ಮಂಗಳೂರು, ಜು.21: ರಾಜ್ಯದಲ್ಲಿ ಮಾದಕವಸ್ತು ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಇದೀಗ ಮಂಗಳೂರಿ(Mangalore)ನಲ್ಲಿ ಮಾದಕವಸ್ತು ಮಿಶ್ರಿತ ಚಾಕೊಲೇಟ್(Chocolate) ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಹೈಲ್ಯಾಂಡ್ ಬಳಿಯ ಅಂಗಡಿಯಲ್ಲಿ ಬಾಂಗ್ ಮಿಶ್ರಿ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ನರ್(45), ಹಾಗೂ ಮಂಗಳೂರಿನ ಮನೋಹರ್ ಶೇಟ್(49) ಎಂಬಿಬ್ಬರನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮಂಗಳೂರು ದಕ್ಷಿಣ ಮತ್ತು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
ಇನ್ನು ಆರೋಪಿಯಾದ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ನರ್ ತನ್ನ ಗೂಡಂಗಡಿಯಲ್ಲಿ 5,500 ಮೌಲ್ಯದ “ಮಹಾಶಕ್ತಿ ಮುನಕ್ಕಾ”, “ಬಮ್ ಬಮ್ ಮುನಕ್ಕಾ ವಟಿ” “ಪಾವರ್ ಮುನಕ್ಕಾ ವಟಿ” ಹಾಗೂ “ಆನಂದ ಚೂರ್ಣ ಎಂದು ನಮೂದು ಇರುವ ಚಾಕೊಲೇಟ್ಗಳಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ. ಇತ್ತ ನಗರದ ಕಾರ್ ಸ್ಟ್ರೀಟ್ ಬಳಿ ಉತ್ತರ ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿ, ಬಾಂಗ್ ಮಿಶ್ರಿತ ಚಾಕೋಲೇಟ್ನ್ನು ಮಾರಾಟ ಮಾಡುತ್ತಿದ್ದ ಆರೋಪಿ ಮನೋಹರ್ ಶೇಟ್ ಸಹಿತ, ಮೂರು ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ಇಟ್ಟಿದ್ದ ಸುಮಾರು 48,000 ಮೌಲ್ಯದ ಚಾಕೋಲೇಟ್ನ್ನ ವಶಕ್ಕೆ ಪಡೆದು, ಚಾಕೊಲೇಟ್ಗಳನ್ನು ಲ್ಯಾಬ್ಗೆ ಕಳುಹಿಸಿದ್ದಾರೆ.
ಇದನ್ನೂ ಓದಿ:ತುಮಕೂರು ರಿಂಗ್ ರಸ್ತೆಯಲ್ಲಿ ವೀಲಿಂಗ್ ಪುಂಡರ ಹಾವಳಿ; ವಾಹನ ಸವಾರರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ
ಇನ್ನು ಮಂಗಳೂರಿನ ಕಾರ್ ಸ್ಟ್ರೀಟ್ನಲ್ಲಿರುವ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವರ್ಷಕ್ಕೊಮ್ಮೆ ರಥ ಸಪ್ತಮಿಯ ದಿನ ರಥೋತ್ಸವವಾಗುತ್ತದೆ. ರಥೋತ್ಸವದ ನಂತರದ ದಿನ ಕಲರ್ ಫುಲ್ ಓಕುಳಿ ಆಟದಲ್ಲಿ ಭರ್ಜರಿ ಡ್ಯಾನ್ಸ್ ಕುಣಿತ ಹಾಕುತ್ತಿದ್ದ ಯುವಕ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡ ಇವರು ಅವರಿಗೆ ಬಾಂಗ್ ಮಾರಾಟ ಮಾಡುತ್ತಿದ್ದರು.
ಕೋಲಾರ: ಕಳೆದುಕೊಂಡಿದ್ದ ಮೊಬೈಲ್ ಪೋನ್ಗಳನ್ನು ಸಿ.ಇ.ಐ.ಆರ್. ಪೋರ್ಟಲ್ ಮೂಲಕ ಪತ್ತೆ ಹಚ್ಚಿ, ಪುನಃ ಜನರಿಗೆ ಕೋಲಾರ ಪೊಲೀಸರು ಹಿಂತಿರುಗಿಸಿ ಕೊಟ್ಟಿದ್ದಾರೆ. ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಸುಮಾರು 10 ಕ್ಕೂ ಹೆಚ್ಚು ಪೋನ್ಗಳನ್ನು ಇದೀಗ ಜನರಿಗೆ ಹುಡುಕಿಕೊಟ್ಟಿದ್ದಾರೆ. ಪೋನ್ಗಳನ್ನು ಕಳೆದುಕೊಂಡು, ಇದು ನಮಗೆ ಮತ್ತೆ ಸಿಗುವುದಿಲ್ಲವೆಂದುಕೊಂಡಿದ್ದ ಜನರಿಗೆ ಮೊಬೈಲ್ ರೀಟರ್ನ್ ಸಿಕ್ಕಿರುವುದು ಆಶ್ಚರ್ಯವಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:04 am, Fri, 21 July 23