AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೀವ್ರ ಹೃದಯಾಘಾತ: ಜನ್ಮದಿನ ಪ್ರವಚನ ಮಾಡುತ್ತಲೇ ಜೀವ ಬಿಟ್ಟ ಸ್ವಾಮೀಜಿ, ಮೊಬೈಲ್ ನಲ್ಲಿ ಸೆರೆ

heart attack: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದ ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ ಮಠದ ಸ್ವಾಮೀಜಿಯಾಗಿದ್ದರು. ನವೆಂಬರ್ 6ರಂದು ನಡೆದ ಘಟನೆ ತಡವಾಗಿ ಬಹಿರಂಗವಾಗಿದೆ. ಹುಟ್ಟು ಹಬ್ಬದ ದಿನವೇ ಪ್ರವಚನ ಹೇಳ್ತಾ ಹೇಳ್ತಾ ಭಕ್ತರ ಮುಂದೆ ಸ್ವಾಮೀಜಿ ಸಾವನ್ನಪ್ಪಿದ್ದಾರೆ.

ತೀವ್ರ ಹೃದಯಾಘಾತ: ಜನ್ಮದಿನ ಪ್ರವಚನ ಮಾಡುತ್ತಲೇ ಜೀವ ಬಿಟ್ಟ ಸ್ವಾಮೀಜಿ, ಮೊಬೈಲ್ ನಲ್ಲಿ ಸೆರೆ
ತೀವ್ರ ಹೃದಯಾಘಾತ: ಜನ್ಮದಿನ ಪ್ರವಚನ ಮಾಡುತ್ತಲೇ ಜೀವ ಬಿಟ್ಟ ಸ್ವಾಮೀಜಿ, ಮೊಬೈಲ್ ನಲ್ಲಿ ಸೆರೆ
TV9 Web
| Updated By: Digi Tech Desk|

Updated on:Nov 16, 2021 | 11:11 AM

Share

ಬೆಳಗಾವಿ: ಪ್ರವಚನ ಮಾಡುತ್ತಿರುವಾಗಲೇ, ತೀವ್ರ ಹೃದಯಾಘಾತವಾಗಿ ಸ್ವಾಮೀಜಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿ ನವೆಂಬರ್ 6 ರಂದು ತಮ್ಮದೇ ಹುಟ್ಟುಹಬ್ಬ ಆಚರಿಸಿ, ಆಶೀರ್ವಚನ ನೀಡುತ್ತಿದ್ದರು. ಸಂಗನಬಸವ ಮಹಾಸ್ವಾಮೀಜಿ (53) ಹೃದಯಾಘಾತಕ್ಕೆ ಬಲಿಯಾದವರು. ಇವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದ ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ ಮಠದ ಸ್ವಾಮೀಜಿಯಾಗಿದ್ದರು. ನವೆಂಬರ್ 6ರಂದು ನಡೆದ ಘಟನೆ ತಡವಾಗಿ ಬಹಿರಂಗವಾಗಿದೆ. ಹುಟ್ಟು ಹಬ್ಬದ ದಿನವೇ ಪ್ರವಚನ ಹೇಳ್ತಾ ಹೇಳ್ತಾ ಭಕ್ತರ ಮುಂದೆ ಸ್ವಾಮೀಜಿ ಸಾವನ್ನಪ್ಪಿದ್ದಾರೆ. ಸ್ವಾಮೀಜಿ ಅಸುನೀಗುವ ದೃಶ್ಯ ಭಕ್ತರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಸಹಕಾರಿ ಸಕ್ಕರೆ ಕಾರ್ಖಾನೆ ಬಂದ್; ಮನನೊಂದ ಕಾರ್ಮಿಕ ಆತ್ಮಹತ್ಯೆಗೆ ಶರಣು ಬಾಗಲಕೋಟೆ: ಎರಡು ವರ್ಷಗಳಿಂದ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚಲ್ಪಟ್ಟಿದ್ದು, ಕೆಲಸ ಕಳೆದುಕೊಂಡ ಕಾರ್ಮಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಗುಲಗಾಲಜಂಬಗಿ ಗ್ರಾಮದ ಹನಮಂತ ಚಿಚಖಂಡಿ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕಾರ್ಖಾನೆಯಲ್ಲಿ ದಿನಗೂಲಿ ನೌಕರನಾಗಿ ಹನಮಂತ ಕೆಲಸ ಮಾಡುತ್ತಿದ್ದರು. ಆದರೆ 2 ವರ್ಷಗಳಿಂದ ಕಾರ್ಖಾನೆ ನಷ್ಟದಿಂದ ಬಂದ್ ಆಗಿದೆ. ಕಾರ್ಖಾನೆ ಆರಂಭಿಸುವಂತೆ ಮುಧೋಳ ನಗರದಲ್ಲಿ 114 ದಿನಗಳಿಂದ ಕಾರ್ಮಿರು ಧರಣಿ ಕೂಡ ನಡೆಸುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ರೈತರು ಹಾಗೂ ಕಾರ್ಮಿಕರ ಹೆಸರಿನಲ್ಲಿ ಬ್ಯಾಂಕ್​ನಲ್ಲಿ ಸಾಲ ಕಾರ್ಖಾನೆ ಆಡಳಿತ ಮಂಡಳಿ ರೈತರು ಹಾಗೂ ಕಾರ್ಮಿಕರ ಹೆಸರಿನಲ್ಲಿ ಬ್ಯಾಂಕ್​ನಿಂದ 60 ಕೋಟಿ ರೂಪಾಯಿ ಸಾಲ ಎತ್ತಿದೆ. ಈಗ ಆತ್ಮಹತ್ಯೆ ಮಾಡಿಕೊಂಡಿರುವ ಕಾರ್ಮಿಕನ ಹೆಸರಿನಲ್ಲೂ ಆಡಳಿತ ಮಂಡಳಿ 8 ಲಕ್ಷ ರೂಪಾಯಿ ಸಾಲ ತೆಗೆದಿದೆ. ಇತ್ತ ಎರಡು ವರ್ಷಗಳಿಂದ ಉದ್ಯೋಗ ಇಲ್ಲದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹನಮಂತ ಚಿಚಖಂಡಿ ಇಂದು (ನವೆಂಬರ್ 16) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

(sanganabasava swamiji died due to heart attack while giving speech on his birthday in gokak taluk)

Published On - 10:00 am, Tue, 16 November 21