AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಮನೆ ಕೆಲಸದವನಿಂದಲೇ 10 ತಿಂಗಳ ಮಗು ಮೇಲೆ ಅತ್ಯಾಚಾರ!

Crime News Today: ಸಾದತ್‌ಗಂಜ್‌ನಲ್ಲಿ 10 ತಿಂಗಳ ಹೆಣ್ಣು ಮಗುವಿನ ಮೇಲೆ ಮನೆಗೆಲಸದವನು ಅತ್ಯಾಚಾರವೆಸಗಿದ್ದಾನೆ. ಮಗುವಿನ ಗುಪ್ತಾಂಗ, ಜನನಾಂಗಗಳಿಗೆ ಹಾನಿ ಮಾಡಿದ್ದರಿಂದ ಮಗುವಿನ ಸ್ಥಿತಿ ಗಂಭೀರವಾಗಿದೆ.

Shocking News: ಮನೆ ಕೆಲಸದವನಿಂದಲೇ 10 ತಿಂಗಳ ಮಗು ಮೇಲೆ ಅತ್ಯಾಚಾರ!
ಸಾಂಕೇತಿಕ ಚಿತ್ರ
TV9 Web
| Edited By: |

Updated on:Nov 16, 2021 | 5:34 PM

Share

ಲಕ್ನೋ: ತೊಟ್ಟಿಲಲ್ಲಿ ಮಲಗಿಕೊಂಡು ಆಟವಾಡುತ್ತಿದ್ದ ಮಗುವಿನ ಮೇಲೂ ಲೈಂಗಿಕ ದೌರ್ಜನ್ಯ (Sexual Harassment) ನಡೆಸುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಉತ್ತರ ಪ್ರದೇಶದಲ್ಲಿ (Uttar Pradesh) ಕೇವಲ 10 ತಿಂಗಳ ಹಸುಗೂಸಿನ ಮೇಲೆ ಮನೆ ಕೆಲಸದವನು ಅತ್ಯಾಚಾರ (Rape) ನಡೆಸಿರುವ ಅಮಾನವೀಯ ಹಾಗೂ ಆಘಾತಕಾರಿ ಘಟನೆ ನಡೆದಿದೆ. ಆ ಮಗುವಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದ್ದು, ಮಗುವಿನ ಗುಪ್ತಾಂಗಕ್ಕೆ ಭಾರೀ ಗಾಯಗಳಾಗಿವೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅನಾಗರಿಕ ಅಪರಾಧದ ಮತ್ತೊಂದು ಆಘಾತಕಾರಿ ಘಟನೆ ಲಕ್ನೋದಲ್ಲಿ ನಡೆದಿದ್ದು, ಸಾದತ್‌ಗಂಜ್‌ನಲ್ಲಿ 10 ತಿಂಗಳ ಹೆಣ್ಣು ಮಗುವಿನ ಮೇಲೆ ಮನೆಗೆಲಸದವನು ಅತ್ಯಾಚಾರವೆಸಗಿದ್ದಾನೆ. ಆ ಶಿಶುವನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಪೀಡಿಯಾಟ್ರಿಕ್ ಸರ್ಜರಿ ವಿಭಾಗಕ್ಕೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ, ಮಗುವಿನ ಗುಪ್ತಾಂಗ, ಜನನಾಂಗಗಳಿಗೆ ಹಾನಿ ಮಾಡಿದ್ದರಿಂದ ಮಗು ತೀವ್ರವಾಗಿ ಗಾಯಗೊಂಡಿದೆ.

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, ಮನೆಯಲ್ಲಿ ಕೆಲಸ ಮಾಡುತ್ತಿದ್ದ 18 ವರ್ಷದ ಸನ್ನಿ ಕುಮಾರ್ ಎಂಬ ಹುಡುಗ ಆ ಮನೆಯಲ್ಲಿದ್ದ 10 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಭಾನುವಾರ ಆ ಮಗುವಿನ ತಾಯಿ ತನ್ನ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬೆಡ್​ ರೂಂನಲ್ಲಿ ಮಗು ಅಳುತ್ತಿರುವುದನ್ನು ಕೇಳಿ ರೂಮಿನೊಳಗೆ ಹೋಗಿ ನೋಡಿದಳು.

ಆಗ ಆ ಬೆಡ್​ ರೂಮಿನಲ್ಲಿ ಸನ್ನಿ ಕುಮಾರ್​ ಬಟ್ಟೆಯನ್ನು ಅರೆಬರೆ ಬಿಚ್ಚಿಕೊಂಡು ನಿಂತಿದ್ದ. ಇದನ್ನು ನೋಡಿ ಆತಂಕಗೊಂಡ ಆಕೆ ಅವನನ್ನು ಹಿಡಿಯಲು ನೋಡಿದಳು. ಆದರೆ, ಆತ ಅಲ್ಲಿಂದ ಪರಾರಿಯಾದ. ತೊಟ್ಟಿಲಲ್ಲಿ ಮಲಗಿದ್ದ ಮಗುವಿನ ಯೋನಿಯಲ್ಲಿ ರಕ್ತ ಸುರಿಯುತ್ತಿತ್ತು. ಮಗು ಅರೆಪ್ರಜ್ಞಾವಸ್ಥ ಸ್ಥಿತಿಯಲ್ಲಿತ್ತು. ಇದನ್ನು ನೋಡಿದ ಆಕೆ ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬುದು ಗೊತ್ತಾಯಿತು.

ಆ ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಸೋಮವಾರ ಸಾದತ್‌ಗಂಜ್‌ನಿಂದ ಬಂಧಿಸಿದ್ದಾರೆ. ಆತನ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆ ಮಗುವಿಗೆ ಆಪರೇಷನ್ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Gang Rape: ಸಾಮೂಹಿಕ ಅತ್ಯಾಚಾರ ಪ್ರಕರಣ; ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿಗೆ ಜೀವಾವಧಿ ಶಿಕ್ಷೆ

Rape Case: ಆಟವಾಡುತ್ತಿದ್ದ 6 ವರ್ಷದ ಮಗುವಿನ ಮೇಲೆ ಕಾಮುಕನಿಂದ ಅತ್ಯಾಚಾರ; ಬಾಲಕಿ ಸ್ಥಿತಿ ಗಂಭೀರ

Published On - 5:28 pm, Tue, 16 November 21