AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಗೆಳೆಯನ ಮದುವೆಗೆ ಬಂದಿದ್ದ ಸ್ನೇಹಿತರ ಜಗಳ; ಕುಡಿದ ಅಮಲಿನಲ್ಲಿ ಬಾಲ್ಯದ ಗೆಳೆಯನ ಗಂಟಲನ್ನೇ ಕುಯ್ದುಬಿಟ್ಟ

ಅವರ ಸ್ನೇಹಿತರೊಬ್ಬರು 1 ಗಂಟೆಯ ಸರಿಸುಮಾರಿಗೆ ಕರೆ ಮಾಡಿ ಟಿಂಕು ಟೆರೆಸ್​ನಿಂದ ಬಿದ್ದು ಅಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಷಯ ತಿಳಿಸಿದರು. ಆದರೆ ಆಸ್ಪತ್ರೆಯಲ್ಲಿಯೇ ಗೊತ್ತಾದದ್ದು ದೀಪಕ್​ ಪಂಡಿತ್​ ನನ್ನ ಸಹೋದರನ ಗಂಟಲು ಕತ್ತರಿಸಿದ್ದಾನೆ ಎಂದು ಮೃತ ದುರ್ದೈವಿ ಟಿಂಕುವಿನ ಹಿರಿಯ ಸಹೋದರ ಹೇಳಿದ್ದಾರೆ.

Crime News: ಗೆಳೆಯನ ಮದುವೆಗೆ ಬಂದಿದ್ದ ಸ್ನೇಹಿತರ ಜಗಳ; ಕುಡಿದ ಅಮಲಿನಲ್ಲಿ ಬಾಲ್ಯದ ಗೆಳೆಯನ ಗಂಟಲನ್ನೇ ಕುಯ್ದುಬಿಟ್ಟ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 22, 2021 | 2:15 PM

Share

ಸಂತೋಷದಿಂದ ಆಚರಿಸುತ್ತಿದ್ದ ವಿವಾಹ ಮಹೋತ್ಸವದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಘಟನೆ ಘಾಜಿಯಾಬಾದ್​ನಲ್ಲಿ(Ghaziabad) ನಡೆದಿದ್ದು ಆಪ್ತ ಸ್ನೇಹಿತನ ತಂಗಿಯ ಮದುವೆಗೆಂದು ತೆರಳಿದ್ದ ಸ್ನೇಹಿತರ(Friends) ನಡುವೆ ಜಗಳ ಉಂಟಾಗಿದೆ. ವಾದ-ವಿವಾದ ವಿಪರೀತಕ್ಕೆ ಇಳಿದ  ಪರಿಣಾಮ 19 ವರ್ಷದ ಯುವಕ ಸಾವಿಗೀಡಾಗಿದ್ದಾನೆ(Crime News). ಪೊಲೀಸರು ಹೇಳಿದ ಮಾಹಿತಿ ಪ್ರಕಾರ, ಮೃತ ದುರ್ದೈವಿ ಟಿಂಕು ಎಂದು ಗುರುತಿಸಲಾಗಿದೆ.

ಟಿಂಕು ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಟಿಂಕು ಮತ್ತು ದೀಪಕ್​ ಪಂಡಿತ್​ ಬಾಲ್ಯದ ಗೆಳೆಯರು. ವಿವಾಹ ಕಾರ್ಯಕ್ರಮಕ್ಕಾಗಿ ಘಾಜಿಯಾಬಾದ್​ಗೆ ತೆರಳಿದ್ದರು. ಸ್ನೇಹತರೆಲ್ಲಾ ಸೇರಿ ಟೆರೇಸ್​ ಮೇಲೆ ಹತ್ತಿ ಕುಳಿತು ಪಾರ್ಟಿ(Drinks) ಮಾಡುತ್ತಿದ್ದರು. ಈ ಮಧ್ಯೆ ಟಿಂಕು ಮತ್ತು ಪಂಡಿತ್​ ನಡುವೆ ಜಗಳ ಉಂಟಾಗಿದೆ. ಮಾತುಕತೆ ವಿಪರೀತಗೊಂಡಿದ್ದು ದೀಪಕ್ ಪಂಡಿತ್​, ಕೈಯ್ಯಲ್ಲಿದ್ದ ಗಾಜಿನ ಬಾಟಲಿ(Glass) ಮೂಲಕ ಟಿಂಕುವಿನ ಕುತ್ತಿಗೆ ಕುಯ್ದುಹಾಕಿದ್ದಾನೆ. ಬಳಿಕ ಪಂಡಿತ್​ ಸ್ಥಳದಿಂದ ಪರಾರಿಯಾಗಿದ್ದಾನೆ. ಟಿಂಕುವಿನ ಕುತ್ತಿಗೆಯಿಂದ ರಕ್ತ ಹರಿಯಲು ಪ್ರಾರಂಭವಾಗಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯ ಮಧ್ಯೆ ಕೊನೆಯುಸಿರುಬಿಟ್ಟಿದ್ದಾನೆ.

ಅವರ ಸ್ನೇಹಿತರೊಬ್ಬರು 1 ಗಂಟೆಯ ಸರಿಸುಮಾರಿಗೆ ಕರೆ ಮಾಡಿ ಟಿಂಕು ಟೆರೆಸ್​ನಿಂದ ಬಿದ್ದು ಅಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಷಯ ತಿಳಿಸಿದರು. ಆದರೆ ಆಸ್ಪತ್ರೆಯಲ್ಲಿಯೇ ಗೊತ್ತಾದದ್ದು ದೀಪಕ್​ ಪಂಡಿತ್​ ನನ್ನ ಸಹೋದರನ ಗಂಟಲು ಕತ್ತರಿಸಿದ್ದಾನೆ ಎಂದು ಮೃತ ದುರ್ದೈವಿ ಟಿಂಕುವಿನ ಹಿರಿಯ ಸಹೋದರ ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್​ 304 ಅಡಿಯಲ್ಲಿ ಪಂಡಿತ್​ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ದಾವಣಗೆರೆ: ಒಂಟಿ ವೃದ್ಧೆ ಕೊಲೆ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ಡಾಗ್ ತುಂಗಾ; ಶ್ವಾನದ ಯಶೋಗಾಥೆ ಇಲ್ಲಿದೆ

Murder News: ನಿನ್ನಿಂದ ಮಗು ಹುಟ್ಟಿಸಲು ಸಾಧ್ಯವಿಲ್ಲ ಎಂದ ವೈದ್ಯೆಯ ಬರ್ಬರ ಹತ್ಯೆ!; ಭಾವನಿಂದಲೇ ಕೊಲೆಯಾದ ಮಾಜಿ MLA ಸೊಸೆ

Follow Us
TV9 Web
TV9 Web

TV9 Kannada

Read More
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