AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟಿಷ್ ಪ್ರೇಯಸಿಯನ್ನು ಕೊಂದ ಜರ್ಮನ್ ಬೌನ್ಸರ್ ಶಿಕ್ಷೆ ಪ್ರಮಾಣ ತಗ್ಗಿಸಲು ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತಗೊಂಡು ಶಿಕ್ಷಾವಧಿ ಇನ್ನಷ್ಟು ಹೆಚ್ಚಿತು!

ವಿಚಾರಣೆಯ ಸಮಯದಲ್ಲಿ ಮೈ ತುಂಬಾ ಹಚ್ಚೆ ಹಾಕಿಸಿಕೊಂಡಿರುವ ಬಾಡಿಬಿಲ್ಡರ್ ಮಾರ್ಕ್, ತಾನು ಮತ್ತು ಆ್ಯನಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಸತ್ತಳು ಎಂದು ಹೇಳಿದ್ದ. ಆದರೆ ನ್ಯಾಯಾಲಯ ಅವನ ವಾದವನ್ನು ತಿರಸ್ಕರಿಸಿ ಅದೊಂದು ಉದ್ದೇಶಪೂರ್ವಕ ಕೊಲೆ ಎಂದು ಹೇಳಿತು.

ಬ್ರಿಟಿಷ್ ಪ್ರೇಯಸಿಯನ್ನು ಕೊಂದ ಜರ್ಮನ್ ಬೌನ್ಸರ್ ಶಿಕ್ಷೆ ಪ್ರಮಾಣ ತಗ್ಗಿಸಲು ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತಗೊಂಡು ಶಿಕ್ಷಾವಧಿ ಇನ್ನಷ್ಟು ಹೆಚ್ಚಿತು!
ಮಾರ್ಕ್ ಶಟ್ಲೆ ಮತ್ತು ಆ್ಯನಾ ರೀಡ್
TV9 Web
| Edited By: |

Updated on: Dec 04, 2022 | 8:10 AM

Share

ತನ್ನ ಬ್ರಿಟಿಷ್ ಪ್ರೇಯಸಿಯನ್ನು ಉಸಿರುಗಟ್ಟಿಸಿ ಸಾಯಿಸಿದ ಅಪರಾಧದಲ್ಲಿ 18-ವರ್ಷ ಸೆರೆವಾಸದ ಶಿಕ್ಷೆಗೊಳಗಾಗಿದ್ದ ಜರ್ಮನ್ ಮೂಲದ ಬೌನ್ಸರ್ ನ ಶಿಕ್ಷಾವಧಿಯನ್ನು ಸ್ವಿಟ್ಜರ್ ಲ್ಯಾಂಡ್ ನ (Switzerland) ಒಂದು ಕೋರ್ಟ್ ಹೆಚ್ಚಿಸಿದೆ. 22-ವರ್ಷದ ಆ್ಯನಾ ರೀಡ್ ಳನ್ನು (Anna Reid) ಕೊಂದಿದ್ದ ಮಾರ್ಕ್ ಶಟ್ಲೆ ನನ್ನು (Marc Schatzle) (33) ಅಕ್ಟೋಬರ್ 2021 ರಲ್ಲಿ ಶಿಕ್ಷೆಗೊಳಪಡಿಸಲಾಗಿತ್ತು. ಸೆರೆವಾಸದ ಅವಧಿನ್ನು ಪರಿಷ್ಕರಿಸಲು ಅವನು ಕಳೆದ ತಿಂಗಳು ಮೇಲ್ಮನವಿ ಸಲ್ಲಿಸಿದ್ದ. ಸ್ವಿಟ್ಜರ್ ಲ್ಯಾಂಡ್ ನಲ್ಲಿ ಮ್ಯಾಗಾಯಿರ್ ಸರೋರವ ತೀರದಲ್ಲಿರುವ ಐಷಾರಾಮಿ ಹೋಟೆಲೊಂದರಲ್ಲಿ ಮಾರ್ಕ್, ಆ್ಯನಾಳನ್ನು ಟವೆಲ್ ನಿಂದ ಉಸಿರುಗಟ್ಟಿಸಿ ಸಾಯಿಸಿದ್ದ.

ಕುದರೆ ರೇಸ್ ನಲ್ಲಿ ತೊಡಗಿಸಿಕೊಂಡಿರುವ ಒಂದು ಪ್ರತಿಷ್ಠಿತ ಕುಟುಂಬದವಳಾಗಿದ್ದ ಆ್ಯನಾ, ಮಾರ್ಕ್​ನೊಂದಿಗಿನ 3 ತಿಂಗಳ ಅಫೇರ್ ನಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ರೂಪಾಯಿಗಳನ್ನು ವ್ಯಯಿಸಿದ್ದಳೆಂದು ಕೋರ್ಟ್ ಗೆ ಹೇಳಲಾಗಿದೆ.

