ಶಿವಮೊಗ್ಗದಲ್ಲಿ ಬೆಳ್ಳಂ ಬೆಳಗ್ಗೆ ಪೊಲೀಸ್ ಬಂದೂಕು ಸದ್ದು, ಕೊಲೆ ಆರೋಪಿಗೆ ಗುಂಡೇಟು
ರಾಜ್ಯದಲ್ಲಿ ಎರಡನೇ ಹಂತದ ಮತದಾನವಾದ ಮರುದಿನ ಮೇ 8 ರಂದು ಶಿವಮೊಗ್ಗದಲ್ಲಿ ನಗರದಲ್ಲಿ ರೌಡಿಶೀಟರ್ಗಳ ಎರಡು ಗ್ಯಾಂಗ್ ನಡುವೆ ಗಲಾಟೆ ನಡೆದು ಜೋಡಿ ಕೊಲೆಗಳಾಗಿದ್ದವು. ಕೊಲೆ ಮಾಡಿದ ಆರೋಪಿಯನ್ನು ಬಂಧಿಸಲು ಪೊಲೀಸರು ಇಂದು (ಮೇ 13) ತೆರಳಿದಾಗ, ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದನು. ಮುಂದೇನಾಯ್ತು ಈ ಸ್ಟೋರಿ ಓದಿ..
ಶಿವಮೊಗ್ಗ ಮೇ 10: ಶಿವಮೊಗ್ಗ (Shivamogga) ತಾಲೂಕಿನ ಬೀರನಕೆರೆ ಗ್ರಾಮದ ಸಮೀಪ ಬೆಳ್ಳಂ ಬೆಳಗ್ಗೆ ಪೊಲೀಸರ (Police) ಬಂದೂಕು ಸದ್ದು ಮಾಡಿದೆ. ಕೊಲೆ ಪ್ರಕರಣದ ಆರೋಪಿ ಶೋಯೆಬ್ ಅಲಿಯಾಸ್ ಅಂಡ್ ಕಾಲಿಗೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್ಐ ರವಿ ಗುಂಡು ಹೊಡೆದು (Firing), ಬಂಧಿಸಿದ್ದಾರೆ.
ಮೂವರು ರೌಡಿಗಳ ಕೊಲೆ
ಕಳೆದ ಬುಧವಾರ ಮೇ 8 ರಂದು ಶಿವಮೊಗ್ಗ ನಗರದಲ್ಲಿ ಎರಡು ಗ್ಯಾಂಗ್ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಇಬ್ಬರು ರೌಡಿಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿಲಾಗಿತ್ತು. ಇನ್ನು ಗಲಾಟೆಯಲ್ಲಿ ಗಾಯಗೊಂಡಿದ್ದ ರೌಡಿ ಯಾಸೀನ್ ಖುರೇಶಿ ಘಟನೆ ನಡೆದ ಮರುದಿನ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟನು. ಈ ತ್ರಿಬಲ್ ಮರ್ಡರ್ ಘಟನೆಯಿಂದ ಶಿವಮೊಗ್ಗ ನಗರವು ಬೆಚ್ಚಿಬಿದ್ದಿದೆ.
ಮೇ 8ಕ್ಕಿಂತ ಮೂರು ದಿನದ ಮುಂಚೆ ಕೊಲೆಯಾದ ರೌಡಿಶೀಟರ್ ಯಾಸೀನ್ ಖುರೇಶಿಯು ಗೋಪಾಳಗೌಡ ಬಡಾವಣೆಯಲ್ಲಿನ ಮನೆಯೊಂದಕ್ಕೆ ನುಗ್ಗಿ ಯುವಕರ ಮೇಲೆ ಹಲ್ಲೆ ಮಾಡಿದ್ದನು. ಅಂದೇ ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಮತ್ತೊಂದು ಗ್ಯಾಂಗ್ ತಯಾರಾಗಿತ್ತು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರು ನಗರದಲ್ಲಿ ಹೈ ಅಲರ್ಟ್ ಆಗಿದ್ದರು.
