17 ವರ್ಷದ ಹುಡುಗಿಗೆ 35 ವರ್ಷದವನ ಜೊತೆ ಲವ್ವಿ-ಡವ್ವಿ: ಲಾಡ್ಜ್​ನಲ್ಲಿ ಇಬ್ಬರನ್ನು ನೋಡಿ ಬೆಚ್ಚಿಬಿದ್ದ ಸಿಬ್ಬಂದಿ

Crime News in Kannada: ಇದೀಗ ಹುಡುಗಿಯ ಕುಟುಂಬಸ್ಥರು ರಾಮಯ್ಯ ವಿರುದ್ದ ದೂರು ನೀಡಿದ್ದು, ಅದರಂತೆ ಪೊಲೀಸರು ಲೈಂಗಿಕ ದೌರ್ಜನ್ಯಮತ್ತು ಆತ್ಮಹತ್ಯೆಗೆ ಕುಮ್ಮಕ್ಕು ಸಂಬಂಧಿತ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

17 ವರ್ಷದ ಹುಡುಗಿಗೆ 35 ವರ್ಷದವನ ಜೊತೆ ಲವ್ವಿ-ಡವ್ವಿ: ಲಾಡ್ಜ್​ನಲ್ಲಿ ಇಬ್ಬರನ್ನು ನೋಡಿ ಬೆಚ್ಚಿಬಿದ್ದ ಸಿಬ್ಬಂದಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 19, 2021 | 10:27 PM

Crime News In Kannada: ಆಕೆಗಿನ್ನೂ 18 ವರ್ಷ ದಾಟಿರಲಿಲ್ಲ. ಆದರೂ ಪ್ರೀತಿ ಎಂಬ ಮಾಯಾಲೋಕದಲ್ಲಿ ತೇಲಾಡುತ್ತಿದ್ದಳು. ಆತ ಅದಾಗಲೇ ಮದುವೆಯಾಗಿ ಸಂಸಾರದ ಸುಖ ಸುಪ್ಪತ್ತಿಗೆಯನ್ನೂ ಅನುಭವಿಸಿದ್ದ. ಅದಾಗ್ಯೂ ಹದಿಹರೆಯದ ಹುಡುಗಿಯ ಹಿಂದೆ ಬಿದ್ದಿದ್ದ. ಹೀಗಾಗಿ ಇಬ್ಬರ ನಡುವಣ ಪ್ರಣಯದಾಟಕ್ಕೆ ವಯಸ್ಸು ಕೂಡ ಅಡ್ಡಿ ಬರಲಿಲ್ಲ. ಇಬ್ಬರೂ ತಮ್ಮ ಗಾಢವಾದ ಪ್ರೀತಿಯಲ್ಲಿ ವಯಸ್ಸು ಎಂಬುದು ಜಸ್ಟ್ ನಂಬರ್ ಎಂಬ ಭಾವಿಸಿದ್ದರು. ಹೌದು, ಆಂಧ್ರಪ್ರದೇಶದ ಪ್ರೇಮಪಕ್ಷಿಗಳ ಅನೈತಿಕ ಸಂಬಂಧದ ವಿಚಾರವೊಂದು ಇದೀಗ ಆತ್ಮಹತ್ಯೆ ಸುದ್ದಿಯೊಂದಿಗೆ ಹೊರಬಿದ್ದಿದೆ.

ನೆಲ್ಲೂರು ಜಿಲ್ಲೆಯ ಬುಚಿರೆಡ್ಡಿಪಾಲೆಂ ಗ್ರಾಮದ ರಾಮಯ್ಯ ಎಂಬ ವ್ಯಕ್ತಿ ತನ್ನ 17 ವರ್ಷದ ಸೋದರ ಸೊಸೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಅತ್ತ ಮನೆಯವರು ಆಕೆಗಾಗಿ ವಿವಾಹ ಸಂಬಂಧ ಹುಡುಕುತ್ತಿದ್ದರು. ಆದರೆ 17ರ ಪ್ರಾಯದ ಹುಡುಗಿಗೆ ತನ್ನಗಿಂತ 18 ವರ್ಷದ ಹಿರಿಯ ಪ್ರಿಯತಮನನ್ನು ಬಿಟ್ಟಿರಲು ಸಾಧ್ಯವಿರಲಿಲ್ಲ. ಅತ್ತ ರಾಮಯ್ಯಗೆ ಅದಾಗಲೇ ಮದುವೆ ಆಗಿದ್ದರಿಂದ ಹೆಣ್ಣು ಕೇಳಲು ದೈರ್ಯವಿರಲಿಲ್ಲ.

