Shocking News: ಸಿಗರೇಟ್​ನಿಂದ ಸುಟ್ಟು, ಮಾಂಸ ತಿನ್ನಲು ಒತ್ತಾಯ; ಮತಾಂತರಕ್ಕೆ ಒಪ್ಪದ ಹೆಂಡತಿಗೆ ಗಂಡನಿಂದ ಚಿತ್ರಹಿಂಸೆ

ತನ್ನ ಪತಿ ಚಾಂದ್ ಮೊಹಮ್ಮದ್ ತನ್ನ ಧರ್ಮವನ್ನು ಮರೆಮಾಚಿ, ಹಿಂದೂ ಎಂದು ಹೇಳಿಕೊಂಡು ವಂಚನೆಯಿಂದ ಮದುವೆಯಾಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

Shocking News: ಸಿಗರೇಟ್​ನಿಂದ ಸುಟ್ಟು, ಮಾಂಸ ತಿನ್ನಲು ಒತ್ತಾಯ; ಮತಾಂತರಕ್ಕೆ ಒಪ್ಪದ ಹೆಂಡತಿಗೆ ಗಂಡನಿಂದ ಚಿತ್ರಹಿಂಸೆ
ಸಾಂದರ್ಭಿಕ ಚಿತ್ರ
Edited By:

Updated on: Jan 13, 2023 | 1:07 PM

ಲಕ್ನೋ: ಮುಸ್ಲಿಂ ಧರ್ಮದವನನ್ನು ಮದುವೆಯಾಗಿದ್ದ ಹಿಂದೂ ಯುವತಿಗೆ ಆಕೆಯ ಗಂಡ ಮತಾಂತರವಾಗಲು ಒತ್ತಾಯಿಸುತ್ತಿದ್ದ. ಅದಕ್ಕೆ ಆಕೆ ಒಪ್ಪದಿದ್ದಾಗ ಪ್ರತಿದಿನ ಹೊಡೆದು, ಸಿಗರೇಟ್​ನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿದ್ದ. ಅಲ್ಲದೆ, ಬಲವಂತವಾಗಿ ಆಕೆಗೆ ಮಾಂಸ ತಿನ್ನಿಸಲು ಪ್ರಯತ್ನಿಸುತ್ತಿದ್ದ. ಈ ಘಟನೆಯ ಬಗ್ಗೆ ಆ ಮಹಿಳೆಯೇ ತನ್ನ ಗಂಡನ ವಿರುದ್ಧ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶದ (Uttar Pradesh) ಲಕ್ನೋದಲ್ಲಿ ಈ ಘಟನೆ ನಡೆದಿದೆ.

ತನ್ನ ಪತಿ ಚಾಂದ್ ಮೊಹಮ್ಮದ್ ತನ್ನ ಧರ್ಮವನ್ನು ಮರೆಮಾಚಿ, ಹಿಂದೂ ಎಂದು ಹೇಳಿಕೊಂಡು ವಂಚನೆಯಿಂದ ಮದುವೆಯಾಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ತನ್ನ ಗಂಡ ಮೊಹಮ್ಮದ್​ನನ್ನು ಮದುವೆಯಾದ ಬಳಿಕ ಲಕ್ನೋದ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ಅಲ್ಲಿ ಆಕೆಗೆ ಆತ ಹಿಂದೂ ಅಲ್ಲ ಮುಸ್ಲಿಂ ಎಂಬುದು ಗೊತ್ತಾಯಿತು.

ಇದನ್ನೂ ಓದಿ: Shocking News: 8 ವರ್ಷದ ಬಾಲಕನ ಗುಪ್ತಾಂಗಕ್ಕೆ ದಾರ ಕಟ್ಟಿ ಚಿತ್ರಹಿಂಸೆ ನೀಡಿದ ವಿದ್ಯಾರ್ಥಿಗಳು!

ಆಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ನಿರಾಕರಿಸಿದಾಗ ಮೊಹಮ್ಮದ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಸಿಗರೇಟ್ ತುಂಡುಗಳಿಂದ ಸುಟ್ಟು ಹಾಕಿ, ಬಿಸಿ ಎಣ್ಣೆ ಸುರಿದಿದ್ದ ಎಂದು ಆ ಮಹಿಳೆ ಆರೋಪಿಸಿದ್ದಾರೆ. ತನ್ನ ವಿರುದ್ಧ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಮತ್ತು ಸಂಬಂಧಿಕರಿಂದ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆಕೆ ಹೇಳಿದ್ದಾಳೆ.

ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಯತ್ನ ಆರೋಪ; ಬೆಂಗಳೂರಿನಲ್ಲಿ ಆಂಧ್ರದ ಮೂವರ ವಿರುದ್ಧ ಎಫ್​ಐಆರ್ ದಾಖಲು

ಗಂಡನ ಚಿತ್ರಹಿಂಸೆ ತಾಳಲಾರದೆ ಆ ಮಹಿಳೆ ಮನೆಯಿಂದ ಓಡಿಹೋಗಿ ದೂರು ದಾಖಲಿಸಲು ಪ್ರಯತ್ನಿಸಿದಾಗ, ಆತ ಆಕೆಯನ್ನು ತಮ್ಮ ಕೋಣೆಯಲ್ಲಿ ಕೂಡಿಹಾಕಿ, ಬೀಗ ಹಾಕಿ ಥಳಿಸಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಆಕೆ 5 ತಿಂಗಳ ಗರ್ಭಿಣಿಯಾಗಿದ್ದಾಗ ಮೊಹಮ್ಮದ್ ಆಕೆಯ ಹೊಟ್ಟೆಯಲ್ಲಿ ಹೊಡೆದಿದ್ದರಿಂದ ಆಕೆಗೆ ಗರ್ಭಪಾತವಾಗಿತ್ತು ಎಂದು ಆಕೆ ಪೊಲೀಸರೆದುರು ಹೇಳಿಕೊಂಡಿದ್ದಾಳೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us