AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಡನ್ ಕ್ಯಾಮೆರಾ, 58 ಮಹಿಳೆಯರ ಅಶ್ಲೀಲ ವಿಡಿಯೋ; ಬಯಲಾಗುತ್ತಲೇ ಇದೆ ಸಂಖ್ಯಾಶಾಸ್ತ್ರಜ್ಞ ಅಶೋಕ್ ಖರತ್ ಕರ್ಮಕಾಂಡ

ನಾಸಿಕ್‌ನಲ್ಲಿ ಜ್ಯೋತಿಷಿಯಾಗಿ ಕೆಲಸ ಮಾಡುತ್ತಿದ್ದ ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯೊಬ್ಬರು ಮೂರು ವರ್ಷಗಳಿಗೂ ಹೆಚ್ಚು ಕಾಲ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಮಾಡುತ್ತಿದ್ದರು. ಸ್ವಯಂ ಘೋಷಿತ ಸಂಖ್ಯಾಶಾಸ್ತ್ರಜ್ಞರಾಗಿದ್ದ ಅಶೋಕ್ ಖರತ್ ಅವರನ್ನು ಲೈಂಗಿಕ ಕಿರುಕುಳ, ಕೋಟ್ಯಂತರ ರೂಪಾಯಿ ಸುಲಿಗೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಬಂಧಿಸಲಾಗಿದೆ. ಅನೇಕ ದೊಡ್ಡ ಹೆಸರುಗಳ ಮೇಲೆ ಪ್ರಭಾವ ಬೀರಿದ ಖರತ್ ಈಗ ಪೊಲೀಸರ ವಶದಲ್ಲಿದ್ದಾರೆ. ಅವರ ಬಳಿ ಪತ್ತೆಯಾದ ಪೆನ್ ಡ್ರೈವ್, ಪಿಸ್ತೂಲ್ ಮತ್ತು 200 ಕೋಟಿ ರೂ. ಮೌಲ್ಯದ ಆಸ್ತಿ ತನಿಖಾ ಸಂಸ್ಥೆಗಳ ಕಣ್ಣಿಗೆ ಬಿದ್ದಿದೆ. ಈ ಪ್ರಕರಣದ ಬಗ್ಗೆ ಎಸ್‌ಐಟಿ ಸಮಗ್ರ ತನಿಖೆ ನಡೆಸುತ್ತಿದೆ.

ಹಿಡನ್ ಕ್ಯಾಮೆರಾ, 58 ಮಹಿಳೆಯರ ಅಶ್ಲೀಲ ವಿಡಿಯೋ; ಬಯಲಾಗುತ್ತಲೇ ಇದೆ ಸಂಖ್ಯಾಶಾಸ್ತ್ರಜ್ಞ ಅಶೋಕ್ ಖರತ್ ಕರ್ಮಕಾಂಡ
Ashok Kharat
ಸುಷ್ಮಾ ಚಕ್ರೆ
|

Updated on:Mar 20, 2026 | 3:47 PM

Share

ಮುಂಬೈ, ಮಾರ್ಚ್ 20: ಮಹಾರಾಷ್ಟ್ರದ ನಾಸಿಕ್‌ನಲ್ಲಿ (Nasik) ಆಧ್ಯಾತ್ಮಿಕತೆಯ ಸೋಗಿನಲ್ಲಿ 35 ವರ್ಷದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪ್ರಭಾವಿ ಸಂಖ್ಯಾಶಾಸ್ತ್ರಜ್ಞ ಅಶೋಕ್ ಖರತ್ ಅವರನ್ನು ಬಂಧಿಸಲಾಗಿದೆ. ನಿವೃತ್ತ ನೌಕಾ ಅಧಿಕಾರಿಯಾಗಿರುವ 67 ವರ್ಷದ ಅಶೋಕ್ ಖರತ್ ತನಗೆ ಮಾದಕ ದ್ರವ್ಯ ನೀಡಿ, ವಶಪಡಿಸಿಕೊಂಡು, ತನ್ನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಅವರ ಫಾರ್ಮ್​ಹೌಸ್​ ಮೇಲೆ ದಾಳಿ ನಡೆಸಿದಾಗ ಶಾಕಿಂಗ್ ಸತ್ಯಗಳು ಬೆಳಕಿಗೆ ಬಂದಿವೆ.

