Santro Ravi Arrested: ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಕೊನೆಗೂ ಬಂಧನ, ಗುಜರಾತ್​ನಲ್ಲಿ ಪೊಲೀಸ್ ಬಲೆಗೆ

ಸ್ಯಾಂಟ್ರೋ ರವಿ ಬಂಧನ: ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ದೂರದ ಗುಜರಾತ್​ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.

Santro Ravi Arrested: ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಕೊನೆಗೂ ಬಂಧನ, ಗುಜರಾತ್​ನಲ್ಲಿ ಪೊಲೀಸ್ ಬಲೆಗೆ
ಸ್ಯಾಂಟ್ರೋ ರವಿ
Follow us
TV9 Web
| Updated By: Digi Tech Desk

Updated on:Jan 13, 2023 | 5:57 PM

ಕೆಲ ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ(Santro Ravi) ಕೊನೆಗೂ ಪೊಲೀಸ್​ ಬಲೆಗೆ ಬಿದ್ದಿದ್ದಾನೆ. ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ದೂರದ ಗುಜರಾತ್​ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಟಿವಿ9ಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ: ಸ್ಯಾಂಟ್ರೋ ರವಿ ಲೀಲೆಗಳು ಬಗೆದಷ್ಟು ಬೆಚ್ಚಿ ಬೀಳಿಸುವ ಕಥೆ: ಸ್ಯಾಂಟ್ರೋ ‘ಸರ್ವೀಸ್​’ ಜಾಲದಲ್ಲಿ ನಟಿ, ಮಾಡೆಲ್​ಗಳು..!

ಸ್ಯಾಂಟ್ರೋ ರವಿ ಸೆರೆಗೆ ನಾಲ್ವರು SPಗಳ ವಿಶೇಷ ತಂಡ ರಾಮನಗರ, ಮಂಡ್ಯ, ಮೈಸೂರು, ಕೇರಳದಲ್ಲಿ ಕಾರ್ಯಚರಣೆ ಮಾಡಿತ್ತು. ಅಂತಿಮವಾಗಿ ಗುಜರಾತ್‌ನಲ್ಲಿ ಇರುವುದು ಸಿಕ್ಕ ಸುಳಿವಿನ ಮೇರೆಗೆ ರಾಜ್ಯ ಪೊಲೀಸರ ವಿಶೇಷ ತಂಡ ಕಾರ್ಯಚರಣೆ ನಡೆಸಿ ಅಡಗಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಪೊಲೀಸ್ ಇಲಾಖೆಯಿಂದ ತಿಳಿದುಬಂದ ಮಾಹಿತಿ ಪ್ರಕಾರ, ಗುಜರಾತ್‌ನಿಂದ ಸ್ಯಾಂಟ್ರೋ ರವಿಯನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸ್ಯಾಂಟ್ರೋ ರವಿ (Santro Ravi) ಮಾಂಸದಂಧೆಯ ಕಿಂಗ್ ಪಿನ್. ದಶಕಗಳ ಕಾಲ ವೇಶ್ಯಾವಾಟಿಕೆ ನಡೆಸುತ್ತಿದ್ದವನು ಇದ್ದಕ್ಕಿದ್ದಂತೆ ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಗೆ (police transfers) ಎಂಟ್ರಿ ಕೊಟ್ಟಿದ್ದ. ಈ ಬಗ್ಗೆ ಆಡಿಯೋ ವೈರಲ್ ಆಗಿದ್ದರು ಸಹಾ ಸಾಕಷ್ಟು ಅನುಮಾನಗಳಿದ್ದವು. ಅಸಲಿಗೆ ಸ್ಯಾಂಟ್ರೋ ರವಿ 25 ರೂಪಾಯಿ 50 ರೂಪಾಯಿ ವರ್ಗಾವಣೆಗಾಗಿ ಪಡೆದ 25 ಲಕ್ಷ ಅಡ್ವಾನ್ಸ್ ಹಾಗೂ 50 ಲಕ್ಷ ನಿಗದಿ ಮಾಡಿದ ಹಣ. ಮಾಂಸದಂಧೆಯ ಕಿಂಗ್ ಪಿನ್ ಕೆಲ ವರ್ಷಗಳ ಹಿಂದೆ ವರ್ಗಾವಣೆಗೆ ಕೈ ಹಾಕಿದ್ದ. ಕೋಟಿ ಕೋಟಿ ಹಣ ಲೂಟಿ‌ ಮಾಡಿದ್ದ. ಈ ಸಂಬಂಧ ಹಲವು ಆಡಿಯೋಗಳು ಲಭ್ಯವಾಗಿದ್ದವು. ಕಂತೆ ಕಂತೆ ನೋಟುಗಳ ಮಧ್ಯೆ, ಚಿನ್ನದ ಬಿಸ್ಕೆಟ್​​ ಗಳು ಇರುವ ಫೋಟೋ. ರಾಜಕಾರಣಿಗಳು, ಪ್ರಭಾವಿಗಳ ಜೊತೆಗಿನ ಫೋಟೋ ವೈರಲ್ ಆಗಿತ್ತು.

Published On - 4:06 pm, Fri, 13 January 23