ರಷ್ಯಾ: ಕೇವಲ 6-ವರ್ಷ-ವಯಸ್ಸಿನ ಮಗಳ ಮೇಲೆ ಲೈಂಗಿಕ ಅತ್ಯಾಚಾರ ನಡೆಸುತ್ತಿದ್ದ ತನ್ನ ಗೆಳೆಯನ ಮೇಲೆ ಅವನು ವಿಭಿನ್ನವಾಗಿ ಸೇಡು ತೀರಿಸಿಕೊಂಡ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 01, 2022 | 7:43 AM

ಒಲೆಗ್ ಗುಂಡಿ ತೋಡಿದ ಬಳಿಕ ಅವನೊಂದಿಗೆ ಜಗಳ ತೆಗೆದ ಮಾಟ್ರೊಸೋವ್ ಶಿಶುಕಾಮಿಯನ್ನು ಕೊಂದು ಸುಲಭಕ್ಕೆ ಗುರುತು ಸಿಗದಂತಿದ್ದ ಗೋರಿಯಲ್ಲಿ ಹೂತುಬಿಟ್ಟಿದ್ದ.

ರಷ್ಯಾ: ಕೇವಲ 6-ವರ್ಷ-ವಯಸ್ಸಿನ ಮಗಳ ಮೇಲೆ ಲೈಂಗಿಕ ಅತ್ಯಾಚಾರ ನಡೆಸುತ್ತಿದ್ದ ತನ್ನ ಗೆಳೆಯನ ಮೇಲೆ ಅವನು ವಿಭಿನ್ನವಾಗಿ ಸೇಡು ತೀರಿಸಿಕೊಂಡ!
ವೆಚಾಸ್ಲಾವ್ ಮಾಟ್ರೊಸೋವ್ (ನಡುವೆ) ಅವನ ಬಲಭಾಗಕ್ಕಿರುವವನೇ ಒಲೆಗ್ ಸ್ವರಿಡೋವ್
Follow us on

ಇದು ರಷ್ಯಾದಲ್ಲಿ ನಡೆದ ಒಂದು ವಿಲಕ್ಷಣ ಕ್ರೈಮ್ ಕತೆ. ಒಬ್ಬ ತಂದೆಯು ಕೇವಲ 6 ವರ್ಷದವಳಾಗಿದ್ದ ತನ್ನ ಮಗಳನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ತನ್ನ ಗೆಳೆಯನನ್ನು ಕಾಡೊಂದರಲ್ಲಿ ಅವನ ಗೋರಿ ಖುದ್ದು ಅವನೇ ತೋಡಿಕೊಳ್ಳುವಂತೆ ಮಾಡಿ, ಕೊಲೆ ನಡೆಸಿದ ಅಪರಾಧದಲ್ಲಿ ಜೈಲಿಗೂ ಹೋಗಿ ಕೇವಲ 6 ತಿಂಗಳಲ್ಲಿ ಹೊರಬಂದ ಕತೆಯಿದು. ದುಷ್ಟ ಮತ್ತು ಪಾಪಿ ಸ್ನೇಹಿತನನ್ನು ಕೊಂದ ವೆಚಾಸ್ಲಾವ್ ಮಾಟ್ರೊಸೋವ್ ಗೆ 18 ತಿಂಗಳು ಜೈಲುವಾಸದ ಶಿಕ್ಷೆಯಾಗಿದ್ದರೂ ಒಂದು ವರ್ಷ ಮೊದಲೇ ಅವನನ್ನು ಬಿಡುಗಡೆ ಮಾಡಲಾಗಿದೆ. ಶಿಶುಕಾಮಿ 32-ವರ್ಷ-ವಯಸ್ಸಿನ ಒಲೆಗ್ ಸ್ವರಿಡೋವ್ ನನ್ನು ತನ್ನ ಸಮಾಧಿ ತಾನೇ ತೋಡಿಕೊಳ್ಳುವಂತೆ ಮಾಡಿ ಅವನನ್ನು ಕೊಂದು ಹೂಳಿಟ್ಟ ಮಾಟ್ರೊಸೋವ್ ಪರ ಪೂರ್ತಿ ರಷ್ಯಾದಲ್ಲಿ ಅನುಕಂಪದ ಅಲೆ ಎದ್ದಿತ್ತು.