ಲೈಂಗಿಕ ಶೋಷಣೆ ಕೇವಲ ಒಬ್ಬ ಮಹಿಳೆಗೆ ಸೀಮಿತವಾಗಿಲ್ಲ ಎಂಬ ಸಂಗತಿ ಪೊಲೀಸ್ ತನಿಖೆ ಬಹಿರಂಗಪಡಿಸಿದೆ. ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯಾಗಿರುವುದರಿಂದ ತನ್ನನ್ನು ‘ಕ್ಯಾಪ್ಟನ್’ ಎಂದು ಕರೆದುಕೊಳ್ಳುವ ಅಶೋಕ್ ಖರತ್, ಮಹಿಳೆಯರಿಗೆ ಅವರ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿ ತನ್ನ ಕಚೇರಿಗೆ ಕರೆಸುತ್ತಿದ್ದರು. ಅಲ್ಲಿಗೆ ಬಂದ ನಂತರ ಮಾದಕ ದ್ರವ್ಯವನ್ನು ನೀಡುವ ಮೂಲಕ ಅವರನ್ನು ಸಮ್ಮೋಹನಗೊಳಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ಅಜ್ಜ

ಇದಾದ ನಂತರ ಆ ಮಹಿಳೆಯರಲ್ಲಿ ಭಯವನ್ನು ಹುಟ್ಟುಹಾಕುವ ಮೂಲಕ, ಅವರ ಗಂಡಂದಿರ ಸಾವಿನ ಬಗ್ಗೆ ಬೆದರಿಕೆ ಹಾಕುವ ಮೂಲಕ ಅವರ ಮೇಲೆ ಅತ್ಯಾಚಾರ ಮಾಡುತ್ತಿದ್ದರು. ಇದಿಷ್ಟೇ ಅಲ್ಲ, ಅಶೋಕ್ ಖರತ್ ತನ್ನ ಕಚೇರಿಯೊಳಗೆ ಗುಪ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಅವರ ಮೇಲೆ ದಾಳಿ ನಡೆದ ವೇಳೆ ಆತ ಚಿತ್ರೀಕರಿಸಿದ 58 ಮಹಿಳೆಯರನ್ನು ಒಳಗೊಂಡ ಅಶ್ಲೀಲ ವಿಡಿಯೋಗಳನ್ನು ಒಳಗೊಂಡಿರುವ ಪೆನ್ ಡ್ರೈವ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಫೇಸ್​​ಬುಕ್​ನಲ್ಲಿ ‘ನೀಲಿ ಡ್ರಮ್’ ಪೋಸ್ಟ್ ನೋಡಿ ಹೆಂಡತಿಯನ್ನು ಪ್ರೇಮಿ ಜೊತೆ ಹೋಗಲು ಬಿಟ್ಟ ಗಂಡ!

ಈ ವಿಷಯದ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರವು ಐಪಿಎಸ್ ಅಧಿಕಾರಿ ತೇಜಸ್ವಿನಿ ಸತ್ಪುಟೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಿದೆ. ಈ ಆಶೋಕ್ ಖರತ್ ದೆಹಲಿಯಿಂದ ಮಹಾರಾಷ್ಟ್ರದ ಸರ್ಕಾರದವರೆಗೆ ಅನೇಕ ರಾಜಕೀಯ ಸಂಪರ್ಕಗಳನ್ನು ಹೊಂದಿದ್ದಾರೆಂದು ವದಂತಿಗಳಿವೆ. ಉದ್ಯಮಿಗಳು, ರಾಜಕಾರಣಿಗಳು, ಸೆಲಬ್ರಿಟಿಗಳಿಗೆ ಸಂಖ್ಯಾಶಾಸ್ತ್ರ ಹೇಳುವ ಜ್ಯೋತಿಷಿಯೆಂದು ಪರಿಚಿತರಾಗಿದ್ದ ಅಶೋಕ್ ಖರತ್ ದೊಡ್ಡ ಜಾಲವನ್ನೇ ಹೊಂದಿದ್ದರು. ನಾಸಿಕ್‌ನ ಸಿನ್ನಾರ್‌ನಲ್ಲಿರುವ ಶ್ರೀ ಈಶಾನ್ಯೇಶ್ವರ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷರಾಗಿ, ಖರತ್ ಪ್ರಮುಖ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ವ್ಯಾಪಾರ ಉದ್ಯಮಿಗಳಿಗೆ ಆಧ್ಯಾತ್ಮಿಕ ಮಾರ್ಗದರ್ಶಕರಾಗಿ ಗುರುತಿಸಲ್ಪಟ್ಟಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:34 pm, Fri, 20 March 26

