದ್ದಳು. ಈತ ತಿಂಗಳು ಕಳೆದ್ರೂ ವಿಡಿಯೋ ಕಾಲ್ ಮಾಡದ ಹಿನ್ನೆಲೆ ಸಂಶಯ ಬಂದು ಈ ಬಗ್ಗೆ ಬೆಳಗಾವಿಯ ಎಸ್‌ಪಿಗೆ ದೂರು ಕೊಟ್ಟಿದ್ದಾಳೆ. ಯುವತಿಯ ದೂರು ಆಧರಿಸಿ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:19 am, Fri, 27 January 23