ಒಲೆಗ್ ಗುಂಡಿ ತೋಡಿದ ಬಳಿಕ ಅವನೊಂದಿಗೆ ಜಗಳ ತೆಗೆದ ಮಾಟ್ರೊಸೋವ್ ಶಿಶುಕಾಮಿಯನ್ನು ಕೊಂದು ಸುಲಭಕ್ಕೆ ಗುರುತು ಸಿಗದಂತಿದ್ದ ಗೋರಿಯಲ್ಲಿ ಹೂತುಬಿಟ್ಟಿದ್ದ.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಒಲೆಗ್ ಕಾಡಿನಲ್ಲಿ ಮಾಟ್ರೊಸೋವ್ ಜೊತೆ ಜಗಳ ಮಾಡಿದ ನಂತರ ತಾನು ತೋಡಿದ ಗುಂಡಿಯಲ್ಲಿ ತಾನೇಬಿದ್ದು ಪ್ರಾಣ ಕಳೆದುಕೊಂಡ ಎಂದು ವರದಿ ನೀಡಿದ್ದರು.

ವರದಿಗಳ ಪ್ರಕಾರ ಒಲೆಗ್ ಆಗ ಕೇವಲ 6 ವರ್ಷದವಳಾಗಿದ್ದ ಮಾಟ್ರೊಸೋವ್ ಮಗಳ ಮೇಲೆ ಪದೇಪದೆ ಲೈಂಗಿಕ ಅತ್ಯಾಚಾರ ನಡೆಸಿದ್ದ.

ಮಾಟ್ರೊಸೋವ್ ನನ್ನು ಆರಂಭದಲ್ಲಿ ಕೊಲೆ ಆರೋಪದಲ್ಲಿ ಬಂಧಿಸಲಾಯಿತಾದರೂ ಅವನ ಬಂಧನದ ವಿರುದ್ಧ ರಷ್ಯಾದಲ್ಲಿ ಜನ ರೊಚ್ಚಿಗೆದ್ದ್ದಿದ್ದರು.

ಸಮಾರಾದಲ್ಲಿರುವ ಕ್ರಾಸ್ನೋಗ್ಲಿಂಕ್ಸಿ ನ್ಯಾಯಾಲಯವು ಮಾಟ್ರೊಸೋವ್ ನನ್ನು ತನ್ನ ಗೆಳೆಯನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಕುಮ್ಮಕ್ಕು ನೀಡಿದ ಅಪರಾಧಕ್ಕಾಗಿ ರಷ್ಯನ್ ಪೀನಲ್ ಕಾಲೊನಿ ಅನ್ವಯ 18-ತಿಂಗಳು ಕಠಿಣ ಸೆರೆವಾಸದ ಶಿಕ್ಷೆಯನ್ನು ವಿಧಿಸಿತ್ತು.

ಆತ್ಮೀಯ ಸ್ನೇಹಿತರಾಗಿದ್ದ ಮಾಟ್ರೊಸೋವ್ ಮತ್ತು ಒಲೆಗ್ ನಡುವೆ ವೈಷಮ್ಯ ಏರ್ಪಟ್ಟಿದ್ದು ಮಾಟ್ರೊಸೋವ್ ತನ್ನ ಸ್ನೇಹಿತನ ಮೊಬೈಲ್ ಫೋನಲ್ಲಿ ಅವನು ತನ್ನ ಮಗಳಿಗೆ ತನ್ನ ಮೇಲೆ ಓರಲ್ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡುತ್ತಿದ್ದ ವಿಡಿಯೋ ನೋಡಿದಾಗ.

ಈಗ 9-ವರ್ಷದಳಾಗಿರುವ ಆ ಹೆಣ್ಣುಮಗು, ‘ಒಲೆಗ್ ನನ್ನನ್ನು ಬಿಟ್ಟುಬಿಡು, ನನ್ನಿಂದ ಸಹಿಸಿಕೊಳ್ಳಲಾಗುತ್ತಿಲ್ಲ. ನಾನು ಮನೆಗೆ ಹೋಗಬೇಕು,’ ಅಂತ ಹೇಳುತ್ತಿರುವ ಅವಳ ಧ್ವನಿ ವಿಡಿಯೋ ರೆಕಾರ್ಡ್ ಆಗಿದೆ.

