AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಮ್ಮನಹಳ್ಳಿ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟದಿಂದ ಕಾರ್ಮಿಕ ಸಾವು ಪ್ರಕರಣದ ತನಿಖೆ ಸಿಐಡಿಗೆ ಹೆಗಲಿಗೆ

ಕೊಮ್ಮನಹಳ್ಳಿ ಬಳಿ ಕ್ವಾರಿಯಲ್ಲಿ ಸ್ಫೋಟಗೊಂಡು ಕಾರ್ಮಿಕ ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಕೋಲಾರ ಪೊಲೀಸರು ಸಿಐಡಿಗೆ ವಹಿಸಿದ್ದಾರೆ.

ಕೊಮ್ಮನಹಳ್ಳಿ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟದಿಂದ ಕಾರ್ಮಿಕ ಸಾವು ಪ್ರಕರಣದ ತನಿಖೆ ಸಿಐಡಿಗೆ ಹೆಗಲಿಗೆ
ಕೊಮ್ಮನಹಳ್ಳಿ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟದಿಂದ ಕಾರ್ಮಿಕ ಸಾವು ಪ್ರಕರಣದ ತನಿಖೆ ಸಿಐಡಿಗೆ ಹೆಗಲಿಗೆ
Follow us
TV9 Web
| Updated By: Rakesh Nayak Manchi

Updated on:Oct 30, 2022 | 2:25 PM

ಕೋಲಾರ: ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಕಲ್ಲು ಕ್ವಾರಿಯಲ್ಲಿ (stone quarry) ಸ್ಫೋಟಗೊಂಡು ಕಾರ್ಮಿಕ ಮೃತಪಟ್ಟ ಪ್ರಕರಣವನ್ನು ಸಿಐಡಿಗೆ ವಹಿಸಲು ಸರ್ಕಾರ ಚಿಂತನೆ ನಡೆಸಿತ್ತು. ಅದರಂತೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಕೊಮ್ಮನಹಳ್ಳಿ ಬಳಿ ಜಿಲೆಟಿನ್​ ಸ್ಫೋಟವಾಗಿ ಸಾವು ಸಂಭವಿಸಿದ ಪ್ರಕರಣ ಸಂಬಂಧ ತನಿಖೆ ನಡೆಸಿದ ಕೋಲಾರ ಪೊಲೀಸರು ಈವರೆಗೆ ಎಂಟು ಮಂದಿಯನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿತ್ತು. ಸ್ಫೋಟ ಪ್ರಕರಣವನ್ನು ಅಪಘಾತವೆಂದು ಬಿಂಬಿಸಿ ಮುಚ್ಚಿಹಾಕಲು ಯತ್ನಿಸಲಾಗಿತ್ತು. ಸ್ಥಳೀಯ ರಾಜಕಾರಣಿಗಳ ಪ್ರಭಾವ ಬಳಸಿ ಮುಚ್ಚಿಹಾಕಲು ಯತ್ನಿಸಲಾಗಿತ್ತು. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಐಡಿಗೆ ಮಾಜಿ ಶಾಸಕ ಮಂಜುನಾಥಗೌಡ ಸೇರಿ ಹಲವರು ಮನವಿ ಮಾಡಿದ್ದರು.

ಅ.13ರಂದು ಕೊಮ್ಮನಹಳ್ಳಿ ಬಳಿ ಜಿಲೆಟಿನ್​ ಸ್ಫೋಟವಾಗಿ ಕಾರ್ಮಿಕ ಸಾವನ್ನಪ್ಪಿದ್ದರು. ಬಳಿಕ ಪ್ರಕರಣವನ್ನು ಮುಚ್ಚಿಹಾಕುವ ನಿಟ್ಟಿನಲ್ಲಿ ಸುಳ್ಳು ದೂರು ನೀಡಲಾಗಿತ್ತು. ಕಲ್ಲು ಕ್ವಾರಿ ಮಾಲೀಕ ಮಂಜುನಾಥ, ಡ್ರಿಲ್ ಮಾಡಿದ್ದ ಸುರೇಶ್​, ಚಾಲಕ ಆಂಜಿ ಮತ್ತು ಸುಳ್ಳು ದೂರು ನೀಡಿದ್ದ ನಿತೇಶ್, ಸ್ಪೋಟಕ ಪರವಾನಿಗೆ ಹೊಂದಿದ್ದ ದೀಪೇನ್ ಸೇರಿ ಎಂಟು ಜನರ‌ನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಸ್ಥಳೀಯ ರಾಜಕಾರಣಿಗಳ ಪ್ರಭಾವ ಬಳಸಿ ಪ್ರಕರಣ ಮುಚ್ಚಿಹಾಕುವ ಶಂಕೆ ವ್ಯಕ್ತವಾಗಿತ್ತು.