ಹೀಗಾಗಿ ಇಬ್ಬರು ಬುಚಿರೆಡ್ಡಿಪಾಲೆಂನ ಲಾಡ್ಜ್​ವೊಂದಕ್ಕೆ ತೆರಳಿದ್ದರು. ಲಾಡ್ಜ್ ಸಿಬ್ಬಂದಿ ತಂದೆ ಮಗಳೆಂದು ರೂಮ್ ನೀಡಿದ್ದರು. ಅದಾಗಲೇ ಒಂದು ಗಟ್ಟಿ ನಿರ್ಧಾರದೊಂದಿಗೆ ಬಂದಿದ್ದ ಜೋಡಿ ಲಾಡ್ಜ್​ ರೂಮ್​ನಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಅದರಂತೆ ಬರುವಾಗಲೇ ತಂದಿದ್ದ ಕೀಟನಾಶಕವನ್ನು ಸೇವಿಸಿದ್ದಾರೆ. ಇತ್ತ ಆತ್ಮಹತ್ಯೆಯ ವಿಚಾರ ತಿಳಿದು ಕುಟುಂಬಸ್ಥರು ಲಾಡ್ಜ್​ಗೆ ಆಗಮಿಸಿದ್ದರು. ಈ ವೇಳೆ ಲಾಡ್ಜ್​ ಸಿಬ್ಬಂದಿ ಬಾಗಿಲನ್ನು ಹೊಡೆದಾಗ ಇಬ್ಬರೂ ನೆಲದಲ್ಲಿ ಬಿದ್ದು ಪ್ರಾಣ ಉಳಿಸುವಂತೆ ಹಾತೊರೆಯುತ್ತಿದ್ದರು. ಕೂಡಲೇ ಇಬ್ಬರನ್ನು ಹತ್ತಿರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೀಗ ಹುಡುಗಿಯ ಕುಟುಂಬಸ್ಥರು ರಾಮಯ್ಯ ವಿರುದ್ದ ದೂರು ನೀಡಿದ್ದು, ಅದರಂತೆ ಪೊಲೀಸರು ಲೈಂಗಿಕ ದೌರ್ಜನ್ಯಮತ್ತು ಆತ್ಮಹತ್ಯೆಗೆ ಕುಮ್ಮಕ್ಕು ಸಂಬಂಧಿತ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಲಕ್ಷ್ಮಣ್ ಅವರಿಂದ ಆಟೋಗ್ರಾಫ್ ಪಡೆಯುತ್ತಿರುವ ಟೀಮ್ ಇಂಡಿಯಾದ ಈ ಆಟಗಾರ ಯಾರೆಂದು ಗುರುತಿಸಬಲ್ಲಿರಾ?

ಇದನ್ನೂ ಓದಿ: Crime News: ನರೇಶ್ ಎಂಬ ನರರಾಕ್ಷಸ: 50 ರೂಪಾಯಿಗಾಗಿ ಪುಟ್ಟ ಮಗುವಿನ ಕೊಲೆ..!

ಇದನ್ನೂ ಓದಿ: Ola Electric scooter S1: ಯಾವ ರಾಜ್ಯದಿಂದ ಅತೀ ಕಡಿಮೆ ಬೆಲೆಗೆ ಓಲಾ ಸ್ಕೂಟರ್ ಖರೀದಿಸಬಹುದು?

(Extramarital relationship leads to suicide attempt in Nellore)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