ರೌಡಿಶೀಟರ್ ಬಬ್ಲಿ ಹತ್ಯೆ: ಬೈಕ್‌ ಮೇಲೆ ಮಚ್ಚು ಎತ್ತಿ ಹಿಡಿದು ಸಂಭ್ರಮಿಸಿದ್ದ ಹಂತಕ ಪಡೆ

rowdy sheeter babli murder: ರೌಡಿ ಶೀಟರ್ ಬಬ್ಲಿ ಕೊಲೆಯ ಸಿಸಿಟಿವಿ ಫೂಟೇಜ್​ ಅನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಅದರಲ್ಲಿ ಹಂತಕರ ಪೈಶಾಚಿಕತೆ ಎಲ್ಲೆ ಮೀರಿರುವುದು ಕಾಣಬರುತ್ತದೆ. ಜುಲೈ 19 ರಂದು ಕೋರಮಂಗಲದ ಯೂನಿಯನ್​ ಬ್ಯಾಂಕ್ ಶಾಖೆಯ ಒಳಗಡೆಯೇ ಆಡುಗೋಡಿ ರೌಡಿಶೀಟರ್ ಆಗಿದ್ದ ಬಬ್ಲಿನನ್ನು ವಿರೋಧಿ ಪಡೆ ಹತ್ಯೆ ಮಾಡಿತ್ತು.

ರೌಡಿಶೀಟರ್ ಬಬ್ಲಿ ಹತ್ಯೆ: ಬೈಕ್‌ ಮೇಲೆ ಮಚ್ಚು ಎತ್ತಿ ಹಿಡಿದು ಸಂಭ್ರಮಿಸಿದ್ದ ಹಂತಕ ಪಡೆ
ರೌಡಿಶೀಟರ್ ಬಬ್ಲಿ ಹತ್ಯೆ: ಬೈಕ್‌ ಮೇಲೆ ಮಚ್ಚು ಎತ್ತಿ ಹಿಡಿದು ಸಂಭ್ರಮಿಸಿದ್ದ ಹಂತಕ ಪಡೆ
Edited By:

Updated on: Jul 22, 2021 | 9:30 AM

ಬೆಂಗಳೂರು: ಒಂದು ಕಡೆಯಿಂದ ಬೆಂಗಳೂರು ನಗರ ಪೊಲೀಸರು ಸಾವಿರಾರು ರೌಡಿಗಳನ್ನು ಕಾರ್ನರ್​ ಮಾಡುತ್ತಾ ರಾಜಧಾನಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವತ್ತ ಗಮನಹರಿಸಿರುವಾಗಲೇ ಅಲ್ಲಲ್ಲಿ ಹತ್ಯೆ ಪ್ರಕರಣಗಳು ನಡೆದಿವೆ. ಮಾಜಿ ಕಾರ್ಪೊರೇಟರ್ ಪತ್ನಿಯ ಹತ್ಯೆ ಬಳಿಕ, ಕಳೆದ​ ಸೋಮವಾರದಂದು ಮತ್ತೊಬ್ಬ ಮಾಜಿ ರೌಡಿಶೀಟರ್​ನನ್ನು ಆತನ ಕುಟುಂಬಸ್ಥರ ಎದುರೇ ಹತ್ಯೆ ಮಾಡಿದ್ದ ಹಂತಕರು ವ್ಯವಸ್ಥೆಗೆ ಸಡ್ಡು ಹೊಡೆಯುವಂತೆ ಘಟನಾ ಸ್ಥಳದಲ್ಲೇ ಸಂಭ್ರಮಿಸಿದ್ದರು. ಅದೀಗ ಸಿಸಿಟಿವಿಯಲ್ಲಿ ದಾಖಲಾಗಿದೆ.

ರೌಡಿ ಶೀಟರ್ ಬಬ್ಲಿ ಕೊಲೆಯ ಸಿಸಿಟಿವಿ ಫೂಟೇಜ್​ ಅನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಅದರಲ್ಲಿ ಹಂತಕರ ಪೈಶಾಚಿಕತೆ ಎಲ್ಲೆ ಮೀರಿರುವುದು ಕಾಣಬರುತ್ತದೆ. ಜುಲೈ 19 ರಂದು ಕೋರಮಂಗಲದ ಯೂನಿಯನ್​ ಬ್ಯಾಂಕ್ ಶಾಖೆಯ ಒಳಗಡೆಯೇ ಆಡುಗೋಡಿ ರೌಡಿಶೀಟರ್ ಆಗಿದ್ದ ಬಬ್ಲಿನನ್ನು ವಿರೋಧಿ ಪಡೆ ಹತ್ಯೆ ಮಾಡಿತ್ತು.

ಹೆಂಡತಿ ಜೊತೆ ಬ್ಯಾಂಕ್ ಗೆ ಬಂದಿದ್ದಾಗ ಅಟ್ಯಾಕ್ ಮಾಡಿದ್ದ ಗ್ಯಾಂಗ್ ಬ್ಯಾಂಕ್ ಒಳಗೆ ನುಗ್ಗಿ ಕೊಚ್ಚಿ ಕೊಲೆ ಮಾಡಿತ್ತು. ಬಬ್ಲಿ ಪತ್ನಿಯ ಕೈ ಬೆರಳುಗಳನ್ನೂ ಸಹ ಕಟ್​ ಮಾಡಿದ್ದರು. ಅಷ್ಟಕ್ಕೆ ಸುಮ್ಮನಾಗದ ಹಂತಕ ಪಡೆ ಕೊಲೆಯ ನಂತರ, ವಾಪಸಾಗುವಾಗ ಸ್ಥಳದಲ್ಲಿ ಮಚ್ಚು ಹಿಡಿದು ಸಂಭ್ರಮಿಸಿತ್ತು. ವಾಪಸಾಗುತ್ತಾ ಬೈಕ್‌ ಮೇಲೆ ಮಚ್ಚು ಎತ್ತಿ ಹಿಡಿದು ಪೈಶಾಚಿಕತೆ ಮೆರೆದಿದ್ದರು. ಈ ಭಯಾನಕ ದೃಶ್ಯಗಳೆಲ್ಲಾ ಸಿಸಿಟಿವಿಯಲ್ಲಿ‌ ಸೆರೆಯಾಗಿದೆ.

ನಿನ್ನೆ ಕೋರಮಂಗಲ ಪೊಲೀಸರು ಆರೋಪಿಗಳ ಮೇಲೆ ಗುಂಡು ಹಾರಿಸಿ ರವಿ ಮತ್ತು ಪ್ರದೀಪ್ ಅಲಿಯಾಸ್ ಚೊಟ್ಟೆ ಎಂಬಿಬ್ಬರ ಕಾಲಿಗೆ ಗುಂಡು ಹಾರಿಸಿ, ಅರೆಸ್ಟ್​ ಮಾಡಿದ್ದರು.

ರೌಡಿ ಶೀಟರ್ ಬಬ್ಲಿ ಕೊಲೆಯ ಸಿಸಿಟಿವಿ ಫೂಟೇಜ್​ ಅನ್ನು ಕೋರಮಂಗಲ ಪೊಲೀಸರು ಸಂಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಶೂಟೌಟ್; ರೌಡಿಶೀಟರ್ ಬಬ್ಲಿ ಹತ್ಯೆ ಆರೋಪಿಗಳ ಮೇಲೆ ಗುಂಡು, ಹತ್ತು ರೌಡಿಗಳು ಅಂದರ್

(rowdy sheeter babli murder case koramangala police get cctv footage)