ಬೆಂಗಳೂರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್!
ಕಾರು ಬಿಟ್ಟು ಸರ್ವಿಸ್ ರಸ್ತೆಯಲ್ಲಿ ಮೃತ ಶ್ರೀಧರ್ ಓಡಿದ್ದರು. ಆದರೆ ದುಷ್ಕರ್ಮಿಗಳು ಬೆನ್ನತ್ತಿ ಹತ್ಯೆಗೈದಿದ್ದಾರೆ. ಈ ಬಗ್ಗೆ ಹೆಣ್ಣೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಬೆಂಗಳೂರು: ರಾಮಮೂರ್ತಿನಗರ, ಹೆಣ್ಣೂರು ನಡುವಿನ ರೈಲ್ವೆ ಬ್ರಿಡ್ಜ್ ಬಳಿ ಕೊಲೆ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ರಿಕವರಿಗೆ ಹೋಗಿದ್ದ ವೇಳೆ ಆರೋಪಿ ರಘು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ರಘು ಮೇಲೆ ಬೆಂಗಳೂರಿನ ಹೆಣ್ಣೂರು ಠಾಣೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ನವೆಂಬರ್ 12ರಂದು ಆರೋಪಿ ರಘು ಶ್ರೀಧರ್ ಎಂಬುವವರನ್ನು ಕೊಲೆಮಾಡಿದ್ದ. ಗ್ಯಾಂಗ್ ಸಮೇತ ಬಂದು ಬಾಣಸವಾಡಿಯ ರಾಮಸ್ವಾಮಿಪಾಳ್ಯ ನಿವಾಸಿ ಶ್ರೀಧರ್ನ ಹತ್ಯೆಗೈದಿದ್ದ. ಕೊಲೆಯಾದ ಶ್ರೀಧರ್ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ಮುಕ್ತ ಎಂಬ ಸಂಘಟನೆಯ ಉಪಾಧ್ಯಕ್ಷನಾಗಿದ್ದರು. ರಿಂಗ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಬಂದಿದ್ದ ಗುಂಪು ಶ್ರೀಧರ್ನ ಕೊಲೆ ಮಾಡಿದ್ದರು.
ಕಾರು ಬಿಟ್ಟು ಸರ್ವಿಸ್ ರಸ್ತೆಯಲ್ಲಿ ಮೃತ ಶ್ರೀಧರ್ ಓಡಿದ್ದರು. ಆದರೆ ದುಷ್ಕರ್ಮಿಗಳು ಬೆನ್ನತ್ತಿ ಹತ್ಯೆಗೈದಿದ್ದಾರೆ. ಈ ಬಗ್ಗೆ ಹೆಣ್ಣೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ರಿಕವರಿಗೆ ಹೋಗಿದ್ದ ವೇಳೆ ಆರೋಪಿ ರಘು ಪಿಎಸ್ಐ ನಿಂಗರಾಜು ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಬಳಿಕ ಇನ್ಸ್ಪೆಕ್ಟರ್ ಮೇಲೂ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆತ್ಮರಕ್ಷಣೆಗೆಂದು ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಪೊಲೀಸರು ಕೊಲೆ ಪ್ರಕರಣದಲ್ಲಿ ಒಟ್ಟು 6 ಮಂದಿ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಹೇಶ್, ಹರೀಶ್, ಸುಜೀತ್ ನಾಯರ್, ಪ್ರಭು, ನೆಲ್ಸನ್ ಸೇರಿ ರಘುನನ್ನ ಬಂಧಿಸಲಾಗಿದೆ. ಹಳೆ ಹಾಗೂ ವೈಯಕ್ತಿಕ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಶ್ರೀಧರ್ ಕೊಲೆ ಪ್ರಕರಣದ ಆರೋಪಿಯನ್ನ ದಸ್ತಗಿರಿ ಮಾಡಲಾಗಿದೆ. ಈ ವೇಳೆ ಕೃತ್ಯಕ್ಕೆ ಬಳಸಿದ್ದ ಆಯುಧವನ್ನ ಜಪ್ತಿ ಮಾಡಲು ಹೆಣ್ಣೂರು ಪಿಎಸ್ಐ ಸ್ಥಳಕ್ಕೆ ಕರೆತಂದಿದ್ದಾರೆ. ಆಗ ಆರೋಪಿ ರಘು ಕೃತ್ಯಕ್ಕೆ ಬಳಸಿದ್ದ ಆಯುಧದಿಂದ ಪಿಎಸ್ಐ ಲಿಂಗರಾಜ್ ಮೇಲೆ ಹಲ್ಲೆ ಮಾಡಿದ್ದಾನೆ. ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ವಸಂತ್ ಕುಮಾರ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರು ಸಹ ಆರೋಪಿ ಮತ್ತೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ಹಿನ್ನಲೆ ಇನ್ಸ್ಪೆಕ್ಟರ್ ವಸಂತ್ ರಘು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಅಂತ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ
ಕೋಲಾರ: ಭಾರೀ ಮಳೆಗೆ ಕೊಳೆಯುತ್ತಿರುವ ಹೂವಿನ ಬೆಳೆ; ರೈತರು ಕಂಗಾಲು
ತೀವ್ರ ಹೃದಯಾಘಾತ: ಜನ್ಮದಿನ ಪ್ರವಚನ ಮಾಡುತ್ತಲೇ ಜೀವ ಬಿಟ್ಟ ಸ್ವಾಮೀಜಿ, ಮೊಬೈಲ್ ನಲ್ಲಿ ಸೆರೆ
Published On - 12:02 pm, Tue, 16 November 21