Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್​ನಲ್ಲಿ ದರೋಡೆ!

| Updated By: ಸುಷ್ಮಾ ಚಕ್ರೆ

Updated on: Aug 05, 2021 | 4:25 PM

Crime News Today: ನಡುರಸ್ತೆಯಲ್ಲಿ ಬಸ್​ ನಿಲ್ಲಿಸಿದ ಪೊಲೀಸರಿಗೆ ತಮ್ಮ ಬಳಿಯಿದ್ದ 1.2 ಕೋಟಿ ಹಣವನ್ನು ನೀಡಿದ ಕೊರಿಯರ್ ಸಿಬ್ಬಂದಿ ಬಳಿಕ ಕಂಗಾಲಾಗಿದ್ದಾರೆ. ಅಸಲಿಗೆ ಆ ಹಣವನ್ನು ತೆಗೆದುಕೊಂಡು ಹೋಗಿದ್ದು ಪೊಲೀಸರೇ ಅಲ್ಲ! ಈ ಕತೆ ಯಾವ ಸಿನಿಮಾ ಕತೆಗೂ ಕಡಿಮೆಯಿಲ್ಲ.

Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್​ನಲ್ಲಿ ದರೋಡೆ!
ಸಾಂದರ್ಭಿಕ ಚಿತ್ರ
Follow us on

ಪುಣೆ: ‘ಕಳ್ಳತನಕ್ಕೆ ನೂರಾರು ಮಾರ್ಗಗಳು’ ಎಂಬಂತೆ ನಾವು ಊಹಿಸಲೂ ಸಾಧ್ಯವಿಲ್ಲದ ರೀತಿ ಇತ್ತೀಚೆಗೆ ದರೋಡೆಯ ಪ್ರಕರಣಗಳು ನಡೆಯುತ್ತಿವೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪತಾಸ್ (Pune District Patas) ಎಂಬಲ್ಲಿ ಪೊಲೀಸರು ನಡುರಸ್ತೆಯಲ್ಲಿ ಸರ್ಕಾರಿ ಬಸ್​ ಅನ್ನು ಅಡ್ಡಹಾಕಿದ್ದರು. ಏನಿರಬಹುದು ಎಂದು ಚಾಲಕ ಬಸ್ ನಿಲ್ಲಿಸುತ್ತಿದ್ದಂತೆ ಬಸ್​ ಏರಿದ ನಾಲ್ಕೈದು ಪೊಲೀಸರು ಆ ಬಸ್​ನಲ್ಲಿದ್ದ ಕೊರಿಯರ್ ಸೇವೆಯ ಸಿಬ್ಬಂದಿಯ ಬಳಿಯಿದ್ದ 1.2 ಕೋಟಿ ರೂ. ಹಣವನ್ನು ಹೊತ್ತೊಯ್ದಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಪೊಲೀಸರೇ ಹೀಗೆ ಲೂಟಿ ಮಾಡಿದರೆ ಏನಪ್ಪಾ ನಮ್ಮ ಕತೆ?! ಎಂದು ಶಾಕ್​ನಲ್ಲಿದ್ದ ಬಸ್​ನವರಿಗೆ ಅವರು ಪೊಲೀಸರಲ್ಲ ದರೋಡೆಕೋರರು (Robbery) ಎಂಬುದು ತಿಳಿಯಲು ನಿಜವಾದ ಪೊಲೀಸರೇ ಬರಬೇಕಾಯಿತು! ಸಿನಿಮೀಯ ರೀತಿಯಲ್ಲಿ ನಡೆದ ಈ ಘಟನೆ ಕೇಳಿದ ಅಸಲಿ ಪೊಲೀಸರು ಕೂಡ ದರೋಡೆಕೋರರ ಬುದ್ಧಿವಂತಿಕೆಗೆ ಶಾಕ್ ಆಗಿದ್ದಾರೆ.

ಪುಣೆಯ ಸರ್ಕಾರಿ ಬಸ್​ನಲ್ಲಿ ಕೊರಿಯರ್ ಸಿಬ್ಬಂದಿ ಕೋಟ್ಯಂತರ ರೂ. ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಆ ಹಣವನ್ನು ಲೂಟಿ ಮಾಡಲು ದರೋಡೆಕೋರರು ಪ್ಲಾನ್ ಮಾಡಿದ್ದರು. ಅದರಂತೆ ಪೊಲೀಸರ ಡ್ರೆಸ್ ಧರಿಸಿ, ಕಾಡಿನ ಬಳಿ ರಸ್ತೆಯಲ್ಲಿ ಬಸ್​ ಅಡ್ಡಗಟ್ಟಿದ ಅವರು ಸೀದಾ ಬಸ್​ ಏರಿ ಆ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಅವರು ದರೋಡೆಕೋರರಿರಬಹುದು ಎಂಬ ಸುಳಿವೂ ಇಲ್ಲದ ಬಸ್ ಚಾಲಕ ಯಾವುದೋ ಕೇಸ್​ಗಾಗಿ ಪೊಲೀಸರು ಬಸ್ ಅಡ್ಡಹಾಕಿರಬಹುದು ಎಂದು ಬಸ್​ ನಿಲ್ಲಿಸಿದ್ದ.
ಕೊರಿಯರ್ ಕಂಪನಿಯ ನಾಲ್ವರು ಸಿಬ್ಬಂದಿಗಳು ನಿಲಂಗದಿಂದ ಬಿವಾಂಡಿಗೆ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದರು.