ಆದರೆ, ಏಪ್ರಿಲ್ 9, 2019ರಂದು ಆ್ಯನಾ, ಮಾರ್ಕ್ ನನ್ನು ತೊರೆಯುವ ಬೆದರಿಕೆ ಹಾಕಿದಾಗ ರೊಚ್ಚಿಗೆದ್ದ ಅವನು ಅವಳನ್ನು ಕೊಂದುಬಿಟ್ಟ.

ಮಾರ್ಕ್ ಒಬ್ಬ ಬಾಡಿ ಬಿಲ್ಡರ್ !

ವಿಚಾರಣೆಯ ಸಮಯದಲ್ಲಿ ಮೈ ತುಂಬಾ ಹಚ್ಚೆ ಹಾಕಿಸಿಕೊಂಡಿರುವ ಬಾಡಿಬಿಲ್ಡರ್ ಮಾರ್ಕ್, ತಾನು ಮತ್ತು ಆ್ಯನಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಸತ್ತಳು ಎಂದು ಹೇಳಿದ. ಆದರೆ ನ್ಯಾಯಾಲಯ ಅವನ ವಾದವನ್ನು ತಿರಸ್ಕರಿಸಿ ಅದೊಂದು ಉದ್ದೇಶಪೂರ್ವಕ ಕೊಲೆ ಎಂದು ಹೇಳಿತು. ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಅವನ ಪರ ವಾದಿಸಿದ ವಕೀಲರ ಮನವಿಯನ್ನೂ ಕೋರ್ಟ್ ತಿರಸ್ಕರಿಸಿತು.

ಮಾರ್ಕ್ ನ ಮೇಲ್ಮನವಿಯ ವಿಚಾರಣೆಯನ್ನು ಕಳೆದ ವಾರ ನಡೆಸಿದ ಸ್ವಿಟ್ಜರ್ ಲ್ಯಾಂಡ್ ನ ಲುಗ್ಯಾನೋದಲ್ಲಿರುವ ದಿ ಕೋರ್ಟ್ ಆಫ್ ಅಪೀಲ್ ಶಿಕ್ಷೆಯನ್ನು 6-ತಿಂಗಳು ಹೆಚ್ಚಿಸಿತು.

ಬಾತ್ಮೀದಾರನ ಹೇಳಿಕೆ

‘ಮಾರ್ಕ್ ಗೆ ವಿಧಿಸಿದ್ದ ಶಿಕ್ಷೆಯನ್ನು ಯಾಕೆ ಹೆಚ್ಚಿಸಲಾಯಿತು ಎಂಬ ವಿವರಣೆ ನಂತರ ಬಿಡುಗಡೆ ಮಾಡಲಾಗುವುದು, ಆದರೆ ಸದ್ಯದ ಸಂಗತಿಯೇನೆಂದರೆ ಅಪೀಲ್ ನಲ್ಲಿರುವ ಸಾಕ್ಷ್ಯವನ್ನು ಆಲಿಸಿದ ನಂತರ ಜ್ಯೂರಿ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ನಿರ್ಧರಿಸಿತು.’ ಎಂದು ಒಬ್ಬ ಬಾತ್ಮೀದಾರ ಹೇಳಿದ್ದಾರೆ.

ಮಾರ್ಕ್ ತನ್ನ ಶಿಕ್ಷೆಯನ್ನು ಪೂರ್ತಿಗೊಳಿದ ಬಳಿಕ ಅವನನ್ನು ಸ್ವಿಟ್ಜರ್ ಲ್ಯಾಂಡ್ ನಿಂದ ಹೊರಹಾಕಲಾಗುವುದು ಮತ್ತು 14 ವರ್ಷಗಳ ಕಾಲ ಸ್ವಿಟ್ಜರ್ ಲ್ಯಾಂಡ್ ಪ್ರವೇಶಿಸದಂತೆ ಪ್ರತಿಬಂಧಿಸಲಾಗುವುದು ಎಂದು ಕೋರ್ಟ್ ಹೇಳಿದೆ. ಇದೂ ಕೂಡ ಮೊದಲು ಹೇರಿದ್ದ 12 ವರ್ಷಗಳ ಬಹಿಷ್ಕಾರಕ್ಕಿಂತ 2 ವರ್ಷ ಜಾಸ್ತಿಯಾಗಿದೆ.

ಆಲ್ ಕಾಪ್ಸ್ ಆರ್ ಬಾ****!

