ಕ್ವಾಟ್ಲೆ ತಾಳಲಾರದೆ ಗುರುವನ್ನೇ ಮುಗಿಸಿದ ಶಿಷ್ಯರು!

ಕ್ವಾಟ್ಲೆ ತಾಳಲಾರದೆ ಗುರುವನ್ನೇ ಮುಗಿಸಿದ ಶಿಷ್ಯರು!

ಹಾಸನ: ಆತ ರೌಡಿಶೀಟರ್. ಇತ್ತೀಚೆಗೆ ಜೈಲಿಗೆ ಹೋಗಿ ರಿಲೀಸ್ ಕೂಡ ಆಗಿದ್ದ. ಇದೇ ಖುಷಿಯಲ್ಲಿ ತನ್ನ ಶಿಷ್ಯರಿಗೆ ಎಣ್ಣೆ ಪಾರ್ಟಿ ಆಯೋಜನೆ ಮಾಡಿದ್ದ. ಆದ್ರೆ, ಅಲ್ಲಿ ರೌಡಿಯೇ ಖತಂ ಆಗಿಬಿಡ್ತಾನೆ. ಈ ಕೇಸ್​ನ ಹಿಂದೆ ಬಿದ್ದ ಖಾಕಿ ಪಾಪಿಗಳ ಜಾಲ ಭೇದಿಸಿದೆ.

ವಿಶಾಲವಾದ ಜಾಗ. ಸುತ್ತಲು ರೈತರ ಬೆಳೆ. ನಡುವಲ್ಲಿ ಒಂದು ಮರ. ಆವತ್ತು ಇದೇ ಜಾಗದಲ್ಲಿ ನೆತ್ತರು ಹರಿದಿತ್ತು. ರೌಡಿಶೀಟರ್​ನ ಚಾಪ್ಟರ್ ಕ್ಲೋಸ್ ಆಗಿತ್ತು. ಸ್ಪಾಟ್​ಗೆ ಬಂದ ಖಾಕಿಗೆ ಹೆಜ್ಜೆ ಹಜ್ಜೆಗೂ ಸುಳಿವು ಸಿಕ್ಕಿತ್ತು. ಅದ್ರಲ್ಲು ಮುಖ್ಯವಾದದ್ದು ಕೆಲವು ಎಣ್ಣೆ ಬಾಟಲ್ಸ್, ಇನ್ನೊಂದು ಆಟೋ.

ಗುರುವಿನ ಕಥೆ ಮುಗಿಸಲು ಕಾಯುತ್ತಿದ್ರು ಶಿಷ್ಯರು!
ಅದು ಕಳೆದ ಡಿಸೆಂಬರ್ 27, ಹಾಸನ ತಾಲೂಕಿನ ಶಾಂತಿಗ್ರಾಮ. ಊರ ಹೊರಗಿನ ಹೊಲ. ಇಲ್ಲಿಗೆ ವಲ್ಲಭಾಯ್ ರಸ್ತೆಯ ನಿವಾಸಿ ರೌಡಿಶೀಟರ್ ಲೋಕೇಶ್ ಆಗಮಿಸಿದ್ದ. ತನ್ನ ಜೊತೆಗೆ ಶಿಷ್ಯರಾದ ಭರತ್, ಆಟೋ ಚಾಲಕ ಲೋಕೇಶ್, ಸುದೀಪ್, ಅರ್ಜುನ್, ಜಯಂತ್​ನನ್ನ ಕರೆದುಕೊಂಡು ಬಂದಿದ್ದ. ಎಲ್ರು ಸೇರಿ ಫುಲ್ ಪಾರ್ಟಿ ಮಾಡಿದ್ರು. ತಮಗೆ ಎಷ್ಟು ಬೇಕೋ ಅಷ್ಟು ಕುಡಿದಿದ್ರು. ಆದ್ರೆ, ಇನ್ನೇನು ಮನೆಗೆ ಹೋಗ್ಬೇಕು ಎನ್ನುವಷ್ಟರಲ್ಲಿ ಎಲ್ರು ಸೇರ್ಕೊಂಡು ಲೋಕೇಶ್​ನ ಮೇಲೆ ಮುಗಿಬಿದ್ದಿದ್ರು. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಪರಾರಿ ಆಗಿದ್ರು.

ಗುರುವಿನ ಕ್ವಾಟ್ಲೆ ತಾಳಲಾರದೆ ತಿರುಗಿಬಿದ್ದಿದ್ರು ಶಿಷ್ಯರು!
ಆಟೋ ಡ್ರೈವರ್ ಆಗಿದ್ದ ಲೋಕೇಶ್ ಪುಡಿ ರೌಡಿಯಂತೆ ಎಗರಾಡ್ತಿದ್ದ. ಆಟೋ ಸ್ಟ್ಯಾಂಡ್​ನಲ್ಲಿ ನಾನ್ ಹೇಳಿದ ಹಾಗೆ ನಡೀಬೇಕು ಅಂತಾ ಕ್ವಾಟ್ಲೆ ಕೊಡ್ತಿದ್ದ. ಅಷ್ಟೇ ಅಲ್ಲ. ಇವನ ಮೇಲೆ 13ಕೇಸ್​ಗಳಿತ್ತು. ಇತ್ತೀಚೆಗೆ ದರೋಡೆ ಪ್ರಕರಣದಲ್ಲಿ ಜೈಲು ಸೇರಿ, 15ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿದ್ದ. ಈ ವೇಳೆ ಸುಮ್ಮನೆ ಇರೋದು ಬಿಟ್ಟು ಮತ್ತೆ ಕಿರಿಕ್ ಪಾರ್ಟಿಯಂತೆ ಆಡ್ತಿದ್ದ. ಇದ್ರಿಂದ ಶಿಷ್ಯರೇ ಲೋಕೇಶ್​​ನ ಕಥೆ ಮುಗಿಸಲು ಸಿದ್ಧರಾಗಿದ್ರು. ಒಳ್ಳೆ ಸಮಯಕ್ಕಾಗಿ ಕಾದುಕುಳಿತಿದ್ರು. ಈ ನಡುವೆಯೇ ಲೋಕೇಶ್ ಶಿಷ್ಯರಿಗೆ ಪಾರ್ಟಿ ಕೊಡಿಸಲು ಕರೆದಿದ್ದ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಶಿಷ್ಯರು ಲೋಕೇಶ್​ನ ಜೊತೆ ಎಣ್ಣೆ ಕುಡಿದು, ಕೊನೆಗೆ ಅವನ ಕಥೆಯನ್ನೇ ಮುಗಿಸಿದ್ರು.

Click on your DTH Provider to Add TV9 Kannada