Rajasthan Crime: ವೃದ್ಧೆಯನ್ನು ಕೊಂದು ಮಾಂಸ ತಿಂದ ಯುವಕ, ಆತ ಕ್ರೂರ ಪ್ರಾಣಿಗಳಂತೆ ವರ್ತಿಸಿದ್ದೇಕೆ? ಇಲ್ಲಿದೆ ಮಾಹಿತಿ

ಯುವಕಯೊಬ್ಬ ವೃದ್ಧೆಯನ್ನು ಕೊಂದು  ಮಾಂಸವನ್ನು ತಿಂದಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯ ಸೆಂದ್ರಾ ಅರಣ್ಯದಲ್ಲಿ ನಡೆದಿದೆ.

Rajasthan Crime: ವೃದ್ಧೆಯನ್ನು ಕೊಂದು ಮಾಂಸ ತಿಂದ ಯುವಕ, ಆತ ಕ್ರೂರ ಪ್ರಾಣಿಗಳಂತೆ ವರ್ತಿಸಿದ್ದೇಕೆ? ಇಲ್ಲಿದೆ ಮಾಹಿತಿ
ಪೊಲೀಸ್Image Credit source: India Today
Follow us
ನಯನಾ ರಾಜೀವ್
|

Updated on: May 28, 2023 | 8:57 AM

ಯುವಕಯೊಬ್ಬ ವೃದ್ಧೆಯನ್ನು ಕೊಂದು  ಮಾಂಸವನ್ನು ತಿಂದಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯ ಸೆಂದ್ರಾ ಅರಣ್ಯದಲ್ಲಿ ನಡೆದಿದೆ. ವೃದ್ಧೆಯನ್ನು ಕೊಂದು ಮುಖವನ್ನು ಪರಚಿದ್ದ, ಬಳಿಕ ತೋಳ, ನಾಯಿಯಂತೆ ಮುಖವನ್ನು ಮೇಲಕ್ಕೆ ಮಾಡಿ ಪ್ರಾಣಿಗಳಂತೆ ಕೂಗಾಡುತ್ತಿದ್ದ. ಆರೋಪಿ ಯುವಕನನ್ನು ಪಾಲಿಯ ಬಂಗಾರ್ ಆಸ್ಪತ್ರೆಯಿಂದ ಜೋಧಪುರದ ಎಂಡಿಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರೇಬಿಸ್​ ಮತ್ತು ಹೈಡ್ರೋಫೋಬಿಯಾಕ್ಕೆ ಸುರೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತನಿಗೆ ಆಗಾಗ ವಿಪರೀತ ಕೋಪ ಬರುತ್ತದೆ, ಅದು ಆತನನ್ನು ಹಿಂಸಾತ್ಮಕವಾಗಿಸುತ್ತಿದೆ. ತಮಗೂ ಕಚ್ಚಿಬಿಟ್ಟರೆ ಎನ್ನುವ ಭಯದಲ್ಲಿ ವೈದ್ಯಕೀಯ ಸಿಬ್ಬಂದಿ ಇದ್ದಾರೆ.

ಯುವಕನು ಬಾಯಲ್ಲಿ ಜೊಲ್ಲು ಸುರಿಸುತ್ತಿರುವ ಕಾರಣ ಬೇರೆಯವರಿಗೂ ಈ ಕಾಯಿಲೆ ಹರಡಬಹುದು ಎಂದು ಭಯಗೊಂಡಿದ್ದಾರೆ. ಯುವಕನ ಜೇಬಿನಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ದೊರೆತಿದ್ದು, ರೇಬಿಸ್ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಈ ಕಾಯಿಲೆಯಿಂದಾಗಿ ಯುವಕ ಅತ್ಯಂತ ಹಿಂಸಾತ್ಮಕ ರೂಪಕ್ಕೆ ಹೋಗುತ್ತಿದ್ದಾನೆ.

ಮತ್ತಷ್ಟು ಓದಿ: ಬೀದಿ ನಾಯಿಗಳನ್ನು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ಅಕ್ರಮ ನಾಯಿ ಮಾಂಸ ಮಾರಾಟಕ್ಕಿರಬಹುದು ಎಂದು ಶಂಕಿಸಿದ ಪೊಲೀಸ್

ರೇಬೀಸ್‌ನಲ್ಲಿ ಎರಡು ರೀತಿಯ ಲಕ್ಷಣಗಳಿವೆ ಎಂದು ಹೇಳಿದ್ದಾರೆ. ಮೊದಲ ವಿಧದ ರೇಬಿಸ್​ನಲ್ಲಿ ಮಂದತೆಯ ಲಕ್ಷಣಗಳು ಬರುತ್ತವೆ. ಇದರಲ್ಲಿ ವ್ಯಕ್ತಿಯು ಏನನ್ನೂ ಮಾಡಲು ಸಾಧ್ಯವಿಲ್ಲ ಹಾಗೆಯೇ ಸಾವನ್ನಪ್ಪುತ್ತಾರೆ, ಆದರೆ ಮತ್ತೊಂದರಲ್ಲಿ ಅವರು ತುಂಬಾ ಆಕ್ರಮಣಕಾರಿಯಾಗುತ್ತಾರೆ. ಅದೇ ಲಕ್ಷಣಗಳು ಈ ಸುರೇಂದ್ರನಲ್ಲೂ ಕಂಡು ಬಂದಿದೆ.

ಈ ಯುವಕನಿಗೆ ಹುಚ್ಚುನಾಯಿ ಕಚ್ಚಿರಬಹುದು ಆದರೆ, ಲಸಿಕೆ ಹಾಕಿಸಲಿಲ್ಲ, ನಾಯಿಯ ಹೊರತಾಗಿ, ತೋಳ, ನರಿ, ಕತ್ತೆಕಿರುಬ, ನರಿ, ಮಂಗ ಅಥವಾ ಇತರ ಪ್ರಾಣಿಗಳ ಕಡಿತದಿಂದಲೂ ರೇಬೀಸ್ ಉಂಟಾಗುತ್ತದೆ.

ಯುವಕನ ಕೈಕಾಲು ಕಟ್ಟಿ ಆಸ್ಪತ್ರೆಗೆ ಕರೆತರಲಾಯಿತು, ಆತನನ್ನು ಸಮಾಧಾನಪಡಿಸಲು ಚಚ್ಚುಮದ್ದು ನೀಡಬೇಕಾಯಿತು. ಯುವಕರು ಹೈಡ್ರೋಫೋಬಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಸ್ಥಿತಿ ಹದಗೆಡುತ್ತಿದ್ದಂತೆ, ವೈದ್ಯಕೀಯ ಮಂಡಳಿಯ ತಂಡವು ಆತನನ್ನು ಮಥುರಾದಾಸ್ ಮಾಥುರ್ ಆಸ್ಪತ್ರೆಗೆ ಶಿಫಾರಸು ಮಾಡಲು ನಿರ್ಧರಿಸಿತು. ಚಿಕಿತ್ಸೆಗಾಗಿ ಜೋಧಪುರಕ್ಕೆ ಕಳುಹಿಸಲಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