ಮಾರ್ಕ್ ದೇಹದ ಮೇಲೆಲ್ಲ ಇರುವ ಟ್ಯಾಟೂಗಳಲ್ಲಿ ಒಂದು ಎಸಿಎಬಿ ಅಂತಿದೆ, ಆದರ ಅರ್ಥ ಆಲ್ ಕಾಪ್ಸ್ ಆರ್ ಬಾ****! ಅವನು ತನ್ನ ಮೇಲ್ಮನವಿಯಲ್ಲೂ ‘ನಡೆದಿದ್ದೆಲ್ಲ ಒಂದು ಆಕಸ್ಮಿಕ, ನಾನ್ಯಾವತ್ತೂ ಆ್ಯನಾಳ ಸಾವು ಬಯಸಿರಲಿಲ್ಲ,’ ಎಂದು ಹೇಳಿದ್ದಾನೆ.

Killer Marc

ಹಂತಕ ಮಾರ್ಕ್​

‘ಸರ್ಕಾರಿ ವಕೀಲರು ಏನೇ ಹೇಳಲಿ, ನಾನು ಕ್ಷಮಾಪಣೆ ಕೇಳಿದ್ದೇನೆ. ಆ್ಯನಾಳ ಫ್ಯಾಮಿಲಿಗೂ ಸಾರಿ ಹೇಳಿದ್ದೇನೆ. ಇಂಥ ಘೋರ ಘಟನೆ ನಡೆದಿರುವುದಕ್ಕೆ ನನ್ನ ಕುಟುಂಬದ ಕ್ಷಮೆ ಕೂಡ ಯಾಚಿಸಿರುವೆ,’ ಎಂದು ಮಾರ್ಕ್ ಹೇಳಿದ್ದಾನೆ.

2019ರಲ್ಲಿ ಲುಗ್ಯಾನೊ ಕ್ರಿಮಿನಲ್ ಕೋರ್ಟ್ ನ ಜಡ್ಜ್ ಮೌರೊ ಎರ್ಮಾನಿ ಅವರು, ಇದೊಂದು ಉನ್ನತ ಹಂತದ ಉದ್ದೇಶಪೂರ್ವಕ ಹತ್ಯೆ, ಎಂದು ಹೇಳಿದ್ದರು.

ಇದು ಘೋರ ಅಪರಾಧ!

‘ಅವನ ಅಪರಾಧ ದೊಡ್ಡ ಪ್ರಮಾಣದ್ದಾಗಿದೆ. ತನಗೆ ಪ್ರೀತಿ ಮತ್ತು ಅಪಾರ ಹಣ ನೀಡಿದ ಒಬ್ಬ ಯುವತಿಯನ್ನು ಕೊಲ್ಲಬಲ್ಲೆ ಅನ್ನೋದನ್ನು ಅವನು ಸಾಬೀತು ಮಾಡಿದ್ದಾನೆ. ಅವಳು ಬಿಟ್ಟುಹೋಗುವುದಾಗಿ ಹೇಳಿದಾಗ ಇವನಿಗೆ ಭಾವನೆಗಳ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗಿಲ್ಲ. ಅನಾಥ ಪ್ರಜ್ಞೆಯಿಂದ ಇವನನ್ನು ಕಾಡಿದೆ,’ ಎಂದು ಅವರು ಹೇಳಿದ್ದರು.

‘ಮಾರ್ಕ್ ನ ವಕೀಲರು, ಲೈಂಗಿಕ ಕ್ರಿಯೆ ಆಕಸ್ಮಿಕವಾಗಿ ಸಾವಿನಲ್ಲಿ ಪರ್ಯಾವಸಗೊಂಡಿದೆ ಅಂತ ವಾದಿಸಿದರು, ಅದು ಅವರ ಕಕ್ಷಿದಾರನಿಗೆ ಅನುಕೂಲವಾಗುವಂಥ ವಾದ. ವಾಸ್ತವ ಸಂಗತಿಯೇನೆಂದರೆ, ಮಹಿಳೆಯೊಬ್ಬಳನ್ನು ಉದ್ದೇಶಪೂರ್ವಕವಾಗಿ ಕೊಲ್ಲಲಾಗಿದೆ,’ ಎಂದು ಜಡ್ಜ್ ಹೇಳಿದ್ದರು.

ಉಸಿರುಗಟ್ಟಿಸುವ ಮೂಲಕ ಸಂಭವಿಸುವ ಸಾವು ಯಾವತ್ತೂ ಇದ್ದಕ್ಕಿದ್ದಂತೆ ಸಂಭವಿಸಲಾರದು. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಸಾಯಿಸುವವನು ತನ್ನ ಆಹುತಿ ವಿಲವಿಲ ಒದ್ದಾಡುವುದನ್ನು ನೋಡುತ್ತಾನೆ. ಉಸಿರುಗಟ್ಟಿ ಸಾಯುವದನ್ನು ಅವನು ನೋಡಿಯೂ ಹತ್ಯೆ ಮಾಡುವುದನ್ನು ನಿಲ್ಲಿಸುವುದಿಲ್ಲ,’ ಎಂದು ಅವರು ಹೇಳಿದ್ದರು.

ಮತ್ತಷ್ಟು ಕ್ರೈಮ್ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್