
ಅವರು ಪ್ರಸಿದ್ಧ ಜಾಹೀರಾತುಗಳಲ್ಲಿ ಪೋಸು ಕೊಡುತ್ತಿದ್ದರು…ಅವರ ಮೈಮಾಟವನ್ನು ನೋಡಿ ಜನರು ಕೂಡ ಆಕರ್ಷಿತರಾಗುತ್ತಿದ್ದರು…ಹೀಗೆ ಬಾಲಿವುಡ್ ಬಣ್ಣಲೋಕದಲ್ಲಿ ಅವಕಾಶ ವಂಚಿತರಾದರೂ ಜಾಹೀರಾತುಗಳ ಮೂಲಕ ಸ್ಟಾರ್ ಎನಿಸಿಕೊಳ್ಳುತ್ತಿದ್ದರು. ಆ ಮೂಲಕ ಸಿನಿರಂಗದಲ್ಲಿ ಕೆಲಸಗಿಟ್ಟಿಸಿಕೊಳ್ಳುತ್ತಿದ್ದರು…ಆದರೆ ಕಳೆದ ಎರಡು ವರ್ಷಗಳಿಂದ ಕೊರೋನಾ ಹೊಡೆತಕ್ಕೊಳಗಾಗಿ ಬಣ್ಣದ ಲೋಕದ ಬಣ್ಣವೇ ಮಾಸಿ ಹೋಗಿದೆ. ಅತ್ತ ಐಷಾರಾಮಿ ಜೀವನಶೈಲಿಗೆ ಒಗ್ಗಿಕೊಂಡಿದ್ದ ಟಾಪ್ ಮಾಡೆಲ್‌ಗಳು ಮತ್ತು ನಟಿಮಣಿಯರು ಹಣಗಳಿಸಲು ಮತ್ತೊಂದು ದಾರಿ ಕಂಡುಕೊಂಡಿದ್ದರು. ಇದೀಗ ಮುಂಬೈನ ಸೆಲೆಬ್ರಿಟಿಗಳ ಹೊಸ ದಂಧೆಯನ್ನು ಬೇಧಿಸುವಲ್ಲಿ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ.
ಇತ್ತೀಚೆಗಷ್ಟೇ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಈ ಪ್ರಕರಣವನ್ನು ನಾನಾ ಆಯಾಮಗಳನ್ನು ತನಿಖೆ ನಡೆಸಿದ್ದ ಪೊಲೀಸರಿಗೆ ವಿಶೇಷ ಸುಳಿವೊಂದು ಸಿಕ್ಕಿತ್ತು. ಆ ಸುಳಿವನ್ನು ಬೆನ್ನತ್ತಿದ ಕ್ರೈಂ ಬ್ರಾಂಚ್ ಪೊಲೀಸರಿಗೆ ಮಾಯಾನಗರಿಯ ಮಾಯಗಾತಿಯರ ಅಸಲಿಯತ್ತು ಗೊತ್ತಾಗಿದೆ.
ಹೌದು, ಮುಂಬೈನಲ್ಲಿ ನಡೆಯುತ್ತಿದ್ದ ಉನ್ನತ ಮಟ್ಟದ ವೇಶ್ಯಾವಾಟಿಕೆ ಬಯಲಾಗಿದೆ. ಈ ದಂಧೆಯಲ್ಲಿ ತೊಡಗಿಸಿಕೊಂಡವರು ಟಾಪ್ ಮಾಡೆಲ್ ಮತ್ತು ನಟಿಮಣಿಯರು. ಅವರಲ್ಲಿ ಒಬ್ಬರು ಉನ್ನತ ಮಾಡೆಲ್ ಕೂಡ ಇದ್ದಾರೆ. ಆಕೆ ಅನೇಕ ದೊಡ್ಡ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದರು. ಇನ್ನೊಬ್ಬರು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ನಟಿ.
ಜುಹುವಿನ ಪಂಚತಾರಾ ಹೋಟೆಲ್ ಮೇಲೆ ನಡೆದ ಪೊಲೀಸರ ದಾಳಿ ವೇಳೆ ಹಲವರು ಸಿಕ್ಕಿಬಿದ್ದಿದ್ದಾರೆ. ಇದಾಗ್ಯೂ ಈ ವೇಳೆ ನಟಿ ಹಾಗೂ ಖ್ಯಾತ ಮಾಡೆಲ್ ಇರಲಿಲ್ಲ. ಅದಾಗ್ಯೂ ಈ ವೇಶ್ಯಾವಾಟಿಕೆಯ ಕಿಂಗ್ ಪಿನ್ ಎನಿಸಿಕೊಂಡಿರುವ ಇಶಾ ಖಾನ್ ಪೊಲೀಸರು ಬಂಧಿಸಿದ್ದಾರೆ. ಆ ಬಳಿಕ ವಿಚಾರಣೆ ನಡೆಸಿದಾಗ, ಯಾರೆಲ್ಲಾ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಬಹಿರಂಗವಾಗಿದೆ. ಅಷ್ಟೇ ಅಲ್ಲದೆ ಖ್ಯಾತ ನಟಿಮಣಿಯರಿಗೆ ಎರಡು ಗಂಟೆಗೆ ಎರಡು ಲಕ್ಷ ರೂಪಾಯಿಗಳನ್ನು ಪಾವತಿಸಲಾಗುತ್ತಿತ್ತು ಎಂದು ಪ್ರಮುಖ ಆರೋಪಿ ಇಶಾ ಖಾನ್ ಬಾಯಿ ಬಿಟ್ಟಿದ್ದಾಳೆ.