ರಾಕೆಟ್ ಎಂಜಿನ್ ಕಾರ್ಖಾನೆಯ ಮಾಜಿ ಉದ್ಯೋಗಿಯಾಗಿರುವ ಮಾಟ್ರೊಸೋವ್ ವಿರುದ್ಧ ಹತ್ಯೆಯ ಪ್ರಕರಣ ದಾಖಲಾಗಿದ್ದರೆ, ಅವನಿಗೆ 15-ವರ್ಷಗಳ ಶಿಕ್ಷೆಯಾಗುತ್ತಿತ್ತು.
ಅದರೆ, ಶಿಶುಕಾಮಿ ಒಲೆಗ್ ಕೊಲೆ ಆರೋಪದಲ್ಲಿ ಅವನನ್ನು ಬಂಧಿಸಲಾಗಿದೆ ಎಂದು ಗೊತ್ತಾದ ಕೂಡಲೇ ಸಮಾರಾ ಪ್ರದೇಶದಲ್ಲಿ ಅವನ ಪರ ಸಹಾನುಭೂತಿ ವ್ಯಕ್ತವಾಯಿತು ಮತ್ತು ವಿಶ್ವದೆಲ್ಲೆಡೆ ವಿಷಯ ಕಾಳ್ಗಿಚ್ಚಿನಂತೆ ಹರಡಿತು.

ಅವನ ಸ್ವಗ್ರಾಮ ಪ್ರಬ್ರೆಜೆನೋಯಲ್ಲಿ ಅವನ ಕಾನೂನು ಹೋರಾಟಕ್ಕೆ ಜನ ಹಣ ಸಂಗ್ರಹ ಮಾಡಿದರು. ಅವನನ್ನು ಬಿಡುಗಡೆ ಮಾಡಬೇಕೆಂದು ಸುಮಾರು 2,500 ಜನರ ಸಹಿಗಳಿದ್ದ ಮನವಿಯನ್ನು ಸಲ್ಲಿಸಲಾಗಿತ್ತು.

ಒಬ್ಬ ಶಿಶುಕಾಮಿಯಿಂದ ಅವನು ನಮ್ಮ ಮಕ್ಕಳನ್ನು ರಕ್ಷಿಸಿದ್ದಾನೆ, ಎಂದು ಜನ ಅವನ ಪರ ಮಾತಾಡಿದರು. ಪ್ರಕರಣದ ಬಗ್ಗೆ ಎಲ್ಲವನ್ನೂ ತಿಳಿದಿರುನ ಜನರ ಮೂಲಕ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮಾಟ್ರೊಸೋವ್, ಒಲೆಗ್ ನನ್ನು ಇರಿದು ಕೊಂದ ಬಳಿಕ ಅವನ ದೇಹವನ್ನು ಕುಣಿಯಲ್ಲಿ ನೂಕಿ ಮಣ್ಣು ಮುಚ್ಚಿದ್ದ.

ಪೊಲೀಸ್ ಸ್ಟೇಶನ್ ಗೆ ಹೋಗಿ ಬಾಲಕಿಯನ್ನು ಲೈಂಗಿಕವಾಗಿ ಶೋಷಿಸಿದ ಅಪರಾಧವನ್ನು ಒಪ್ಪಿಕೋ ಇಲ್ಲವೇ ಮಾಟ್ರೊಸೋವ್ ರೋಷ ಮತ್ತು ಪ್ರತೀಕಾರ ಎದುರಿಸಲು ಸಿದ್ಧನಾಗು ಅಂತ ಪೊಲೀಸರು ಒಲೆಗ್ ಗೆ ಎಚ್ಚರಿಕೆ ನೀಡಿದ್ದರಂತೆ.
ಸೆಪ್ಟೆಂಬರ್ 2021 ರಲ್ಲಿ ಒಲೆಗ್ ಕಣ್ಮರೆಯಾದ ದಿನ ಅವನ ಸಂಬಂಧಿಕನೊಬ್ಬನನ್ನು ಮನಬಂದಂತೆ ಥಳಿಸಲಾಗಿತ್ತು. ಒಂದು ವಾರದ ನಂತರ ಒಲೆಗ್ ಶವ ವಿಂಟೈ ಹೆಸರಿನ ಹಳ್ಳಿಯಲ್ಲಿನ ಸಮಾಧಿಯಾಲ್ಲಿ ಪತ್ತೆಯಾಗಿತ್ತು.

ಮಾಟ್ರೊಸೋವ್ ನ ಮಗಳಲ್ಲದೆ ಇನ್ನೂ ಇಬ್ಬರು ಬಾಲಕಿಯರ ಮೇಲೆ ಅವನು ಅತ್ಯಾಚಾರವೆಸಗಿದ್ದನೆನ್ನಲಾಗಿದೆ.