ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋದ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಫೋಟೋವೊಂದನ್ನು ಶೇರ್ ಮಾಡಿದ್ದು, ಆ ಫೋಟೋದಲ್ಲಿ ಚಲಿಸುವ ಕಾರಿನ ಕಿಟಕಿಯಲ್ಲಿ ಯುವತಿಯೊಬ್ಬಳು ಎಕೆ-47 ಹಿಡಿದು ಹೊರಗೆ ಇಣುಕುತ್ತಿರುವ ದೃಶ್ಯ ಸೆರೆಯಾಗಿದೆ. ಎಕೆ-47 ಹಿಡಿದ ಯುವತಿ ಫೋಟೋ ವೈರಲ್ ಆಗಿದ್ದು, ಆ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಈ ಪ್ರಕರಣವನ್ನು ವಿಚಾರಣೆ ನಡೆಸಲಾಗುತ್ತಿದೆ. ಎಸ್ಎಫ್ಪಿಡಿ ಸಿಬ್ಬಂದಿ ಆ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಾಗೇ, ಆ ಕಾರನ್ನು ಕೂಡ ಸೀಜ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದ್ದಾರೆ.
On 7/11/2021, During an illegal exhibition of speed event at Barneveld & McKinnon, a passenger leaned out of a Cadi holding an AK47; see photo. SFPD Traffic Company personnel worked up a case, and seized this particular vehicle today. @SFPD @sfmta_muni @SFPDPerea pic.twitter.com/4disQpzziY
— SFPDTrafficSafety (@SFTrafficSafety) August 5, 2021
ಯುವತಿಯೊಬ್ಬಳು ಎಕೆ-47 ಹಿಡಿದು ಕಿಟಕಿಯಿಂದ ಹೊರಗೆ ತೋರಿಸುತ್ತಿರುವ ಫೋಟೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಕೆ ಯಾವ ಉದ್ದೇಶಕ್ಕಾಗಿ ಈ ರೀತಿ ಮಾಡಿದಳು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
On 7/11/2021, During an illegal exhibition of speed event at Barneveld & McKinnon, a passenger leaned out of a Cadi holding an AK47; see photo. SFPD Traffic Company personnel worked up a case, and seized this particular vehicle today. @SFPD @sfmta_muni @SFPDPerea pic.twitter.com/4disQpzziY
— SFPDTrafficSafety (@SFTrafficSafety) August 5, 2021
ಅಮೆರಿಕದಲ್ಲಿ ಗುಂಡಿನ ದಾಳಿಯ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ರೀತಿ ಎಕೆ-47 ಹಿಡಿದು ಕುಳಿತಿರುವ ಯುವತಿಯ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿರುವುದು ಆತಂಕಕ್ಕೂ ಕಾರಣವಾಗಿದೆ.
This is why gun laws and infringing law biding citizens right to bear arms is stupid to try and do bc criminals do not follow the law. They will not follow the new gun laws. They will find a way just like with herion, fentanyl , human trafficking, all which is outlawed
— MattyB (@mattyboy740) August 5, 2021
ಸ್ಯಾನ್ಫ್ರಾನ್ಸಿಸ್ಕೋ ಒಂದರಲ್ಲೇ 2021ರ ಜನವರಿಯಿಂದ ಜೂನ್ವರೆಗೆ 119 ಶೂಟೌಟ್ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಈ ಅವಧಿಯಲ್ಲಿ 58 ಶೂಟೌಟ್ ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ: Viral Video: ಬೈಕ್ ಸವಾರನ ಜೊತೆ ಬಾಲಿವುಡ್ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ ಪೊಲೀಸ್; ವೈರಲ್ ವಿಡಿಯೋ ಇಲ್ಲಿದೆ
Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್ನಲ್ಲಿ ದರೋಡೆ!
(Shocking News United States Woman Leans Out of Moving Car Holding AK-47 in Viral Photo)