ಕೊರೋನಾದಿಂದ ಉಂಟಾದ ಲಾಕ್‌ಡೌನ್‌ನಿಂದ ಶೂಟಿಂಗ್ ನಿಲ್ಲಿಸಲಾಗಿದೆ. ಅಲ್ಲದೆ ನಟಿ-ಮಾಡೆಲ್ಗಳಿಗೆ ಕೆಲಸವಿರಲಿಲ್ಲ. ಹೀಗಾಗಿ ಮಾಡೆಲ್‌ಗಳು, ನಟಿಯರು ನನ್ನ ಸಂಪರ್ಕ ಬಳಸಿಕೊಂಡಿದ್ದರು. ಅವರ ಪ್ರೊಫೈಲ್‌ಗಳು ಮತ್ತು ಛಾಯಾಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ಅವರು ಇಷ್ಟಪಟ್ಟ ಗ್ರಾಹಕರೊಂದಿಗೆ ದರ, ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲಾಗುತ್ತಿತ್ತು. ಆ ಬಳಿಕ ಜುಹುವಿನಂತಹ ಐಷಾರಾಮಿ ಪ್ರದೇಶಗಳಲ್ಲಿರುವ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಬುಕ್ ಮಾಡಲಾಗುತ್ತದೆ ಎಂದು ಇಶಾ ಖಾನ್ ಪೊಲೀಸರಿಗೆ ತಿಳಿಸಿದ್ದಾಳೆ.
ಆರೋಪಿಗಳು ಬಲೆಗೆ ಬಿದ್ದಿದ್ದು ಹೇಗೆ?
ಹೈಟೆಕ್ ವೈಶ್ಯವಾಟಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು, ದಂಧೆಯ ಹಿಂದಿರುವ ಕಿಂಗ್ ಪಿನ್ಗಳ ಸಂಪರ್ಕ ಸಾಧಿಸಿದ್ದರು. ಅದರಂತೆ ಹಲವು ಜನರನ್ನು ಸಂಪರ್ಕಿಸಿ ಕೊನೆಗೂ ಇಶಾ ಖಾನ್ ಅವರೊಂದಿಗೆ ವ್ಯವಹಾರ ಕುದಿರಿಸಿದ್ದಾರೆ. ಈ ವೇಳೆ ಇದರ ಹಿಂದಿನ ಅಸಲಿಯತ್ತು ತಿಳಿಯಲು ಪೊಲೀಸರು ನಟಿಯೇ ಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಈ ವೇಳೆ ವಾಟ್ಸ್ಆ್ಯಪ್ನಲ್ಲಿ ಇಶಾನ್ ಖಾನ್, ಟಾಪ್ ಮಾಡೆಲ್ ಹಾಗೂ ಕೆಲ ನಟಿಯರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಗಂಟೆಗೆ 1 ಲಕ್ಷದಂತೆ 2 ಗಂಟೆಗೆ 2 ಲಕ್ಷದ ಡೀಲ್ ಕುದಿರಿಸಿದ್ದರು. ಅದರಂತೆ ಮಹಿಳಾ ಬ್ರೋಕರ್ ಮತ್ತು ನಟಿ ಹೋಟೆಲ್ ಹೊರಗೆ ತಲುಪಿದ ತಕ್ಷಣ ಕ್ರೈಂ ಬ್ರಾಂಚ್ ತಂಡ ಅವರನ್ನು ವಶಕ್ಕೆ ಪಡೆಯಿತು.
ಇದೀಗ ಬಣ್ಣದ ಲೋಕದ ಕರಾಳ ದಂಧೆಯ ಜಾಡು ಹಿಡಿದು ಹೊರಟಿರುವ ಪೊಲೀಸರಿಗೆ ಮತ್ತಷ್ಟು ಮಾಹಿತಿ ಲಭ್ಯವಾಗಿದ್ದು, ಅದರಂತೆ ಶೀಘ್ರದಲ್ಲೇ ಈ ದಂಧೆಯಲ್ಲಿ ತೊಡಗಿಸಿಕೊಂಡಿರುವ ಮಾಡೆಲ್ಗಳ ಹಾಗೂ ನಟಿಮಣಿಯರನ್ನು ಬಂಧಿಸುವುದಾಗಿ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:Afghanistan Crisis: ತಾಲಿಬಾನ್ ಗ್ಯಾಂಗ್ ಜೊತೆ ಕಾಣಿಸಿಕೊಂಡ ಅಫ್ಘಾನಿಸ್ತಾನ್ ಕ್ರಿಕೆಟಿಗ
ಇದನ್ನೂ ಓದಿ: 17 ವರ್ಷದ ಹುಡುಗಿಗೆ 35 ವರ್ಷದವನ ಜೊತೆ ಲವ್ವಿ-ಡವ್ವಿ: ಲಾಡ್ಜ್ನಲ್ಲಿ ಇಬ್ಬರನ್ನು ನೋಡಿ ಬೆಚ್ಚಿಬಿದ್ದ ಸಿಬ್ಬಂದಿ
ಇದನ್ನೂ ಓದಿ: Tim David: Rcb ತಂಡ ಸಿಂಗಾಪೂರ್ ಕ್ರಿಕೆಟಿಗನನ್ನು ಆಯ್ಕೆ ಮಾಡಿದ್ದು ಯಾಕೆ? ಇಲ್ಲಿದೆ ಉತ್ತರ