ಸಿಟಿ ಇನ್ಸ್ಟಿಟ್ಯೂಟ್ ಮುಂದೆ.. ಜಿಂಕೆ ಕೊಂಬು ಮಾರಲು ಯತ್ನಿಸುತ್ತಿದ್ದ ಕಿರಾತಕ ಅಂದರ್
ಜಿಂಕೆ ಕೊಂಬುಗಳನ್ನ ಮಾರಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಶಂಕರಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ರಾಜಶೇಖರ ನಾಯಕ್ (28) ಬಂಧಿತ ಆರೋಪಿ.
ಬೆಂಗಳೂರು: ಜಿಂಕೆ ಕೊಂಬುಗಳನ್ನ ಮಾರಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಶಂಕರಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ರಾಜಶೇಖರ ನಾಯಕ್ (28) ಬಂಧಿತ ಆರೋಪಿ.
ನಿನ್ನೆ ಸಿಟಿ ಇನ್ಸ್ಟಿಟ್ಯೂಟ್ ಮುಂಭಾಗದಲ್ಲಿ ಜಿಂಕೆ ಕೊಂಬು ಮಾರಲು ಯತ್ನಿಸುತ್ತಿದ್ದ ರಾಜಶೇಖರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನಿಂದ 24 ವಿವಿಧ ಅಳತೆಯ ಜಿಂಕೆ ಕೊಂಬುಗಳನ್ನು ಜಪ್ತಿ ಮಾಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿಗಳಿಂದ ಲಂಚ ಪಡೆಯುವಾಗ ACB ದಾಳಿ: ತಪ್ಪಿಸಿಕೊಳ್ಳಲು ಹೋಗಿ ಕಾಲು ಮುರಿದುಕೊಂಡ ಕಾನ್ಸ್ಟೇಬಲ್!