ಬೇರೆ ಊರಿಗೆ  ಕೊರಿಯರ್ ಇದ್ದುದರಿಂದ ಅವರೆಲ್ಲರೂ ಒಟ್ಟಾಗಿ ಬಸ್​ನಲ್ಲೇ ಪ್ರಯಾಣ ಮಾಡುತ್ತಿದ್ದರು. ಮಧ್ಯಾಹ್ನ 1.15ರ ವೇಳೆಗೆ ಪೊಲೀಸ್ ಡ್ರೆಸ್​ನಲ್ಲಿದ್ದ ದರೋಡೆಕೋರರು ಪತಾಸ್ ಬಳಿ ಕಾಡಿನ ರಸ್ತೆಯಲ್ಲಿ ಬಸ್ ಅಡ್ಡಗಟ್ಟಿದ್ದರು. ನೋಡನೋಡುತ್ತಿದ್ದಂತೆ ಬಸ್ ಏರಿದ ನಾಲ್ಕೈದು ಜನರು ನಿಮ್ಮಲ್ಲಿ ಕೊರಿಯರ್ ಸರ್ವಿಸ್​ನವರು ಯಾರು? ಎಂದು ಕೇಳಿದ್ದರು. ಪೊಲೀಸರು ಕೇಳುತ್ತಿದ್ದಾರಲ್ಲ ಎಂಬ ಭಯದಿಂದಲೇ ಆ ನಾಲ್ವರು ಸೀಟಿನಿಂದ ಎದ್ದು ನಿಂತಿದ್ದರು. ಯಾವುದೇ ಕೇಸಿನ ಕುರಿತು ನಮ್ಮನ್ನು ವಿಚಾರಣೆ ಮಾಡಬಹುದು ಎಂದು ಆ ನಾಲ್ವರು ಸಿಬ್ಬಂದಿ ಭಯಗೊಂಡಿದ್ದರು. ಆದರೆ, ಅಲ್ಲಿ ಆಗಿದ್ದೇ ಬೇರೆ. ಯಾರ ಕೈಯಲ್ಲಿ ಹಣವಿದೆ ಎಂಬುದನ್ನು ಸುಲಭವಾಗಿ ಕಂಡುಹಿಡಿದ ದರೋಡೆಕೋರರು ಸಿನಿಮೀಯ ಶೈಲಿಯಲ್ಲಿ ಆ ಹಣವನ್ನು ಕಸಿದುಕೊಂಡು ತಮ್ಮ ವಾಹನದಲ್ಲಿ ಪರಾರಿಯಾಗಿದ್ದಾರೆ.

ಈ ಘಟನೆಯ ಬಗ್ಗೆ ಕೊರಿಯರ್ ಕಂಪನಿಯ ಉದ್ಯೋಗಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ನೀಡಿದ ಮಾಹಿತಿಯ ಆಧಾರದಲ್ಲಿ ಆರೋಪಿಗಳ ರೇಖಾಚಿತ್ರ ಬಿಡಿಸಲಾಗಿದೆ. ಖತರ್ನಾಕ್ ಕಳ್ಳರನ್ನು ಬಂಧಿಸಲು ಪೊಲೀಸರ ತಂಡವೂ ರಚನೆಯಾಗಿದೆ.

ಇದನ್ನೂ ಓದಿ: Shocking News: 1 ಕೋಟಿ ರೂ. ಕೊಡದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ; 11 ವರ್ಷದ ಮಗಳಿಂದಲೇ ಅಪ್ಪನಿಗೆ ಬ್ಲಾಕ್​ಮೇಲ್!

Crime News: ಅಕ್ರಮ ಸಂಬಂಧ ತಂದ ಕಂಟಕ; ಹೆಂಡತಿಯ ಪ್ರಿಯಕರನ ಗುಪ್ತಾಂಗಕ್ಕೆ ಶೂಟ್ ಮಾಡಿದ ಗಂಡ!

(Shocking Crime: Robbers Posing as Police stopped bus and Loot Rs 1.2 crore from courier service staff in Pune)

Published On - 4:19 pm, Thu, 5 August 21