Follow Us
ಪ್ರಜ್ವಲ್ ವಿಡಿಯೋ ಕೇಸ್​​: ಚಾರ್ಜ್​​ಶೀಟ್​​ ವಿರುದ್ಧ ಜೆಡಿಎಸ್ ​​ಆಕ್ರೋಶ
ಪ್ರಜ್ವಲ್ ವಿಡಿಯೋ ಕೇಸ್​​: ಚಾರ್ಜ್​​ಶೀಟ್​​ ವಿರುದ್ಧ ಜೆಡಿಎಸ್ ​​ಆಕ್ರೋಶ
ಶಿವಮೊಗ್ಗದಲ್ಲಿ ಮೈನವಿರೇಳಿಸುವ ಅಪಘಾತ!
ಶಿವಮೊಗ್ಗದಲ್ಲಿ ಮೈನವಿರೇಳಿಸುವ ಅಪಘಾತ!
ರೂಪಾಯಿಗೆ ಬಿಗ್ ಶಾಕ್, ಮೊದಲ ಬಾರಿಗೆ 93ರ ಗಡಿ ದಾಟಿದ ಭಾರತೀಯ ಕರೆನ್ಸಿ
ರೂಪಾಯಿಗೆ ಬಿಗ್ ಶಾಕ್, ಮೊದಲ ಬಾರಿಗೆ 93ರ ಗಡಿ ದಾಟಿದ ಭಾರತೀಯ ಕರೆನ್ಸಿ
‘ಡಿಕೆಡಿ 5’ ಕ್ವಾಟರ್​ ಫಿನಾಲೆ; ಫಿನಾಲೆ ಟಿಕೆಟ್​ ಸಿಗೋದು ಯಾರಿಗೆ?
‘ಡಿಕೆಡಿ 5’ ಕ್ವಾಟರ್​ ಫಿನಾಲೆ; ಫಿನಾಲೆ ಟಿಕೆಟ್​ ಸಿಗೋದು ಯಾರಿಗೆ?
ಕೈಲಾದೇವಿ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ವಾಹನ ಅಪಘಾತ
ಕೈಲಾದೇವಿ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ವಾಹನ ಅಪಘಾತ
ಮಂಡ್ಯ: ಬೋನಿಗೆ ಬಿದ್ದ ಚಿರತೆ ನೋಡಲು ಮುಗಿಬಿದ್ದ ಜನ
ಮಂಡ್ಯ: ಬೋನಿಗೆ ಬಿದ್ದ ಚಿರತೆ ನೋಡಲು ಮುಗಿಬಿದ್ದ ಜನ
ಕಾಲಿಗೆ ಬೀಳ್ತೀವಿ, ಸಾರಾಯಿ ಬಂದ್ ಮಾಡಿಸಿ: ಶಾಸಕರ ಮುಂದೆ ಮಹಿಳೆಯರು ಕಣ್ಣೀರು
ಕಾಲಿಗೆ ಬೀಳ್ತೀವಿ, ಸಾರಾಯಿ ಬಂದ್ ಮಾಡಿಸಿ: ಶಾಸಕರ ಮುಂದೆ ಮಹಿಳೆಯರು ಕಣ್ಣೀರು
ಇಸ್ರೇಲ್​​ನ ಹೈಫಾ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಕ್ಷಿಪಣಿ ದಾಳಿ
ಇಸ್ರೇಲ್​​ನ ಹೈಫಾ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಕ್ಷಿಪಣಿ ದಾಳಿ
ಟಿಕೆಟ್​​ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆಗೆ ಮುಂದಾದ ಸಚಿವರ ಪುತ್ರ!
ಟಿಕೆಟ್​​ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆಗೆ ಮುಂದಾದ ಸಚಿವರ ಪುತ್ರ!
‘ಧುರಂಧರ್ 2’ ನೋಡಲು ದುಬೈನಿಂದ ಭಾರತಕ್ಕೆ ಬಂದ ಖ್ಯಾತ ಇನ್​​ಫ್ಲುಯೆನ್ಸರ್
‘ಧುರಂಧರ್ 2’ ನೋಡಲು ದುಬೈನಿಂದ ಭಾರತಕ್ಕೆ ಬಂದ ಖ್ಯಾತ ಇನ್​​ಫ್ಲುಯೆನ್ಸರ್