Rajasthan Crime: ವಿವಾಹಿತ ಗೆಳತಿಯನ್ನು ಕೊಂದು ದೇಹವನ್ನು ಕತ್ತರಿಸಿ ಊರಿನ ವಿವಿಧ ಭಾಗಗಳಲ್ಲಿ ಎಸೆದ ವ್ಯಕ್ತಿಯ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಕೊಲೆ ಪ್ರಕರಣ ಇನ್ನೂ ಮಾಸುವ ಮುನ್ನವೇ ಮತ್ತೊಂದು ಅಂಥದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ರಾಜಸ್ಥಾನದ ನಾಗೌರ್ ನಲ್ಲಿ ಮತ್ತೊಂದು ಅಮಾನುಷ ಘಟನೆ ನಡೆದಿದೆ.

Rajasthan Crime: ವಿವಾಹಿತ ಗೆಳತಿಯನ್ನು ಕೊಂದು ದೇಹವನ್ನು ಕತ್ತರಿಸಿ ಊರಿನ ವಿವಿಧ ಭಾಗಗಳಲ್ಲಿ ಎಸೆದ ವ್ಯಕ್ತಿಯ ಬಂಧನ
ಬಂಧನ
Follow us
ನಯನಾ ರಾಜೀವ್
|

Updated on: Feb 20, 2023 | 10:48 AM

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಕೊಲೆ ಪ್ರಕರಣ ಇನ್ನೂ ಮಾಸುವ ಮುನ್ನವೇ ಮತ್ತೊಂದು ಅಂಥದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ರಾಜಸ್ಥಾನದ ನಾಗೌರ್ ನಲ್ಲಿ ಮತ್ತೊಂದು ಅಮಾನುಷ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಈಗಾಗಲೇ ಮದುವೆಯಾಗಿದ್ದ ತನ್ನ ಗೆಳತಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಭಾಗಗಳಾಗಿ ಕತ್ತರಿಸಿ ರಾಜಸ್ಥಾನದ ನಾಗೌರ್‌ನಲ್ಲಿ ಹಲವಾರು ಸ್ಥಳಗಳಲ್ಲಿ ಎಸೆದಿದ್ದಾನೆ. ಈ ಪ್ರಕರಣವು ದೆಹಲಿಯ ಭೀಕರವಾದ ಶ್ರದ್ಧಾ ವಾಕರ್ ಹತ್ಯೆಯನ್ನು ನೆನಪಿಸುವಂಥದ್ದಾಗಿದೆ.

ಆರೋಪಿಯನ್ನು ಮದುವೆಯಾಗುವಂತೆ ಮಹಿಳೆ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಸಂತ್ರಸ್ತೆಯ ಸಂಬಂಧಿಕರು ನಾಪತ್ತೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಸಂತ್ರಸ್ತೆಯ ದೇಹದ ಭಾಗಗಳನ್ನು ದೇವ್ರ ಗ್ರಾಮದ ಬಳಿಯ ಬಾವಿಗೆ ಎಸೆದಿರುವುದಾಗಿ ಆರೋಪಿ ಪೊಲೀಸರಿಗೆ ಹೇಳಿದ್ದಾನೆ. ಛಿದ್ರಗೊಂಡ ದೇಹದ ಭಾಗಗಳು 25 ದಿನಗಳ ನಂತರವೂ ಪತ್ತೆಯಾಗುತ್ತಿದೆ. ಕಾರ್ಯಾಚರಣೆಗಾಗಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಸಹ ನಿಯೋಜಿಸಲಾಗಿದೆ ಮತ್ತು ಸಂತ್ರಸ್ತೆಯ ದೇಹದ ಭಾಗಗಳನ್ನು ಪತ್ತೆಹಚ್ಚಲು ಡ್ರೋನ್ ಕ್ಯಾಮೆರಾಗಳನ್ನು ಸಹ ಬಳಸಲಾಯಿತು.

ಮತ್ತಷ್ಟು ಓದಿ: ಬೆಂಗಳೂರಿನ ಕಾಲೇಜೊಂದರಲ್ಲಿ ಹಾಡಹಗಲೇ ಯುವತಿಗೆ ಚಾಕು ಇರಿದು ಕೊಲೆ ಮಾಡಿದ ಯುವಕ: ಪ್ರೀತಿ ಪ್ರೇಮದ ಶಂಕೆ

ಆಕೆ ಬಾಲಾಜಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಾಸರ್ ಗ್ರಾಮದ ವಿವಾಹಿತ ಮಹಿಳೆ. ಜನವರಿ 20 ರಂದು ಮುಂಡಾಸರ್‌ನಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗುವುದಾಗಿ ಹೇಳಿ ಮಹಿಳೆ ತನ್ನ ತಾಯಿಯ ಮನೆಯನ್ನು ತೊರೆದಿದ್ದಳು. ಆದರೆ, ಗಂಟೆಗಳ ನಂತರ ಆಕೆಯನ್ನು ಸಂಪರ್ಕಿಸಿದಾಗ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು.

ಎರಡು ದಿನಗಳ ನಂತರ ಸಂತ್ರಸ್ತೆಯ ಸಂಬಂಧಿಕರು ಪೊಲೀಸರನ್ನು ಸಂಪರ್ಕಿಸಿದರು. ಪೊಲೀಸರು ಹುಡುಕಾಟ ನಡೆಸುತ್ತಿದ್ದಂತೆ ಜನವರಿ 28 ರಂದು ನಾಗೌರ್ ನಗರದ ಮಾಲ್ವಾ ರಸ್ತೆಯಲ್ಲಿರುವ ಕೇಂದ್ರೀಯ ವಿದ್ಯಾಲಯದ ಹಿಂಭಾಗದ ಪೊದೆಗಳಲ್ಲಿ ಮಹಿಳೆಯ ಬಟ್ಟೆ, ಕೂದಲು, ದವಡೆ ಪತ್ತೆಯಾಗಿದೆ. ಸಂತ್ರಸ್ತೆಯ ಉಡುಪುಗಳಲ್ಲಿ ರಕ್ತದ ಕಲೆಗಳಿರುವುದು ದೃಢಪಟ್ಟ ಬಳಿಕ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

ವಿಚಾರಣೆ ನಡೆಸಿದಾಗ, ಆರೋಪಿಗಳು ಸಂತ್ರಸ್ತೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡರು. ಇಂಡಿಯಾ ಟುಡೇ ಪ್ರಕಾರ, ಗುಡ್ಡಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರಿದ್ದರಿಂದ ಹತ್ಯೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ದೇವ್ರ ಗ್ರಾಮದ ಬಾವಿಯಲ್ಲಿ ಗುಡ್ಡಿ ದೇಹದ ಭಾಗಗಳನ್ನು ಎಸೆದಿರುವುದಾಗಿ ಆರೋಪಿ ತಿಳಿಸಿದ್ದಾನೆ. ಆದರೆ, ದಿನಗಟ್ಟಲೆ ಹುಡುಕಾಟ ನಡೆಸಿದ ಪೊಲೀಸರು ಶವವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ನಂತರ ಆರೋಪಿಗಳು ಪೊಲೀಸರನ್ನು ದಾರಿತಪ್ಪಿಸುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಯ ಪಾಲಿಗ್ರಾಫ್ ಪರೀಕ್ಷೆಯನ್ನು ಜೈಪುರದಲ್ಲಿ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.