ಶಿವಮೊಗ್ಗ: ಹೊರವಲಯದ ಬೊಮ್ಮಕಟ್ಟೆ ಬಡಾವಣೆಯಲ್ಲಿ ಒಂದು ಘಟನೆಯು ಇಡೀ ಕುಟುಂಬವನ್ನ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. 22 ರ ಹರೆಯದ ಸುಮಾ ಎನ್ನುವ ಯುವತಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸುಮಾ ಮೊನ್ನೆ ತಾನೆ ಕುವೆಂಪು ವಿಶ್ವವಿದ್ಯಾಲಯಕ್ಕೆ ಹೋಗಿ ಎಂಸಿಎಗೆ ಪ್ರವೇಶ ಪಡೆದುಕೊಂಡು ಬಂದಿದ್ದಳು. ಕೆಲವು ದಿನಗಳಿಂದ ಕಾಲೇಜ್ಗೂ ಹೊರಟ್ಟಿದ್ದಳು. ವಿದ್ಯಾವಂತೆ ಪಿಜಿ ವ್ಯಾಸಾಂಗ ಮಾಡುತ್ತಿರುವ ಯುವತಿಯು ಫೆ. 9ರ ಸಂಜೆ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಳು. ಬಳಿಕ ಆಕೆಯನ್ನ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆ.10 ರಂದು ಮೃತಪಟ್ಟಿದ್ದಾಳೆ. ಅಷ್ಟಕ್ಕೂ ಬಡ ಹಿಂದುಳಿದ ಸಮುದಾಯದ ಯುವತಿಯ ಆತ್ಮಹತ್ಯೆಗೆ ಕಾರಣವೇನು ಅಂತಾ ನೋಡಿದ್ರೆ, ಮದುವೆಗಾಗಿ ಕೊಟ್ಟ ಟಾರ್ಚರ್ ಹಾಗೂ ಅವಮಾನಕ್ಕೆ ಸುಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಳೆದ ಎರಡು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಪ್ರವೀಣ್ ಎನ್ನುವ ರಸ್ತೆ ಗುತ್ತಿಗೆದಾರನಿಗೆ ಮತ್ತು ಶಿವಮೊಗ್ಗದ ಬೊಮ್ಮಕಟ್ಟೆ ಸುಮಾಳ ನಡುವೆ ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥವೇಳೆ ಒಂದು ಯುವತಿ ಮತ್ತು ಕುಟುಂಬಸ್ಥರು ಒಂದು ಷರತ್ತು ಹಾಕಿದ್ದರು. ಪದವಿ ಓದುತ್ತಿದ್ದ ಸುಮಾಗೆ ಪಿಜಿ ಮಾಡಬೇಕನ್ನುವ ಕನಸಿತ್ತು. ಹೀಗಾಗಿ ಪಿಜಿ ಮುಗಿದ ಮೇಲೆ ಮದುವೆ ಎಂದಿದ್ದರು. ಸುಮಾಳಂತಹ ಸುಂದರಿ ಮತ್ತು ವಿದ್ಯಾವಂತೆ ಸೊಸೆ ಸಿಕ್ಕಿದ್ದು ಚಾನ್ಸ್ ಅಂತಾ ನಿಶ್ಚಿತಾರ್ಥ ಸಮಯದಲ್ಲಿ ಯುವತಿಯ ಷರತ್ತಿಗೆ ಓಕೆ ಎಂದಿದ್ದರು. ಆದ್ರೆ ಕಳೆದ ಆರೇಳು ತಿಂಗಳಿನಿಂದ ಮದುವೆಗಾಗಿ ಗಂಡನ ಮನೆಯವರು ಮತ್ತು ಭಾವಿ ಪತಿ ಪ್ರವೀಣ ಪೀಡಿಸುತ್ತಿದ್ದರು.
ಯುವತಿ ಮತ್ತು ಸಾಕಿದ ತಾಯಿ ನಿರ್ಮಲಾ ಬಾಯಿ ಮದುವೆಗೆ ನಿರಾಕರಿಸಿದ್ದಾರೆ. ಪಿಜಿ ಮುಗಿದ ಬಳಿಕ ಮದುವೆ ಮಾಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಒಪ್ಪದ ಭಾವಿ ಪತಿ ಪ್ರವೀಣ ಮತ್ತು ಆತನ ತಾಯಿ ಮಂಜುಳಾ, ತಂದೆ ಚಂದ್ರಾ ನಾಯ್ಕ್ ಮತ್ತು ತಮ್ಮ ಪೃಥ್ವಿ, ತಂಗಿ ಸಂಧ್ಯಾ ಫೆ.9 ರಂದು ಸಂಜೆ ನ್ಯಾಮತಿಯಿಂದ ಶಿವಮೊಗ್ಗದ ಸುಮಾ ಮನೆಗೆ ಬಂದು ಮದುವೆಗೆ ಬಲವಂತ ಮಾಡಿದ್ದಾರೆ. ಮದುವೆ ಕೂಡಲೇ ಮಾಡುವುದಿಲ್ಲ ಎನ್ನುವ ಸುಮಾ ಮತ್ತು ತಾಯಿ ಮಾತಿಗೆ ದೊಡ್ಡ ಗಲಾಟೆ ಮಾಡಿದ್ದಾರೆ. ಈ ಘಟನೆಯಿಂದ ನೊಂದ ಸುಮಾ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಗಳ ಸಾವಿಗೆ ಭಾವಿ ಪತಿ ಪ್ರವೀಣ ಮತ್ತು ಆತನ ಕುಟುಬಂಸ್ಥರೆ ಕಾರಣವೆಂದು ಸಾಕಿದ ತಾಯಿಯು ಕಣ್ಣೀರು ಹಾಕುತ್ತಿದ್ದಾಳೆ.
ಸಾಕಿದ ತಾಯಿಯು ಮಗಳ ಜೀವನ ಚೆನ್ನಾಗಿರಬೇಕೆಂದು ವಿದ್ಯಾಭ್ಯಾಸ ಮುಗಿಯುವ ಮೊದಲೇ ಮದುವೆಗೆ ಮುಂದಾಗಿದ್ದಳು. ಆದ್ರೆ ಗಂಡನ ಮನೆಯವರು ನಿಶ್ಚಿತಾರ್ಥ ವೇಳೆ ಎಲ್ಲದಕ್ಕೂ ಒಪ್ಪಿಕೊಂಡು ಬಳಿಕ ಮದುವೆಗೆಂದು ಸುಮಾಳಿಗೆ ಚಾರ್ಚರ್ ಕೊಟ್ಟು ಅವಳ ಜೀವವನ್ನೇ ಭಾವಿ ಪತಿ ಮತ್ತು ಅವರ ಕುಟುಂಬಸ್ಥರು ಪಡೆದಿದ್ದಾರೆ. ಎಸಿಎಂ ಪಿಜಿ ಮುಗಿಸಿ ಸರಕಾರಿ ಕೆಲಸ ಸೇರಬೇಕೆಂದಿದ್ದ ಯುವತಿಯ ಕನಸು ನನಸಾಗಲೇ ಇಲ್ಲ.
ವರದಿ: ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