Updated on: Aug 19, 2021 | 4:12 PM
ಇಂಟರ್ನ್ಯಾಷನಲ್ ಕ್ರಿಕೆಟ್ ಬೋರ್ಡ್ ನೂತನ ಟೆಸ್ಟ್ ಬೌಲಿಂಗ್ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಟಾಪ್ 10 ಬೌಲರುಗಳ ಪಟ್ಟಿಯಲ್ಲಿ ಈ ಬಾರಿ ಟೀಮ್ ಇಂಡಿಯಾದ ಇಬ್ಬರು ಬೌಲರುಗಳು ಸ್ಥಾನ ಪಡೆದುಕೊಂಡಿದ್ದಾರೆ. ಅದರಲ್ಲೂ ಲಾರ್ಡ್ಸ್ ಟೆಸ್ಟ್ನ ಯಶಸ್ವಿ ಬೌಲರು ಮೊಹಮ್ಮದ್ ಸಿರಾಜ್ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವನ್ನು ಪಡೆದಿರುವುದು ವಿಶೇಷ.
ಈ ಪಟ್ಟಿಯಲ್ಲಿ 908 ಅಂಕ ಪಡೆದಿರುವ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಅಗ್ರಸ್ಥಾನದಲ್ಲಿದ್ದಾರೆ.
2ನೇ ಸ್ಥಾನದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದ್ದು, 848 ಅಂಕಗಳನ್ನು ಪಡೆದಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಇಂಗ್ಲೆಂಡ್ ವಿರುದ್ದ ಮೊದಲೆರಡು ಟೆಸ್ಟ್ನಲ್ಲಿ ಅಶ್ವಿನ್ ಆಡಿರಲಿಲ್ಲ. ಇದಾಗ್ಯೂ ದ್ವಿತೀಯ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
3ನೇ ಸ್ಥಾನವನ್ನು ಅಲಂಕರಿಸುವಲ್ಲಿ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಯಶಸ್ವಿಯಾಗಿದ್ದು, ಒಟ್ಟು 824 ಅಂಕ ಹೊಂದಿದ್ದಾರೆ.
4ನೇ ಸ್ಥಾನದಲ್ಲಿ 816 ಅಂಕ ಪಡೆದಿರುವ ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್ವುಡ್ ಇದ್ದಾರೆ.
5ನೇ ಶ್ರೇಯಾಂಕದಲ್ಲಿ ನ್ಯೂಜಿಲೆಂಡ್ ವೇಗಿ ನೀಲ್ ವ್ಯಾಗ್ನರ್ ಇದ್ದು, ಒಟ್ಟು 810 ಅಂಕಗಳಿಸಿದ್ದಾರೆ.
6ನೇ ಸ್ಥಾನವನ್ನು ಇಂಗ್ಲೆಂಡ್ ಯಶಸ್ವಿ ವೇಗಿ ಜೇಮ್ಸ್ ಅಂಡರ್ಸನ್ ಪಡೆದಿದ್ದು, ಈ ಬಾರಿ ಜಿಮ್ಮಿ ಒಟ್ಟು 800 ಅಂಕಗಳನ್ನು ಪಡೆದಿದ್ದಾರೆ.
7ನೇ ಶ್ರೇಯಾಂಕವನ್ನು ದಕ್ಷಿಣ ಆಫ್ರಿಕಾ ವೇಗಿ ಕಗಿಸೋ ರಬಾಡ ಪಡೆದಿದ್ದು, 798 ಅಂಕಗಳಿಸಿದ್ದಾರೆ.
8ನೇ ಸ್ಥಾನದಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಇದ್ದು, 764 ಅಂಕ ಹೊಂದಿದ್ದಾರೆ.
9ನೇ ಶ್ರೇಯಾಂಕದಲ್ಲಿ 756 ಅಂಕಗಳೊಂದಿಗೆ ವೆಸ್ಟ್ ಇಂಡೀಸ್ ವೇಗಿ ಜೇಸನ್ ಹೋಲ್ಡರ್ ಇದ್ದಾರೆ.
10ನೇ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾ ಯಾರ್ಕರ್ ಮಾಂತ್ರಿಕ ಜಸ್ಪ್ರೀತ್ ಬುಮ್ರಾ ಇದ್ದು, ಒಟ್ಟು 754 ಅಂಕಗಳಿಸಿದ್ದಾರೆ.
ಇನ್ನು ಕಳೆದ ಬಾರಿ 56ನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಲಾರ್ಡ್ಸ್ ಟೆಸ್ಟ್ನಲ್ಲಿ 8 ವಿಕೆಟ್ ಕಬಳಿಸುವ ಮೂಲಕ ಅಂಕ ಪಟ್ಟಿಯಲ್ಲಿ ಬರೋಬ್ಬರಿ 18 ಸ್ಥಾನ ಜಿಗಿತ ಕಂಡಿದ್ದಾರೆ.
Mohammed Siraj left Kapil behind creates a new history in Lords India vs England second Test