ಮೇ 07 ರಂದು ಮತದಾನ ಮುಗಿಯುತ್ತಿದ್ದಂತೆ ಪೊಲೀಸ್ ಬಂದೋಬಸ್ತ್ ಕಡಿಮೆ ಆಗಿತ್ತು. ಇದೇ ಅವಕಾಶವನ್ನು ಕಾಯುತ್ತಿದ್ದ ರೌಡಿಗಳಾದ ಗೌಸ್ ಮತ್ತು ಶೋಯಬ್ ಗ್ಯಾಂಗ್ ಮತ್ತು ಇವರ ಸಹಚರರು ಮೇ 08 ರಂದು ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಸಂಜೆ 5 ಗಂಟೆ ಆಸುಪಾಸಿನಲ್ಲಿ ಬೈಕ್ ಮೇಲೆ ನಗರದ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಎಂಟ್ರಿಕೊಟ್ಟಿದ್ದರು.
ಇದನ್ನೂ ಓದಿ: ಅನೈತಿಕ ಸಂಬಂಧ, ಮನಬಂದಂತೆ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ
ಮಚ್ಚು, ಲಾಂಗ್ ಹಿಡಿದುಕೊಂಡು ಬಂದಿದ್ದ ಗ್ಯಾಂಗ್ ರೌಡಿ ಶೀಟರ್ ಯಾಸೀನ್ ಖುರೇಶಿ ಮೇಲೆ ಅಟ್ಯಾಕ್ ಮಾಡಿದೆ. ಈ ಅಟ್ಯಾಕ್ ನೋಡುತ್ತಿದ್ದಂತೆ ಯಾಸೀನ್ ಗ್ಯಾಂಗ್ ಅಲರ್ಟ್ ಆಗಿದೆ. ಅಟ್ಯಾಕ್ಗೆ ಬಂದಿದ್ದ ಗೌಸ್ ಮತ್ತು ಶೋಯಬ್ ಇಬ್ಬರನ್ನು ಯಾಸೀನ್ ಖುರೇಶಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ದೊಡ್ಡ ಸಿಮೆಂಟ್ ಶೀಟ್, ಚಪ್ಪಡಿ ಕಲ್ಲು, ಸೈಕಲ್ ಎತ್ತುಹಾಕಿ ಬರ್ಬರ ಹತ್ಯೆ ಮಾಡಿದೆ. ಈ ಇಬ್ಬರ ಸಿಕ್ಕಿಬೀಳುತ್ತಿದ್ದಂತೆ ಮೃತರ ಜೊತೆ ಬಂದಿದ್ದ ಸಹಚರರು ಎಸ್ಕೇಪ್ ಆಗಿದ್ದಾರೆ. ಘಟನೆಯಲ್ಲಿ ರೌಡಿ ಶೀಟರ್ ಯಾಸೀನ್ಗೆ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಸಂಜೆ ಹೊತ್ತಿನಲ್ಲಿ ನಡೆದ ರೌಡಿಗಳ ಗ್ಯಾಂಗ್ ವಾರ್ ನೋಡಿದ ಸ್ಥಳೀಯರು ಹೆಚ್ಚಿಬೀದ್ದರು. ಇಬ್ಬರು ಅಲ್ಲಿ ಹೆಣವಾಗಿ ಬಿದ್ದಿದ್ದರು. ಅವರ ಮುಖ ಕೂಡ ಗುರುತು ಸಿಗದ ರೀತಿಯಲ್ಲಿ ಹತ್ಯೆಮಾಡಲಾಗಿತ್ತು. ಘಟನೆ ತಿಳಿಯುತ್ತಿದ್ದಂತೆ ಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ಎಸ್ಪಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಆರೋಪಿಗಳನ್ನು ಬಂಧಿಸಲು ಎಸ್ಪಿ ಒಂದು ತಂಡ ರಚನೆ ಮಾಡಿದರು. ಅದರಂತೆ ಈ ತಂಡ ಇಂದು (ಮೇ 13) ಕೊಲೆ ಪ್ರಕರಣದ ಆರೋಪಿ ಶೋಯೆಬ್ ಅಲಿಯಾಸ್ ಅಂಡ್ನನ್ನು ಬಂಧಿಸಲು ತೆರಳಿದಾಗ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಕೂಡಲೆ ಪಿಎಸ್ಐ ರವಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆತನನ್ನು ಬಂಧಿಸಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