ರೆಸ್ಟೊರೆಂಟ್ ಲೆಕ್ಕ ಕೇಳಿದ್ದಕ್ಕೆ ಕೊಲೆ

ಬೆಂಗಳೂರು: ಮೂವರು ಸೇರಿ ಪಾರ್ಟ್ನರ್ ಶಿಪ್ ನಲ್ಲಿ ರೆಸ್ಟೋರೆಂಟ್ ಆರಂಭ ಮಾಡಿದ್ದರು. ಅದರಂತೆ ವ್ಯಾಪಾರವೂ ನಡೆಸಲಾಗುತ್ತಿತ್ತು. ನಿನ್ನೆ ಸಂಜೆ ಓರ್ವ ಪಾರ್ಟ್ನರ್ ರೆಸ್ಟೋರೆಂಟ್​ನ ಲೆಕ್ಕಾಚಾರಗಳನ್ನು ಕೇಳಿದ್ದಕ್ಕೆ ಉಳಿದವರು ಸೇರಿಕೊಂಡು ಆತನನ್ನು ಕೊಲೆ ಮಾಡಿದ ಘಟನೆ ನಗರದ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಿರಿಸಾವೆ ಮೂಲದ ಸೋಮೇಗೌಡ(36) ಕೊಲೆಯಾದ ವ್ಯಕ್ತಿಯಾಗಿದ್ದು, ಮಂಡ್ಯ ಮೂಲದ ಮುತ್ತುರಾಜ್ ಮೇಲೆ ಕೊಲೆ ಆರೋಪ ಕೇಳಿಬಂದಿದೆ.

ಹರೀಶ್, ಸೋಮೇಗೌಡ ಮತ್ತು ಮುತ್ತುರಾಜ್ ಸೇರಿಕೊಂಡು ಎರಡು ತಿಂಗಳ ಹಿಂದೆಯಷ್ಟೇ ಪಾರ್ಟ್ನರ್​ಶಿಪ್​ನಲ್ಲಿ ಕುಂಬಳಗೋಡು ಬಳಿಯ ಅಮರಾವತಿ ರೆಸ್ಟೋರೆಂಟ್ ತೆರೆದಿದ್ದರು. ಈ ಹೊಟೇಲ್​ನ ಜವಾಬ್ದಾರಿಯನ್ನು ಮುತ್ತುರಾಜ್ ನೋಡಿಕೊಳ್ಳುತ್ತಿದ್ದ. ಹರೀಶ್ ಮತ್ತು ಸೋಮೇಗೌಡ ಹೆಚ್ಚಾಗಿ ಬರುತ್ತಿರಲಿಲ್ಲ. ಆದರೆ ಎರಡು ತಿಂಗಳ ಬಳಿಕ ಬಂದ ಸೋಮೇಗೌಡ ಮುತ್ತುರಾಜ್ ಬಳಿ ಲೆಕ್ಕ ಕೇಳಿದ್ದಾನೆ. ಈ ವೇಳೆ ಮುತ್ತುರಾಜ್ ಐದು ಲಕ್ಷ ಲಾಸ್ ತೋರಿಸಿದ್ದಾನೆ.

ಲೆಕ್ಕಾಚಾರದಲ್ಲಿ ನಷ್ಟವನ್ನು ತೋರಿಸಡಿದ ಮುತ್ತುರಾಜ್​ಗೆ ಹೋಟೆಲ್‌ ಚನ್ನಾಗಿಯೇ ನಡೀತಿದೆ, ನಷ್ಟ ಹೇಗಾಯ್ತು ಎಂದು ಸೋಮೇಗೌಡ ಪ್ರಶ್ನಿಸಿದ್ದಾನೆ. ಅಲ್ಲದೆ ಮತ್ತೊಬ್ಬ ಪಾರ್ಟ್ನರ್ ಹರೀಶ್​ಗೂ ಕರೆ ಮಾಡಿ ವಿಷಯ ತಿಳಿಸಿದ್ದ. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದೆ. ಕೂಪಗೊಂಡ ಮುತ್ತುರಾಜ್, ತರಕಾರಿ ಕಟರ್​ನಿಂದ ಸೋಮೇಗೌಡ ಮೇಲೆ ಮುತ್ತುರಾಜ್ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಸೋಮೇಗೌಡನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:25 pm, Sun, 30 October 22

ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