ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ: ವಿಡಿಯೋ ರೂವಾರಿ ಸೇರಿ ಮೂವರಿಗೆ 14 ದಿನ ನ್ಯಾಯಾಂಗ ಬಂಧನ

| Updated By: ರಮೇಶ್ ಬಿ. ಜವಳಗೇರಾ

Updated on: Oct 30, 2022 | 6:04 PM

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾಗಡಿ ತಾಲೂಕಿನ ಕಣ್ಣೂರು ಮಠದ ಮೃತ್ಯುಂಜಯಶ್ರೀ ಜೈಲುಪಾಲಾಗಿದ್ದಾರೆ.

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ: ವಿಡಿಯೋ ರೂವಾರಿ ಸೇರಿ ಮೂವರಿಗೆ 14 ದಿನ ನ್ಯಾಯಾಂಗ ಬಂಧನ
ಕಣ್ಣೂರು ಮಠದ ಮೃತ್ಯುಂಜಯಶ್ರೀ
Follow us on

ರಾಮನಗರ: ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್ ಮಾಡಿದ್ದ ಮೃತ್ಯುಂಜಯಶ್ರೀ ಸೇರಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಲಯ​ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಬಂಡೇಮಠದ ಸ್ವಾಮೀಜಿ ಮತ್ತು ಹನಿಟ್ರ್ಯಾಪ್ ಜಾಲ ಹೆಣೆದ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ ಹಾಗೂ ಎ2 ನೀಲಾಂಬಿಕೆ, ಎ3 ಮಹದೇವಯ್ಯನನ್ನು ಇಂದು(ಅಕ್ಟೋಬರ್ 30) ಪೊಲೀಸರು ಬಂಧಿಸಿ ನ್ಯಾಯಾಲಕ್ಕೆ ಒಪ್ಪಿಸಿದ್ದರು. ಇದೀಗ ಕೋರ್ಟ್, ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ: ಹನಿಟ್ರ್ಯಾಪ್ ಬಲೆ ಬೀಸಿದ್ದ ಯುವತಿಯೊಂದಿಗೆ ಕಣ್ಣೂರು ಮಠದ ಸ್ವಾಮೀಜಿ, ವಕೀಲ ಬಂಧನ

ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸುತ್ತಿದ್ದಂತೆಯೇ ಆರೋಪಿ ಕಣ್ಣೂರು ಮಠದ ಮೃತ್ಯುಂಜಯಶ್ರೀ ಹಾಗೂ ಎ3 ಆರೋಪಿ ಮಹದೇವಯ್ಯ ಅವರನ್ನು ಪೊಲೀಸರು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಿದರು. ಇನ್ನು ಎ2 ಆರೋಪಿ ನೀಲಾಂಬಿಕೆಯನ್ನು ಬೆಂಗಳೂರಿನ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಬಂಡೇಮಠದ ಸ್ವಾಮೀಜಿ ಮತ್ತು ಹನಿಟ್ರ್ಯಾಪ್ ಜಾಲ ಹೆಣೆದ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಅಣ್ಣತಮ್ಮಂದಿರು. ಎರಡೂ ಮಠಗಳ ನಡುವೆ ಆಸ್ತಿ ವಿವಾದ ಇತ್ತು. ಈ ಹಿನ್ನೆಲೆಯಲ್ಲಿ ಹನಿಟ್ರ್ಯಾಪ್ ನಡೆದಿದೆ ಎಂದು ಪೊಲೀಸರು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ನಡೆಸಿದ್ದಾರೆ.

ಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಸೂಚನೆಯಂತೆ ನೀಲಾಂಬಿಕೆ ಅಲಿಯಾಸ್​​ ಚಂದು ಎನ್ನುವಾಕೆ ಬಸವಲಿಂಗ ಸ್ವಾಮೀಜಿ ಜೊತೆ ಕ್ಲೋಸ್ ಆಗಿ ಬಳಿಕ ಅವರೊಂದಿಗೆ ವಿಡಿಯೋ ಮಾಡಿಕೊಂಡು ಮೃತ್ಯುಂಜಯಶ್ರೀಗೆ ನೀಡಿದ್ದಾಳೆ. ಬಳಿಕ ಆ ವಿಡಿಯೋವನ್ನು ಮಹದೇವಯ್ಯ ಎನ್ನುವಾತ ಎಡಿಟ್ ಮಾಡಿ ಬಂಡೇಮಠದ ಸ್ವಾಮೀಜಿಗೆ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ.

Published On - 5:19 pm, Sun, 30 October 22