Crime News: ನರೇಶ್ ಎಂಬ ನರರಾಕ್ಷಸ: 50 ರೂಪಾಯಿಗಾಗಿ ಪುಟ್ಟ ಮಗುವಿನ ಕೊಲೆ..!

Crime News In Kannada: ನರೇಶ್ ಹುಡುಕಾಟಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಆದರೆ ಸದಾ ಒಂದೊಂದು ಸ್ಥಳ ಬದಲಿಸುತ್ತಿದ್ದ ಆರೋಪಿಯನ್ನು ಬಂಧಿಸುವುದು ಕೂಡ ಸುಲಭವಾಗಿರಲಿಲ್ಲ.

Crime News: ನರೇಶ್ ಎಂಬ ನರರಾಕ್ಷಸ:  50 ರೂಪಾಯಿಗಾಗಿ ಪುಟ್ಟ ಮಗುವಿನ ಕೊಲೆ..!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 19, 2021 | 8:49 PM

ಯಾರದೋ ಮೇಲಿನ ಸಿಟ್ಟಿಗೆ, ಇನ್ಯಾರದ್ದೋ ಮೇಲೆ…ಹೌದು, ಗುರುಗ್ರಾವ್​ನ ಈ ಪ್ರಕರಣವು ಇಡೀ ಊರನ್ನೇ ಬೆಚ್ಚಿಬೀಳಿಸಿತ್ತು. ಯಾಕೆಂದರೆ ಈ ಘಟನೆಯಲ್ಲಿ ಅಸುನೀಗಿದ್ದು 18 ತಿಂಗಳ ಮಗು. ಆರು ತಿಂಗಳ ಹಿಂದೆ ನಡೆದ ಅಮಾನುಷ ಕೃತ್ಯವನ್ನು ಬೇಧಿಸುವಲ್ಲಿ ಫರಿದಾಬಾದ್​ ಪೊಲೀಸರು ಯಶಸ್ವಿಯಾಗಿದ್ದಾರೆ. ಅಂದರೆ ಫೆಬ್ರವರಿಯಲ್ಲಿ ಗುರುಗಾವ್​ನ​ ಫರಿದಾಬಾದ್​ ಸೆಕ್ಟರ್​ನಲ್ಲಿ 22ರ ಹರೆಯದ ನರೇಶ್ ಎಂಬ ಯುವಕ ವಾಸಿಸುತ್ತಿದ್ದ. ನಿರುದ್ಯೋಗಿಯಾಗಿದ್ದ ಆತ ಮಾದಕ ವ್ಯಸಕ್ಕೆ ಒಳಗಾಗಿದ್ದ. ಅದೊಂದು ದಿನ ಪಕ್ಕದ ಮನೆಯ 8 ವರ್ಷದ ಹುಡುಗಿ ಕೈಯ್ಯಲ್ಲಿದ್ದ 50 ರೂ. ಅನ್ನು ನರೇಶ್ ಕಸಿದಿದ್ದ. ಈ ಘಟನೆಯನ್ನು ಅಲ್ಲೇ ಹತ್ತಿರದಲ್ಲಿದ್ದ ಮತ್ತೋರ್ವ ನೆರೆ ಮನೆಯ ವ್ಯಕ್ತಿಯೊಬ್ಬರು ನೋಡಿದ್ದರು. ಈ ವಿಚಾರವಾಗಿ ಜಗಳವಾಗಿತ್ತು.

ಘಟನೆ ನಡೆದು ಒಂದೆರೆಡು ದಿನಗಳ ಕಳೆಯುವುದರೊಳಗೆ ನರೇಶ್ ಮತ್ತೆ ಸಾಕ್ಷಿ ಹೇಳಿದ್ದ ವ್ಯಕ್ತಿಯೊಂದಿಗೆ ಜಗಳಕ್ಕಿಳಿದಿದ್ದ. ಹೀಗೆ ಕಂಡಾಗೆಲ್ಲಾ ಜಗಳ ಮಾಡಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದ. ಈ ವಿಚಾರವಾಗಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ನರೇಶ್ ಸಂದರ್ಭಕ್ಕಾಗಿ ಕಾಯುತ್ತಿದ್ದನು. ಫೆಬ್ರವರಿ 5 ರಂದು ಸಾಕ್ಷಿ ನುಡಿದಿದ್ದ ವ್ಯಕ್ತಿಯ 18 ತಿಂಗಳ ಮಗು ಮನೆಯ ಬಳಿ ಒಬ್ಬನೇ ಆಡುತ್ತಿರುವುದನ್ನು ನರೇಶ್ ಗಮನಿಸಿದ್ದ.

ಮಗುವನ್ನು ಪುಸಲಾಯಿಸಿ ತನ್ನ ಫ್ಲಾಟ್​ಗೆ ಕರೆದುಕೊಂಡು ಹೋದ ನರೇಶ್, ಬಳಿಕ ದೊಡ್ಡದಾದ ನೀರಿನ ಟ್ಯಾಂಕ್​ನಲ್ಲಿ ಮುಗಿಸಿ ಕೊಲೆ ಮಾಡಿದ್ದ. ಇತ್ತ ಮಗುವಿನ ಪಾಲಕರು ಹುಡುಕಾಟ ಶುರು ಮಾಡಿದರು ಪತ್ತೆಯಾಗಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಇದೇ ಸಂದರ್ಭದಲ್ಲಿ ನರೇಶ್ ಪರಾರಿಯಾಗಿದ್ದ.

ನರೇಶ್ ಹುಡುಕಾಟಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಆದರೆ ಸದಾ ಒಂದೊಂದು ಸ್ಥಳ ಬದಲಿಸುತ್ತಿದ್ದ ಆರೋಪಿಯನ್ನು ಬಂಧಿಸುವುದು ಕೂಡ ಸುಲಭವಾಗಿರಲಿಲ್ಲ. ಇದೀಗ ಮೊಬೈಲ್ ಟ್ರ್ಯಾಕ್ ಮಾಡುವ ಮೂಲಕ 6 ತಿಂಗಳ ಬಳಿಕ ಕೊಲೆಗಡುಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವೇಳೆ ವಿಚಾರಣೆಗೆ ಒಳಪಡಿಸಿದಾಗ ಟ್ಯಾಂಕ್​ನಲ್ಲಿ ಬಾಯಿ ಮುಚ್ಚಿ ಮುಳುಗಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಕೊಲೆಗೆ ಕಾರಣ ಅವತ್ತು 50 ರೂ. ಜಗಳ ಎಂದು ಬಾಯಿಬಿಟ್ಟಿದ್ದಾನೆ. ಸದ್ಯ ಆರೋಪಿ ನರೇಶ್​ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ICC Test Rankings: ಟೆಸ್ಟ್ ಬೌಲಿಂಗ್​ ರ‍್ಯಾಂಕಿಂಗ್: ಒಂದೇ ಪಂದ್ಯದಿಂದ 18 ಸ್ಥಾನ ಮೇಲೇರಿದ ಸಿರಾಜ್

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿದು ಹರಕಲು ಬಾಯಿ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: T20 World Cup 2021: 7 ಮಂದಿ ಔಟ್: ಟಿ20 ವಿಶ್ವಕಪ್​ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?

(Man fights with neighbour for Rs 50, drowns his 18-month-old child to revenge)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್